ಬೆಂಗಳೂರು : ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಹೆಚ್ಚಳದ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಬಹುತೇಕ ಪೂರ್ಣಗೊಂಡಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ಡಿಯರ್‌ನೆಸ್ ರಿಲೀಫ್ (ಡಿಆರ್) ಹೆಚ್ಚಳದ ಘೋಷಣೆ ಈ ತಿಂಗಳಿನಲ್ಲಿ ಹೊರಬೀಳುವುದು ಬಹುತೇಕ ಖಚಿತ. ಕಳೆದ ವರ್ಷ ಸೆಪ್ಟೆಂಬರ್ 28 ರಂದು ಸರ್ಕಾರವು ಜುಲೈ 2022ರ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿತ್ತು. ತುಟ್ಟಿಭತ್ಯೆಯಲ್ಲಿ ಶೇ. 4 ರಷ್ಟು ಹೆಚ್ಚಳವನ್ನು ಆ ಸಮಯದಲ್ಲಿ ಘೋಷಿಸಲಾಗಿತ್ತು. ಹಾಗಾಗಿ ಈ ವರ್ಷವೂ ನೌಕರರು ಸೆಪ್ಟೆಂಬರ್‌ನಿಂದಲೇ ಈ ಅಧಿಸೂಚನೆಗಾಗಿ ಕಾಯುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಕೇಂದ್ರ ಸರ್ಕಾರಿ ನೌಕರರು ಈ ತುಟ್ಟಿಭತ್ಯೆ ಹೆಚ್ಚಳದ ಹೊರತಾಗಿ ಮತ್ತೊಂದು ಒಳ್ಳೆಯ ಸುದ್ದಿಯ ನಿರೀಕ್ಷೆಯಲ್ಲಿದ್ದಾರೆ. ಅದೇ 8ನೇ ವೇತನ ಆಯೋಗದ ಕುರಿತ  ಅಧಿಸೂಚನೆ. ಈ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ 8ನೇ ವೇತನ ಆಯೋಗದ ರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ : Trading Tips: F&Oದಲ್ಲಿ ಹಣ ಹೂಡಿಕೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!


2016ರಿಂದ ಏಳನೇ ವೇತನ ಆಯೋಗ ಜಾರಿಗೆ : 
2013ರಲ್ಲಿ 7ನೇ ವೇತನ ಆಯೋಗದ ಪ್ರಸ್ತಾವನೆಯನ್ನು ಮಂಡಿಸಲಾಗಿತ್ತು. 2016 ರಲ್ಲಿ ಈ ವೇತನ ಆಯೋಗ ಜಾರಿಗೆ ಬಂದವು. ಇದು ಜಾರಿಗೆ ಬಂದ ನಂತರ, ನೌಕರರ ಭತ್ಯೆ, ವೇತನ ಮತ್ತು ಇತರ ಎಲ್ಲಾ ಪಾವತಿಗಳು ಏಳನೇ ವೇತನ ಆಯೋಗದ ಆಧಾರದಲ್ಲಿಯೇ ನಿರ್ಧಾರವಾಗುತ್ತದೆ. ಪ್ರಸ್ತುತ ನೌಕರರು 42 ಪ್ರತಿಶತ ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಜುಲೈ 1 ರಿಂದ ಸುಮಾರು ಒಂದು ಕೋಟಿ ಉದ್ಯೋಗಿಗಳು ಮತ್ತು ಪಿಂಚಣಿದಾರರು ತಮ್ಮ ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ನಡೆದ ರಾಷ್ಟ್ರೀಯ ಮಂಡಳಿ (ಜೆಸಿಎಂ) ಸಿಬ್ಬಂದಿ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿತ್ತು. ಉದ್ಯೋಗಿಗಳ ಡಿಎ ಶೇ.46ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಐಡಿಇಎಫ್ (ಅಖಿಲ ಭಾರತ ರಕ್ಷಣಾ ನೌಕರರ ಒಕ್ಕೂಟ) ಪ್ರಧಾನ ಕಾರ್ಯದರ್ಶಿ ಸಿ.ಶ್ರೀಕುಮಾರ್ ತಿಳಿಸಿದ್ದಾರೆ.


ವೇತನ ಆಯೋಗಗಳ ಪ್ರಕಾರಗಳ ಪ್ರಕಾರ, ಮುಂದಿನ ವೇತನ ಆಯೋಗದ ಶಿಫಾರಸುಗಳು 2026 ರಿಂದ ಜಾರಿಗೆ ಬರಬೇಕು. ಹಾಗಾಗಿ ಸರ್ಕಾರದ ಬಳಿ ಇನ್ನೂ ಸಾಕಷ್ಟು ಸಮಯವಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆಗೂ ಮುನ್ನ ಎಂಟನೇ ವೇತನ ಆಯೋಗವನ್ನು ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಹೆಚ್ಚುವರಿಯಾಗಿ, ಕೇಂದ್ರ ಸರ್ಕಾರವು ಜನವರಿ 2024 ರಲ್ಲಿ ಹೊಸ ವೇತನ ಆಯೋಗವನ್ನು ಘೋಷಿಸುವ ನಿರೀಕ್ಷೆಯಿದೆ. 


ಇದನ್ನೂ ಓದಿ : ಇಸ್ರೇಲ್ ಯುದ್ದ ಪರಿಣಾಮ : ಕೇವಲ 2 ದಿನಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆಯಾಗಿದ್ದು ಎಷ್ಟು ಗೊತ್ತಾ? 


ಸರ್ಕಾರದ ನಿಲುವೇನು? : 
ಈ ಮಧ್ಯೆ, ಎಂಟನೇ ವೇತನ ಆಯೋಗವನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ಈ ಬೇಡಿಕೆ ಬಗ್ಗೆ ಕೇಂದ್ರ ಮೋದಿ ಸರ್ಕಾರ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಕೇಂದ್ರ ಸರ್ಕಾರ ಎಂಟನೇ ವೇತನ ಆಯೋಗದ ಸೂತ್ರವನ್ನು ಸಿದ್ಧಪಡಿಸುವಲ್ಲಿ ನಿರತವಾಗಿದೆ ಎಂದು ಮೂಲಗಳು ತಿಳಿಸಿವೆ. 


ಈ ಸೂತ್ರದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಕೇಂದ್ರ ನೌಕರರ ವೇತನ ಹೆಚ್ಚಾಗಲಿದೆ. ಎಂಟನೇ ವೇತನ ಆಯೋಗದ ರಚನೆ ಕುರಿತು ಶೀಘ್ರದಲ್ಲೇ ದೊಡ್ಡ ಘೋಷಣೆ ಮಾಡಲು ಸರ್ಕಾರ ಸಜ್ಜಾಗಿದೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. ಸರ್ಕಾರ ಶೀಘ್ರದಲ್ಲೇ ಎಂಟನೇ ವೇತನ ಆಯೋಗವನ್ನು ಜಾರಿಗೆ ತರಬಹುದು ಎಂದು ಅಂದಾಜಿಸಲಾಗಿದೆ.


ಇದನ್ನೂ ಓದಿ : ಸರ್ಕಾರಿ ನೌಕರರ ಇದೇ ತಿಂಗಳ ವೇತನದೊಂದಿಗೆ ಖಾತೆ ಸೇರುವುದು ಡಿಎ ಅರಿಯರ್ಸ್ ! ಕೈ ಸೇರುವ ಒಟ್ಟು ವೇತನ ಎಷ್ಟು ಗೊತ್ತಾ ?


ಫಿಟ್ಮೆಂಟ್ ಅಂಶದಲ್ಲಿಯೂ ಹೆಚ್ಚಳ : 
ಕೇಂದ್ರ ಸರ್ಕಾರ 8ನೇ ವೇತನ ಆಯೋಗ ಜಾರಿಗೆ ತಂದರೆ ಫಿಟ್ ಮೆಂಟ್ ಅಂಶ ಹೆಚ್ಚಾಗಲಿದೆ. ಕೇಂದ್ರ ಉದ್ಯೋಗಿಗಳ ಸಂಬಳದಲ್ಲಿ ಫಿಟ್ಮೆಂಟ್ ಅಂಶವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಉದ್ಯೋಗಿಗಳ ಭತ್ಯೆಗಳ ಹೊರತಾಗಿ, ಅವರ ಮೂಲ ವೇತನವನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.


ಶೇ 44ರಷ್ಟು ಹೆಚ್ಚಳವಾಗುವುದು ಕೇಂದ್ರ ಸರ್ಕಾರಿ ನೌಕರರ ವೇತನ : 
8ನೇ ವೇತನ ಆಯೋಗ ಜಾರಿಯಾದರೆ ಅಥವಾ ಸರ್ಕಾರ ಶೇಕಡವಾರು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಿದರೆ, ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಾಗುತ್ತದೆ ಎಂಬುದನ್ನು ಉದಾಹರಣೆ ಸಹಿತ ಅರ್ಥಮಾಡಿಕೊಳ್ಳೋಣ. 
ಪ್ರಸ್ತುತ, ಕೇಂದ್ರ ಸರ್ಕಾರಿ ನೌಕರರು 2.57 ರಷ್ಟು ಫಿಟ್‌ಮೆಂಟ್ ಫ್ಯಾಕ್ಟರ್ ಪಡೆಯಲಿದ್ದಾರೆ. ಇದರ ಪ್ರಕಾರ ಕೇಂದ್ರ ನೌಕರರ ಕನಿಷ್ಠ ಮೂಲ ವೇತನ 18,000 ರೂ. ಆಗಿದೆ. ಫಿಟ್‌ಮೆಂಟ್  ಫಾಕ್ಟರ್ ಶೇಕಡಾ 3.68 ಕ್ಕೆ ಏರಿದರೆ, ಕನಿಷ್ಠ ಮೂಲ ವೇತನವು ಶೇಕಡಾ 44 ಕ್ಕಿಂತ ಹೆಚ್ಚಾಗಿ  18,000 ರಿಂದ 26,000 ಕ್ಕೆ ಏರುತ್ತದೆ.


ಇದನ್ನೂ ಓದಿ : ಈ ರಾಷ್ಟ್ರೀಯ ಬ್ಯಾಂಕ್ ವಿರುದ್ದ ಆರ್ ಬಿಐ ಕ್ರಮ ! ಲಕ್ಷಾಂತರ ಗ್ರಾಹಕರ ಮುಂದಿರುವ ಆಯ್ಕೆ ಏನು ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.