Gold Loan ನೀಡುವುದಕ್ಕೆ ಈ ಹೆಸರಾಂತ ಸಂಸ್ಥೆಗೆ RBI ತಡೆ ! ನೀವೂ ಇಲ್ಲಿ ಬಂಗಾರ ಅಡವಿಟ್ಟಿದ್ದರೆ ಏನು ಮಾಡಬೇಕು?

IIFL Finance Gold Loan News: ಚಿನ್ನದ ಮೇಲೆ ಸಾಲ ನೀಡುವ ಕಂಪನಿಯಾದ IIFL ಫೈನಾನ್ಸ್ ಲಿಮಿಟೆಡ್ ವಿರುದ್ದ ರಿಸರ್ವ್ ಬ್ಯಾಂಕ್ ಕ್ರಮ ಕೈಗೊಂಡಿದೆ. ಚಿನ್ನದ ಮೇಲೆ ಸಾಲ ನೀಡುವ ಹಕ್ಕನ್ನು ತಡೆ ಹಿಡಿಯಲಾಗಿದೆ.  

Written by - Ranjitha R K | Last Updated : Mar 5, 2024, 11:53 AM IST
  • ಚಿನ್ನದ ಮೇಲೆ ಸಾಲ ನೀಡುವ ಕಂಪನಿ ವಿರುದ್ದ ಕ್ರಮ
  • ಚಿನ್ನ ಮೇಲೆ ಸಾಲ ನೀಡುವ ಪ್ರಕ್ರಿಯೆಗೆ ತಡೆ
  • ಹಣಕಾಸು ಸಂಸ್ಥೆ ವಿರುದ್ದ ಆರ್ ಬಿಸಿ ಕ್ರಮ
Gold Loan ನೀಡುವುದಕ್ಕೆ ಈ ಹೆಸರಾಂತ ಸಂಸ್ಥೆಗೆ RBI  ತಡೆ ! ನೀವೂ ಇಲ್ಲಿ ಬಂಗಾರ ಅಡವಿಟ್ಟಿದ್ದರೆ ಏನು ಮಾಡಬೇಕು?   title=

IIFL Finance Gold Loan News : ಹಣಕಾಸಿನ ಸಮಸ್ಯೆ ಎದುರಾದಾಗ ಎಲ್ಲಿಯೂ ಹಣದ ವ್ಯವಸ್ಥೆ ಆಗದೇ ಹೋದಾಗ ಸಾಮಾನ್ಯವಾಗಿ ಜನರು ಮೊರೆ ಹೋಗುವುದು ಚಿನ್ನದ ಮೇಲಿನ ಸಾಲವನ್ನು. ಅಂದರೆ ಬ್ಯಾಂಕ್, ಫೈನಾನ್ಸ್ ಗಳಲ್ಲಿ ಚಿನ್ನವನ್ನು ಅಡವಿಟ್ಟು, ನಮ್ಮ ಚಿನ್ನದ ತೂಕಕ್ಕೆ ಅನುಸಾರವಾಗಿ ಎಷ್ಟು ಹಣ ಸಿಗುತ್ತದೆಯೋ ಅದನ್ನು ಸಾಲವಾಗಿ ಪಡೆಯುವುದು. ಈ ಸಾಲಕ್ಕೆ ಇಂತಿಷ್ಟು ಬಡ್ಡಿದರವನ್ನು ನಿಗದಿ ಮಾಡಲಾಗುತ್ತದೆ. ನಂತರ ನಮ್ಮ ಬಳಿ ಹಣದ ವ್ಯವಸ್ಥೆ ಆದಾಗ ಸಾಲದ ಮೊತ್ತವನ್ನು ಕಟ್ಟಿ ಅಡವಿಟ್ಟ ಚಿನ್ನವನ್ನು ಬಿಡಿಸಿಕೊಳ್ಳಬಹುದು. ಪ್ರಸ್ತುತ, ಅನೇಕ ಕಂಪನಿಗಳು ಮತ್ತು ಬ್ಯಾಂಕ್‌ಗಳು ಚಿನ್ನದ ಮೇಲೆ ಸಾಲವನ್ನು ಒದಗಿಸುತ್ತವೆ. ಇದೀಗ ಆರ್‌ಬಿಐ ಚಿನ್ನದ ಸಾಲ ನೀಡುವ ಕಂಪನಿ ವಿರುದ್ಧ ಮಹತ್ವದ ಕ್ರಮ ಕೈಗೊಂಡಿದೆ. 

ಚಿನ್ನದ ಮೇಲೆ ಸಾಲ ನೀಡುವ ಕಂಪನಿಯಾದ IIFL ಫೈನಾನ್ಸ್ ಲಿಮಿಟೆಡ್ ವಿರುದ್ದ ರಿಸರ್ವ್ ಬ್ಯಾಂಕ್ ಕ್ರಮ ಕೈಗೊಂಡಿದೆ. ಚಿನ್ನದ ಮೇಲೆ ಸಾಲ ನೀಡುವ ಹಕ್ಕನ್ನು ತಡೆ ಹಿಡಿಯಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಚಿನ್ನದ ಮೇಲೆ ಸಾಲ ನೀಡುವುದನ್ನು ಆರ್‌ಬಿಐ  ನಿಷೇಧಿಸಿದೆ. ಚಿನ್ನದ ಪರಿಶುದ್ಧತೆಯ ಪರೀಕ್ಷೆ ಮತ್ತು ಪರಿಶೀಲನೆಯಲ್ಲಿ ಗಂಭೀರ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಈ ನಿರ್ಧಾರ ಕೈಗೊಂಡಿದೆ. 

ಇದನ್ನೂ ಓದಿ : Post Office RD: ಪೋಸ್ಟ್ ಆಫೀಸ್ ಆರ್‌ಡಿ ಮಾಡಿಸುವಾಗ ಈ ಪ್ರಮುಖ ವಿಷಯಗಳ ಬಗ್ಗೆ ಇರಲಿ ವಿಶೇಷ ಗಮನ

ಚಿನ್ನದ ಮೇಲಿನ ಸಾಲಕ್ಕೆ ಮಾತ್ರ ಅನ್ವಯ : 
ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಈ ಸೂಚನೆಯು ಕಂಪನಿಯ ಚಿನ್ನದ ಮೇಲಿನ ಸಾಲ ನೀಡುವ ವ್ಯವಹಾರಕ್ಕೆ ಮಾತ್ರ ಸಂಬಂಧಿಸಿದೆ. ಪ್ರಮುಖ ಹಣಕಾಸು ಸೇವಾ ಪೂರೈಕೆದಾರ IIFL ಫೈನಾನ್ಸ್ ತನ್ನ ಗ್ರಾಹಕರಿಗೆ ವಿವಿಧ ರೀತಿಯ ಸಾಲ ಮತ್ತು ಅಡಮಾನ ಸಾಲ ಸೌಲಭ್ಯಗಳನ್ನು ಒದಗಿಸುತ್ತದೆ. 

ಅಸ್ತಿತ್ವದಲ್ಲಿರುವ ಸಾಲದ ವಸೂಲಾತಿ ಮುಂದುವರಿಯುತ್ತದೆ : 
IIFL ಫೈನಾನ್ಸ್ ತನ್ನ ಅಸ್ತಿತ್ವದಲ್ಲಿರುವ ಚಿನ್ನದ ಸಾಲದ ವ್ಯವಹಾರವನ್ನು ಮುಂದುವರಿಸಬಹುದು. ಅಸ್ತಿತ್ವದಲ್ಲಿರುವ ಸಾಲದ ಸಂಗ್ರಹಣೆ ಮತ್ತು ಮರುಪಡೆಯುವಿಕೆ ಪ್ರಕ್ರಿಯೆಯನ್ನು ಮುಂದುವರಿಸಬಹುದು ಎಂದು RBI ಹೇಳಿದೆ.

ಆರ್‌ಬಿಐ ಹೇಳಿದ್ದೇನು ? : 
ಆರ್‌ಬಿಐ ಐಐಎಫ್‌ಎಲ್ ಫೈನಾನ್ಸ್ ಲಿಮಿಟೆಡ್‌ಗೆ ಚಿನ್ನದ ಸಾಲಗಳನ್ನು ಮಂಜೂರು ಮಾಡುವುದನ್ನು ಅಥವಾ ವಿತರಿಸುವುದನ್ನು ಅಥವಾ ಅದರ ಯಾವುದೇ ಚಿನ್ನದ ಸಾಲವನ್ನು ತಕ್ಷಣವೇ ಜಾರಿಗೆ ಬರುವಂತೆ ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ನಿರ್ದೇಶಿಸಿದೆ. ಮಾರ್ಚ್ 31, 2023 ರಂತೆ IIFL ನ ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಿ ಕಂಪನಿಯನ್ನು ಪರಿಶೀಲಿಸಲಾಗಿದೆ ಎಂದು RBI ಹೇಳಿದೆ. ಕಂಪನಿಯ ಚಿನ್ನದ ಸಾಲದ ವ್ಯವಹಾರದಲ್ಲಿ ಕೆಲವು ಗಮನಾರ್ಹ  ದೋಷಗಳು ಕಂಡುಬಂದಿವೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಇವುಗಳಲ್ಲಿ ಲೋನ್ ಮಂಜೂರಾತಿ ಸಮಯದಲ್ಲಿ ಮತ್ತು ಡೀಫಾಲ್ಟ್ ಹರಾಜಿನ ಸಮಯದಲ್ಲಿ ಚಿನ್ನದ ಶುದ್ಧತೆ ಮತ್ತು ನಿವ್ವಳ ತೂಕವನ್ನು ಪರೀಕ್ಷಿಸುವ ಸಮಯದಲ್ಲಿನ ಸಮಸ್ಯೆಗಳು ಸೇರಿವೆ.

ಇದನ್ನೂ ಓದಿ : Gold Silver Price Today :ಸತತ ಎರಡನೇ ದಿನವೂ ಅಗ್ಗವಾದ ಚಿನ್ನ : ಬಂಗಾರದ ಖರೀದಿಗೆ ಇದುವೇ ಸರಿಯಾದ ಸಮಯ

ಹಲವು ಬಾರಿ ದೂರು ನೀಡಿದರೂ ಯಾವುದೇ ಸುಧಾರಣೆ ಆಗಿಲ್ಲ : 
ಕಳೆದ ಕೆಲವು ತಿಂಗಳುಗಳಲ್ಲಿ ಕಂಪನಿಯ ಹಿರಿಯ ನಿರ್ವಹಣೆ ಮತ್ತು ಲೆಕ್ಕಪರಿಶೋಧಕರೊಂದಿಗೆ ಈ ನ್ಯೂನತೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಆದರೂ ಯಾವುದೇ ಸುಧಾರಣೆ ಕಂಡುಬಾರದ ಕಾರಣ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಗ್ರಾಹಕರ ಹಿತದೃಷ್ಟಿಯಿಂದ, ತಕ್ಷಣವೇ ಜಾರಿಗೆ ಬರುವಂತೆ ನಿಷೇಧವನ್ನು ಹೇರುವುದು ಅನಿವಾರ್ಯವಾಯಿತು ಎದ್ನು ಆರ್ ಬಿಐ ಹೇಳಿದೆ. 

ಕಂಪನಿಯ ವ್ಯವಹಾರ ಏನು? : 
ಐಐಎಫ್ಎಲ್ ಫೈನಾನ್ಸ್ ಹಣಕಾಸು ಸೇವಾ ವಲಯದ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ಇದು ತನ್ನ ಅಂಗಸಂಸ್ಥೆ ಕಂಪನಿಗಳೊಂದಿಗೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸುತ್ತದೆ - IIFL ಹೋಮ್ ಫೈನಾನ್ಸ್, IIFL ಸಮಸ್ತ್ ಫೈನಾನ್ಸ್ ಲಿಮಿಟೆಡ್ ಮತ್ತು IIFL ಓಪನ್ ಫಿನ್ಟೆಕ್ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ. ಇದು 500 ಕ್ಕೂ ಹೆಚ್ಚು ನಗರಗಳಲ್ಲಿ 2,600 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News