Yamaha R15 Series New Bikes - ಯಮಹಾ ಮೋಟಾರ್‌ಸೈಕಲ್ ಇಂಡಿಯಾ (Yamaha Motorcycle India) ಇಂದು ತನ್ನ ವೆಹಿಕಲ್ ಪೋರ್ಟ್ ಫೋಲಿಯೋನಲ್ಲಿ  ಜನಪ್ರಿಯ ಆರ್ 15 ಶ್ರೇಣಿಯನ್ನು ನವೀಕರಿಸಿದೆ. ಕಂಪನಿಯು ತನ್ನ ಎರಡು ಬೈಕ್ ಗಳಾದ R15V4 ಮತ್ತು R15M ಗಳ ನವೀಕರಿಸಲಾದ ಮಾದರಿಯನ್ನು ಇಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇವುಗಳ ಬೆಲೆ ಕ್ರಮವಾಗಿ ರೂ. 1,67,800 ಮತ್ತು ರೂ.1,77,800 (ಎಕ್ಸ್ ಶೋ ರೂಂ, ದೆಹಲಿ) ಎಂದು ನಿಗದಿಪಡಿಸಲಾಗಿದೆ. ಈ ಎರಡೂ ಬೈಕ್‌ಗಳ ಆನ್‌ಲೈನ್ ಬುಕಿಂಗ್ ಇಂದಿನಿಂದ ಆರಂಭವಾಗಿದೆ. ಆಸಕ್ತ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಈ ಬೈಕ್ ಗಳಿಗಾಗಿ ಬುಕಿಂಗ್ ಮಾಡಬಹುದು.


COMMERCIAL BREAK
SCROLL TO CONTINUE READING

ಹೊಸ Yamaha R15 V4 ಅನ್ನು ಮೂರು ಬಣ್ಣಗಳಲ್ಲಿ ಪರಿಚಯಿಸಲಾಗಿದೆ, ಇದರಲ್ಲಿ ರೇಸಿಂಗ್ ಬ್ಲೂ, ಡಾರ್ಕ್ ನೈಟ್ ಮತ್ತು ಮೆಟಾಲಿಕ್ ರೆಡ್ ಸೇರಿವೆ. ಹೊಸ ಯಮಹಾ ಆರ್ 15 ಎಂ ಮೆಟಾಲಿಕ್ ಗ್ರೇ ಬಣ್ಣದಲ್ಲಿ ಮಾತ್ರ ಲಭ್ಯವಿರಲಿದೆ. ಹೆಚ್ಚುವರಿಯಾಗಿ, ಕಂಪನಿಯು ಹೊಸ ಯಮಹಾ ಆರ್ 15 ಎಂ ಮಾನ್ಸ್ಟರ್ ಎನರ್ಜಿ ಮೋಟೋ ಜಿಪಿ ಆವೃತ್ತಿಯನ್ನು ಮೋಟೋ ಜಿಪಿ ಬ್ರ್ಯಾಂಡಿಂಗ್‌ನೊಂದಿಗೆ ಫೇರಿಂಗ್, ಫ್ಯೂಯಲ್ ಟ್ಯಾಂಕ್, ಫ್ರಂಟ್ ಮಡ್ ಗಾರ್ಡ್ ಮತ್ತು ರಿಯರ್ ಸೈಡ್ ಪ್ಯಾನಲ್‌ಗಳನ್ನು ಬಿಡುಗಡೆ ಮಾಡಿದೆ. ಈ ಬೈಕ್‌ಗಳ ಬೆಲೆಯು ವಿವಿಧ ಬಣ್ಣಗಳ ಪ್ರಕಾರ ಬದಲಾಗುತ್ತದೆ,


Yamaha R15 ಬಣ್ಣಗಳು ಮತ್ತು ಅವುಗಳ ಬೆಲೆಗಳು
 


ಮಾಡೆಲ್ ಬಣ್ಣ ಬೆಲೆ
Yamaha R15 V4 ಮೆಟಾಲಿಕ್ ರೆಡ್ 1,67,800 ರೂ.
Yamaha R15 V4 ಡಾರ್ಕ್ ನೈಟ್ 168,800 ರೂ
Yamaha R15 V4 ಡಾರ್ಕ್ ನೈಟ್ 1,72,800 ರೂ.
Yamaha R15M ಮೆಟಾಲಿಕ್ ಗ್ರೇ 1,77,800 ರೂ.

ಕಂಪನಿಯು ಹೊಸ ಯಮಹಾ ಆರ್ 15 ಸರಣಿಗೆ ಭಾರೀ ಅಪ್‌ಡೇಟ್‌ಗಳನ್ನು ನೀಡಿದೆ, ಇದು ಹಿಂದಿನ ಮಾದರಿಗಿಂತ ಉತ್ತಮವಾಗಿದೆ. ಅದರ ಮುಂಭಾಗದ ಫೇರಿಂಗ್ ವಿಂಡ್ ಸ್ಕ್ರೀನ್‌ನಲ್ಲಿ, ಎಲ್‌ಇಡಿ ಹೆಡ್‌ಲೈಟ್, ಡೇಟೈಮ್ ರನ್ನಿಂಗ್ ಲೈಟ್ಸ್, ಫುಟ್ ಪೆಗ್‌ಗಳನ್ನು ಹೊರತುಪಡಿಸಿ ಎಕ್ಸಾಸ್ಟ್ ಮಫ್ಲರ್ ಅನ್ನು ವಿಭಿನ್ನ ವಿನ್ಯಾಸ ನೀಡಲಾಗಿದೆ. ಮತ್ತೊಂದೆಡೆ, ಎಮ್ ವೆರಿಯಂಟ್ ನೀಲಿ ಬಣ್ಣದ ಚಕ್ರಗಳು ಮತ್ತು ವಿಭಿನ್ನ ಸೀಟ್ ಕವರ್ ಹೊಂದಿರುವ ಸಿಲ್ವರ್ ಪೇಂಟ್ ಸ್ಕೀಮ್ ಅನ್ನು ನೀಡಲಾಗಿದೆ.


ಇದನ್ನೂ ಓದಿ-MG Astor Booking Start: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡ ದೇಶದ ಮೊಟ್ಟಮೊದಲ SUV MG Astor ಬುಕಿಂಗ್ ಆರಂಭ


ಭಾರತದಲ್ಲಿ ಬಿಡುಗಡೆಯಾದ ಆರ್ 15 ಸರಣಿಯಲ್ಲಿ ಯುಎಸ್ಡಿ ಫೋರ್ಕ್ಸ ಸಸ್ಪೆನ್ಶನ್ ನೀಡಲಾಗಿದ್ದು, ಇದೇ ಮೊದಲು. ಯಮಹಾ ಆರ್ 15 ರ ಇತ್ತೀಚಿನ ಪೀಳಿಗೆಯ ಮಾದರಿಯನ್ನು ಬಿಡುಗಡೆ ಮಾಡಿದ ವಿಶ್ವದ ಮೊದಲ ದೇಶ ಭಾರತ ಎಂಬುದು ಇಲ್ಲಿ ಗಮನಾರ್ಹ ಮೊದಲಿನಂತೆ, ಇದು 4-ವಾಲ್ವ್, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು 155 ಸಿಸಿ ಸಾಮರ್ಥ್ಯದೊಂದಿಗೆ ಬಳಸುತ್ತದೆ, ಇದು 18.4 ಎಚ್‌ಪಿ ಶಕ್ತಿ ಮತ್ತು 14.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆದರೆ ಪ್ರಸ್ತುತ ಮಾದರಿಗೆ ಹೋಲಿಸಿದರೆ ಇದರ ಶಕ್ತಿಯನ್ನು 0.3hp ಕಡಿಮೆ ಮಾಡಲಾಗಿದೆ.


ಇದನ್ನೂ ಓದಿ-Harley-Davidson Electric Bicycle: ಶೀಘ್ರದಲ್ಲಿಯೇ ಮಾರುಕಟ್ಟೆಗಿಳಿಯಲಿದೆ ಹಾರ್ಲೆ ಡೇವಿಡ್ ಸನ್ ಕಂಪನಿಯ ಈ e-Bicycle


ಈ ಪ್ರೀಮಿಯಂ ವೈಶಿಷ್ಟ್ಯಗಳು ಸಿಗುತ್ತವೆ
ಹೊಸ ಮೋಟಾರ್ ಸೈಕಲ್ ಹಲವಾರು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್) ಹಾಗೂ ತ್ವರಿತ ಶಿಫ್ಟರ್ ಅನ್ನು ಒಳಗೊಂಡಿದೆ. ಈ ವೈಶಿಷ್ಟ್ಯಗಳನ್ನು ಸಾಮಾನ್ಯವಾಗಿ ಪ್ರೀಮಿಯಂ ಮತ್ತು ಸೂಪರ್ ಬೈಕ್‌ಗಳಲ್ಲಿ ಮಾತ್ರ ನೀವು ಕಾಣಬಹುದು. ಇದರಲ್ಲಿ ತಲೆಕೆಳಗಾದ ಮುಂಭಾಗದ ಫೋರ್ಕ್ಸ್, YZF-R1 ನಿಂದ ಸ್ಫೂರ್ತಿ ಪಡೆದ ಹೊಸ LCD ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬ್ಲೂಟೂತ್ ಸಂಪರ್ಕ ಯಮಹಾ ಮೋಟಾರ್‌ಸೈಕಲ್ ಸಂಪರ್ಕ ಮತ್ತು ಗೇರ್ ಶಿಫ್ಟ್ ಸೂಚಕ. ಹೊಸ R15 ಹೊರತಾಗಿ, ಕಂಪನಿಯು ಭಾರತದಲ್ಲಿ ಹೊಸ Aerox 155 ಮ್ಯಾಕ್ಸಿ-ಸ್ಕೂಟರ್ ಅನ್ನು ಪರಿಚಯಿಸಿದೆ.


ಇದನ್ನೂ ಓದಿ-ಇದನ್ನೂ ಓದಿ-Harley Davidson ಆಗಿ ಮಾರ್ಪಟ್ಟ Royal Enfield...! ಖರ್ಚಾಗಿದ್ದು ಎಷ್ಟು ಗೊತ್ತಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.