7th Pay Commission Salary Hike : ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ ಇದು. ಈ ತಿಂಗಳಲ್ಲೇ ಸರ್ಕಾರಿ ನೌಕರರ ಭತ್ಯೆ ಹೆಚ್ಚಳ ಘೋಷಣೆ ಮಾಡಲು ಸರ್ಕಾರ ಸಜ್ಜಾಗಿದೆ. ತುಟ್ಟಿಭತ್ಯೆ ಹೆಚ್ಚಳದ ಹೊರತಾಗಿ, ನೌಕರರು ಜನವರಿಯಿಂದ ಮಾರ್ಚ್ ವರೆಗೆ ಡಿಎ ಬಾಕಿಯನ್ನು ಕೂಡಾ ಪಡೆಯುತ್ತಾರೆ. ಈ ಕಾರಣದಿಂದಾಗಿ, ನೌಕರರು ಈ ತಿಂಗಳ ವೇತನದಲ್ಲಿ ದೊಡ್ಡ ಮೊತ್ತವನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ಕೇಂದ್ರ ಸರ್ಕಾರಿ ನೌಕರರ ಈ ತಿಂಗಳ ವೇತನ ಸಿಗುತ್ತಿದ್ದಂತೆಯೇ ಮೂಲ ವೇತನ, ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಮತ್ತು ಪ್ರಯಾಣ ಭತ್ಯೆ (ಟಿಎ) ಹೆಚ್ಚಾಗಿದೆಯೇ ಎನ್ನುವುದು ಪರಿಶೀಲಿಸಿಕೊಳ್ಳುವುದು ಒಳ್ಳೆಯದು.
ಇದನ್ನೂ ಓದಿ : Gold Loan ನೀಡುವುದಕ್ಕೆ ಈ ಹೆಸರಾಂತ ಸಂಸ್ಥೆಗೆ RBI ತಡೆ ! ನೀವೂ ಇಲ್ಲಿ ಬಂಗಾರ ಅಡವಿಟ್ಟಿದ್ದರೆ ಏನು ಮಾಡಬೇಕು?
ಡಿಎ ಹೆಚ್ಚಳವನ್ನು AICPI ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಜೂನ್ 2023ರಿಂದ ಡಿಸೆಂಬರ್ 2023 ರವರೆಗಿನ ಸೂಚ್ಯಂಕದ ಆಧಾರದ ಮೇಲೆ ತುಟ್ಟಿಭತ್ಯೆ ಶೇಕಡಾ ನಾಲ್ಕು ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 46% ತುಟ್ಟಿಭತ್ಯೆ ಪಡೆಯುತ್ತಿದ್ದಾರೆ.ಇದರಲ್ಲಿ ಶೇ.4ರಷ್ಟು ಹೆಚ್ಚಳವಾದರೆ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.50ಕ್ಕೆ ಏರಿಕೆಯಾಗಲಿದೆ.
ಮಾರ್ಚ್ ತಿಂಗಳ ಭತ್ಯೆ ಜತೆಗೆ ಜನವರಿ ಮತ್ತು ಫೆಬ್ರವರಿ ತಿಂಗಳ ಬಾಕಿ ಡಿಎ ಕೂಡಾ ನೌಕರರಿಗೆ ಸಿಗಲಿದೆ. ಇದಾದ ಬಳಿಕ ನೌಕರರ ಈ ತಿಂಗಳ ವೇತನದಲ್ಲಿ ದೊಡ್ಡ ಮೊತ್ತವನ್ನು ನಿರೀಕ್ಷಿಸಬಹುದು.ಇದರಲ್ಲಿ ಡಿಎ ಹೆಚ್ಚಳ ಮಾತ್ರವಲ್ಲದೆ ಡಿಎ ಬಾಕಿ, ಹೆಚ್ಚಿದ ಮೂಲ ವೇತನ, ಪ್ರಯಾಣ ಭತ್ಯೆ ಮತ್ತು ಮನೆ ಬಾಡಿಗೆ ಭತ್ಯೆ ಕೂಡಾ ಸೇರಿರಲಿದೆ.
ವೇತನ ಆಯೋಗದ ಪ್ರಕಾರ ಸಂಬಳದ ಲೆಕ್ಕಾಚಾರ :
7ನೇ ಕೇಂದ್ರ ವೇತನ ಆಯೋಗದ ಪ್ರಕಾರ ನೌಕರರ ಮೂಲ ವೇತನ ಮಾಸಿಕ 18,000 ರೂ. ಇದರ ಹೊರತಾಗಿ ಉದ್ಯೋಗಿಗಳು ಹೆಚ್ಚುವರಿ ಭತ್ಯೆಗಳನ್ನು ಕೂಡಾ ಪಡೆಯುತ್ತಾರೆ. ಉದ್ಯೋಗಿಗಳಿಗೆ ವೇತನ ಶ್ರೇಣಿಯ ಪ್ರಕಾರ ವೇತನದಲ್ಲಿ ಹೆಚ್ಚಳ ಇರುತ್ತದೆ. ಉದಾಹರಣೆಗೆ ನೌಕರನ ಕನಿಷ್ಠ ವೇತನ 18,000 ರೂಪಾಯಿಗಳಾಗಿದ್ದರೆ, ಕೆಳಗಿನ ಕೋಷ್ಟಕದ ಪ್ರಕಾರ ಪಾವತಿಸಲಾಗುತ್ತದೆ.
ಇದನ್ನೂ ಓದಿ : Post Office RD: ಪೋಸ್ಟ್ ಆಫೀಸ್ ಆರ್‌ಡಿ ಮಾಡಿಸುವಾಗ ಈ ಪ್ರಮುಖ ವಿಷಯಗಳ ಬಗ್ಗೆ ಇರಲಿ ವಿಶೇಷ ಗಮನ
DA ಹೈಕ್ ಕ್ಯಾಲ್ಕುಲೇಟರ್ :
ತಿಂಗಳು | ಮೂಲ ವೇತನ | ತುಟ್ಟಿಭತ್ಯೆ | ಪ್ರಯಾಣ ಭತ್ಯೆ | ಆರ್ಯರ್ ಮೊತ್ತ | ವೇತನ |
ಜನವರಿ | 18,000 | 8,280 | 1,350 | 720 | 27,630 |
ಫೆಬ್ರವರಿ | 18,000 | 8,280 | 1,350 | 720 | 27,630 |
ಮಾರ್ಚ್ | 18,000 | 9,000 | 1,350 | 1,440 | 29,790 |
ಏಪ್ರಿಲ್ | 18,000 | 9,000 | 1,350 | 28,350 |
ದರ ಪರಿಷ್ಕರಣೆ ಯಾವಾಗ? :
ತುಟ್ಟಿಭತ್ಯೆಯನ್ನು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈನಲ್ಲಿ ಪರಿಷ್ಕರಿಸಲಾಗುತ್ತದೆ. ಹಿಂದಿನ ವರ್ಷದ ಜುಲೈನಿಂದ ಡಿಸೆಂಬರ್‌ವರೆಗಿನ AICPI ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ ಜನವರಿಯ ತುಟ್ಟಿಭತ್ಯೆಯನ್ನು ಲೆಕ್ಕಹಾಕಲಾಗುತ್ತದೆ. ಹಾಗೆಯೇ ಜುಲೈ ಅನ್ನು ಜನವರಿಯಿಂದ ಜೂನ್ ವರೆಗೆ AICPI ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಹಣದುಬ್ಬರ ಮತ್ತು ಏರುತ್ತಿರುವ ಬೆಲೆಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ನೀಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.