Update Aadhaar card details: ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್‌ಡೇಟ್‌ ಮಾಡಲು ಮಾರ್ಚ್ 14 ಕೊನೆಯ ದಿನವಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈ ಹಿಂದೆ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡುವ ದಿನಾಂಕವನ್ನು ವಿಸ್ತರಿಸಿತ್ತು. ದೇಶದ ನಾಗರಿಕರ ಬೇಡಿಕೆಯ ಆಧಾರದ ಮೇಲೆ, ಆಧಾರ್‌ ಅಪ್‌ಡೇಟ್‌ ಸೌಲಭ್ಯವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಇನ್ನೂ 3 ತಿಂಗಳು ಅಂದರೆ 2023ರ ಡಿಸೆಂಬರ್ 15ರಿಂದ 2024ರ ಮಾರ್ಚ್‌ 14ರವರೆಗೆ ಅವಕಾಶ ನೀಡಲಾಗುತ್ತಿದೆ. ನನ್ನ ಆಧಾರ್ ಪೋರ್ಟಲ್ ಮೂಲಕ ಡಾಕ್ಯುಮೆಂಟ್ ಅಪ್‌ಡೇಟ್‌ ಸೌಲಭ್ಯವು ಉಚಿತವಾಗಿ ಲಭ್ಯವಿರುತ್ತದೆ ಎಂದು ತಿಳಿಸಿತ್ತು.   


COMMERCIAL BREAK
SCROLL TO CONTINUE READING

UIDAIನ ವೆಬ್‌ಸೈಟ್‌ನಲ್ಲಿ ಹೆಸರು, ವಿಳಾಸ ಮತ್ತು ಇತರ ಬದಲಾವಣೆಗಳು ಸೇರಿದಂತೆ ವಿವರಗಳನ್ನು ಉಚಿತವಾಗಿ ಅಪ್‌ಡೇಟ್‌ ಮಾಡಬಹುದು. ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (CSC) ಇದನ್ನು ಭೌತಿಕವಾಗಿಯೂ ಮಾಡಬಹುದು. ಈ ಸೇವೆಯು myAadhaar ಪೋರ್ಟಲ್‌ನಲ್ಲಿ ಮಾತ್ರ ಉಚಿತವಾಗಿ ಲಭ್ಯವಿರುತ್ತದೆ. ಆದರೆ ಭೌತಿಕ ಕೇಂದ್ರಗಳಲ್ಲಿ 50 ರೂ. ಪಾವತಿಸಿ ನಿಮ್ಮ ಆಧಾರ್‌ ಅಪ್‌ಡೇಟ್‌ ಮಾಡಬಹುದು.
10 ವರ್ಷಗಳ ಹಿಂದೆ ಆಧಾರ್ ನೀಡಿದ್ದರೆ ಮತ್ತು ನಂತರ ಅಪ್‌ಡೇಟ್‌ ಮಾಡದಿದ್ದರೆ ಅವರ ಜನಸಂಖ್ಯಾ ವಿವರಗಳನ್ನು ಮರುಮೌಲ್ಯಮಾಪನ ಮಾಡಲು ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ (PoI/PoA) ದಾಖಲೆಗಳನ್ನು ಅಪ್‌ಲೋಡ್ ಮಾಡುವಂತೆ ಆಧಾರ್ ಸಂಸ್ಥೆಯು ಜನರಿಗೆ ಸಲಹೆ ನೀಡಿದೆ. 


ಇದನ್ನೂ ಓದಿ: Personal Loan: ಪರ್ಸನಲ್ ಲೋನ್ ತೆಗೆದುಕೊಳ್ಳುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ..!


ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್‌ ಮಾಡುವುದು ಹೇಗೆ?


  1. ಆಧಾರ್‌ ಸಂಸ್ಥೆ ಅಧಿಕೃತ ವೆಬ್‌ಸೈಟ್‌ https://myaadhaar.uidai.gov.in/ಗೆ ಲಾಗಿನ್‌ ಆಗಿ.

  2. 'Proceed to update address' ಆಯ್ಕೆಯನ್ನು ಕ್ಲಿಕ್‌ ಮಾಡಿ.

  3. ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒನ್‌ ಪಾರ್ಟ್‌ ಪಾಸ್‌ವರ್ಡ್ (OTP) ನಮೂದಿಸಿ.

  4. 'ಡಾಕ್ಯುಮೆಂಟ್ ಅಪ್‌ಡೇಟ್' ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ವಿವರಗಳನ್ನು ಪ್ರದರ್ಶಿಸಲಾಗುತ್ತದೆ.

  5. ವಿವರಗಳನ್ನು ಪರಿಶೀಲಿಸಿ ಮತ್ತು ಮುಂದಿನ ಹೈಪರ್ಲಿಂಕ್ ಅನ್ನು ಕ್ಲಿಕ್ ಮಾಡಿ.

  6. ಡ್ರಾಪ್‌ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ಆಯ್ಕೆಮಾಡಿ.

  7. ವಿಳಾಸ ಪುರಾವೆಯನ್ನು ಅಪ್‌ಲೋಡ್ ಮಾಡಿ.

  8. 'Submit' ಬಟನ್ ಆಯ್ಕೆಮಾಡಿ ಮತ್ತು ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.

  9. 14-ಅಂಕಿಯ ನವೀಕರಣ ವಿನಂತಿ ಸಂಖ್ಯೆ (URN) ರಚಿಸಿದ ನಂತರ Update ವಿನಂತಿಯನ್ನು ಸ್ವೀಕರಿಸಲಾಗುತ್ತದೆ.


ವಿಳಾಸ ಪುರಾವೆ(address proof)ಯನ್ನು ಅಪ್‌ಲೋಡ್ ಮಾಡುವುದು ಹೇಗೆ?


  1. https://myaadhaar.uidai.gov.in/ಗೆ ಭೇಟಿ ನೀಡಿ

  2. ಲಾಗಿನ್ ಮಾಡಿ ಮತ್ತು “Name/Gender/Date of Birth & Address Update” ಆಯ್ಕೆಮಾಡಿ, ನಂತರ “Update Aadhaar Online” ಕ್ಲಿಕ್ ಮಾಡಿ.

  3. 'Address' ಆಯ್ಕೆಮಾಡಿ ಮತ್ತು 'Proceed to Update Aadhaar' ಕ್ಲಿಕ್ ಮಾಡಿ.

  4. ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ ಮತ್ತು ಅಗತ್ಯವಿರುವ demographic ಮಾಹಿತಿಯನ್ನು ನಮೂದಿಸಿ.


ಇದನ್ನೂ ಓದಿ: Internet Banking ಗಾಗಿ ಬರಲಿದೆ ಹೊಸ ವ್ಯವಸ್ಥೆ, ಆರ್ಬಿಐನಿಂದ ಮಹತ್ವದ ಘೋಷಣೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.