MG Astor Booking Start: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡ ದೇಶದ ಮೊಟ್ಟಮೊದಲ SUV MG Astor ಬುಕಿಂಗ್ ಆರಂಭ

MG Motor ಕಂಪನಿಯ ಹೊಸ SUV MG Astor ಬುಕ್ಕಿಂಗ್ ಇಂದಿನಿಂದ ಆರಂಭವಾಗಿದೆ. ಎಂಜಿ ಈ ವಾಹನದಲ್ಲಿ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ನೀಡಿದ್ದು, ಅವು ನಿಮ್ಮ ಗಮನವನ್ನು ಸೆಳೆಯಲಿವೆ.

Written by - Nitin Tabib | Last Updated : Sep 19, 2021, 01:59 PM IST
  • ಭಾರತದಲ್ಲಿ MG Astor Booking ಆರಂಭ.
  • ಇದು ದೇಶದ ಮೊಟ್ಟಮೊದಲ AI ತಂತ್ರಜ್ಞಾನ ಹೊಂದಿರುವ SUV ಆಗಿರಲಿದೆ.
  • ವೈಶಿಷ್ಟ್ಯ, ವಿನ್ಯಾಸ ಮತ್ತು ಬೆಲೆ ತಿಳಿಯಲು ವರದಿ ಓದಿ.
MG Astor Booking Start: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡ ದೇಶದ ಮೊಟ್ಟಮೊದಲ SUV MG Astor ಬುಕಿಂಗ್ ಆರಂಭ title=
MG Astor Booking Starts In India (File Photo)

MG Motor ಭಾರತದಲ್ಲಿ ತನ್ನ ಹಿಡಿತವನ್ನು ಬಲಪಡಿಸುವಲ್ಲಿ ನಿರಂತರವಾಗಿ ಯತ್ನಿಸುತ್ತಿದೆ. ಕಂಪನಿಯು ಭಾರತದಲ್ಲಿ ತನ್ನ ವಾಹನಗಳ ಬಂಡವಾಳವನ್ನು ನಿರಂತರವಾಗಿ ಸುಧಾರಿಸುತ್ತಿದೆ. ಕೆಲವು ದಿನಗಳ ಹಿಂದೆ, ಕಂಪನಿಯು ತನ್ನ ಹೊಸ ಎಸ್‌ಯುವಿ ಎಂಜಿ ಆಸ್ಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲರ ಮುಂದೆ ಪ್ರಸ್ತುತಪಡಿಸಿತ್ತು. ಇದನ್ನು ಪ್ರಸ್ತುತಪಡಿಸುವಾಗ, ಕಂಪನಿಯು ಇದು AI (Artificial Intellegence) ತಂತ್ರಜ್ಞಾನವನ್ನು ಹೊಂದಿದ ಭಾರತದ ಮೊದಲ ಕಾರು ಇದಾಗಿದೆ ಎಂದು ಹೇಳಿಕೊಂಡಿದೆ. ಇದಲ್ಲದೇ, ಈ ವಿಭಾಗದಲ್ಲಿ A-DAS ಹೊಂದಿದ ಮೊದಲ ವಾಹನ ಕೂಡ ಇದಾಗಿದೆ.

ಇಂದಿನಿಂದ ಬುಕಿಂಗ್ ಆರಂಭಗೊಂಡಿದೆ (MG Astor Booking Starts In India)
ಎಂಜಿ ಪರಿಚಯಿಸಿರುವ ಈ ಸುಂದರ ಕಾರಿನ ಬುಕಿಂಗ್ ಇಂದಿನಿಂದ ಭಾರತೀಯ ಮಾರುಕಟ್ಟೆಯಲ್ಲಿ ಆರಂಭವಾಗಿದೆ. ಎಂಜಿ ಮೋಟಾರ್ ನಿಮಗಾಗಿ ತಂದಿರುವ ಈ ಎಸ್‌ಯುವಿಯು M ZSನಂತೆ ಕಾಣುತ್ತದೆ, ಇದು ಸಾಗರೋತ್ತರ ಮಾರುಕಟ್ಟೆಯಲ್ಲಿ ಲಭ್ಯವಿರುವ ZS ಫೇಸ್‌ಲಿಫ್ಟ್ ಮಾದರಿಯನ್ನು ಆಧರಿಸಿದೆ.

MG Astor ವಿನ್ಯಾಸ (MG Astor Design)
MG ವತಿಯಿಂದ ಪರಿಚಯಿಸಲ್ಪಟ್ಟ  ಈ ಹೊಸ SUV ಯಲ್ಲಿ, ಹೆಕ್ಸಾಗೊನಲ್ ಗ್ರಿಲ್, ಹೊಸ ಬಂಪರ್, ಫಾಗ್ ಲ್ಯಾಂಪ್‌ಗಳು ಮತ್ತು ಎಲ್ಇಡಿ ರನ್ನಿಂಗ್ ಲೈಟ್‌ಗಳು ಅದರ ಲುಕ್ ಗೆ ಮತ್ತಷ್ಟು ಮೆರಗು ನೀಡಿವೆ. ಇದೇ ವೇಳೆ , ಡ್ಯುಯಲ್ ಎಕ್ಸಾಸ್ಟ್ ಹೊಂದಿರುವ ಫಾಕ್ಸ್ ಸ್ಕಿಡ್ ಪ್ಲೇಟ್ ಅನ್ನು ವಾಹನದ ಹಿಂಭಾಗದಲ್ಲಿ ಅಳವಡಿಸಲಾಗಿದೆ. ಈ ವಾಹನದ ಚಕ್ರಗಳಿಗೆ 17 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ.

AI ಟಚ್ ನೀಡಿದ Reliance Jio (MG Astor With AI Inside)
ಸ್ವದೇಶಿ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಈ ವಾಹನದಲ್ಲಿ AI ವ್ಯವಸ್ಥೆಯನ್ನು ಒದಗಿಸಿದೆ. ರಿಲಯನ್ಸ್ ಜಿಯೋ ನೈಜ-ಸಮಯದ ಇನ್ಫೋಟೈನ್‌ಮೆಂಟ್ ಮತ್ತು ಟೆಲಿಮ್ಯಾಟಿಕ್ಸ್‌ಗಾಗಿ ಇ-ಸಿಮ್ ಮತ್ತು ಸಾಕಷ್ಟು ತಂತ್ರಜ್ಞಾನವನ್ನು ಒದಗಿಸುತ್ತದೆ.

ವಾಹನದ ಇಂಜಿನ್ ಯಾವ ರೀತಿ ಇದೆ (MG Astor Features)
MG Astor
ಎರಡು ವಿಭಿನ್ನ ಪೆಟ್ರೋಲ್ ಎಂಜಿನ್ಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಇಳಿಯುತ್ತಿದೆ. ಮೊದಲ ರೂಪಾಂತರಿ 1.5 ಲೀಟರ್ ಸಾಮರ್ಥ್ಯವಿರುವ ನ್ಯಾಚುರಲ್ ಆಸ್ಪರ್ಡ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ ಮತ್ತು 4 ಸಿಲಿಂಡರ್‌ಗಳನ್ನು ಸೌಮ್ಯವಾದ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದೆ, ಇದು 110 hp ಪವರ್ ಮತ್ತು 144 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೊಂದೆಡೆ, ಎರಡನೇ ರೂಪಾಂತರವು 1.3 ಲೀಟರ್ ಸಾಮರ್ಥ್ಯದೊಂದಿಗೆ ಬರುತ್ತದೆ, ಇದು 140 hp ಶಕ್ತಿ ಮತ್ತು 220 Nm ಟಾರ್ಕ್ ಉತ್ಪಾದಿಸುತ್ತದೆ. ದೊಡ್ಡ ಎಂಜಿನ್ ಮ್ಯಾನುಯಲ್ ಗೇರ್ ಬಾಕ್ಸ್ ಹಾಗೂ 8 ಸ್ಟೆಪ್ ಸಿವಿಟಿ ಗೇರ್ ಬಾಕ್ಸ್ ಜೊತೆಗೆ ಚಿಕ್ಕ ಎಂಜಿನ್ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನಲ್ಲಿ ಮಾತ್ರ ಲಭ್ಯವಿರುತ್ತದೆ.

ಇದನ್ನೂ ಓದಿ-India's First e-Super Car: ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಭಾರತದ ಮೊಟ್ಟಮೊದಲ e-Super Car, ಫುಲ್ ಚಾರ್ಜ್ ನಲ್ಲಿ 700 ಕಿ.ಮೀ ಮೈಲೇಜ್

ಈ SUV ವಿಶೇಷ ವೈಶಿಷ್ಟ್ಯ ಇಲ್ಲಿದೆ (New MG Astor Specifications)
ಎಂಜಿ ಪರಿಚಯಿಸಿದ ಈ ಹೊಸ ಎಸ್ಯುವಿಯಲ್ಲಿ ಹಲವು ಉತ್ತಮ ವೈಶಿಷ್ಟ್ಯಗಳನ್ನು ನೀಡಲಾಗಿದೆ. ವಾಹನವು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟ್, ಫಾರ್ವರ್ಡ್ ಘರ್ಷಣೆ ಎಚ್ಚರಿಕೆ, ಸ್ವಯಂಚಾಲಿತ ತುರ್ತು ಬ್ರೇಕಿಂಗ್, ಲೇನ್ ನಿರ್ಗಮನ ಎಚ್ಚರಿಕೆ, ರಿಯರ್ ಡ್ರೈವ್ ಅಸಿಸ್ಟ್ (RDA), ಲೇನ್ ಡಿಪಾರ್ಚರ್ ಪ್ರಿವೆಂಶನ್, ಇಂಟೆಲಿಜೆಂಟ್ ಹೆಡ್‌ಲ್ಯಾಂಪ್ ಕಂಟ್ರೋಲ್ (IHC) ಮತ್ತು ಸ್ಪೀಡ್ ಅಸಿಸ್ಟ್ ಸಿಸ್ಟಂನೊಂದಿಗೆ ಬರುತ್ತದೆ.

ಇದನ್ನೂ ಓದಿ-Huge Discount On Cheapest Car: ದೇಶದ ಅತ್ಯಂತ ಅಗ್ಗದ ಕಾರ್ ಮೇಲೆ ಸಿಗುತ್ತಿದೆ ಭಾರಿ ಡಿಸ್ಕೌಂಟ್, ಬೆಲೆ 3 ಲಕ್ಷಕ್ಕೂ ಕಮ್ಮಿ, 22 ಕಿ.ಮೀ ಮೈಲೇಜ್

ಬೆಲೆ ಎಷ್ಟು? (New MG Astor Price)
MG Astor ಬುಕಿಂಗ್ ಇಂದಿನಿಂದ ಆರಂಭಗೊಂಡಿದೆ. ಇದುವರೆಗೆ ಇದರ ಬೆಲೆ ಕುರಿತು 10 ಲಕ್ಷ ರೂ. (Ex-Showroom Price) ಆಗಿರಬಹುದು ಎಂದು ಅಂದಾಜಿಸಲಾಗಿದೆ. ಕಪ್ಮನಿಯು ಈ ವಾಹನವನ್ನು ಹುಂಡೈ ಕಂಪನಿಯ ಕ್ರೆಟ್ಟಾ, ಕಿಯಾ ಸೆಲ್ಟಸ್, ಸ್ಕೋಡಾ ಕುಶಾಕ್ ಗಳಂತಹ ಅದ್ಭುತ SUV ಕಾರ್ ಗಳೊಂದಿಗೆ ಸ್ಪರ್ಧಿಸಲಿದೆ. ಭಾರತದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಈ ಕಾರು ಎಷ್ಟು ಯಶಸ್ವಿಯಾಗಲಿದೆ ಎಂಬುದು ಕಾಲವೇ ನಿರ್ಧರಿಸಲಿದೆ.

ಇದನ್ನೂ ಓದಿ-Best Selling Maruti Car - Alto ಅಲ್ಲ Marutiಯ ಈ ಕಾರಿಗೆ ಜನರ ಹೆಚ್ಚಿನ ಮನ್ನಣೆ, ಮೈಲೇಜ್ 32 ಕಿ.ಮೀ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News