Zero Income Tax Countries: ಫೆಬ್ರುವರಿ 1, 2024 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024 ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದಾರೆ. ಆದರೆ ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಹೆಚ್ಚಳದ ನಿರೀಕ್ಷೆ ಹುಸಿಯಾಗಿದೆ.  ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಸಾರ್ವಜನಿಕರಿಂದ ಪಡೆಯುವ ಆದಾಯ ತೆರಿಗೆಯು ಯಾವುದೇ ದೇಶದ ಸರ್ಕಾರಕ್ಕೆ ಆದಾಯದ ಪ್ರಮುಖ ಮೂಲವಾಗಿರುತ್ತದೆ. ಆದರೆ ಕೆಲವು ದೇಶಗಳಲ್ಲಿ ಸರ್ಕಾರ ಈ ತೆರಿಗೆಯೇ ಸಂಗ್ರಹಿಸುವುದಿಲ್ಲ. ಅರ್ಥಾತ್ ಆ ದೇಶಗಳಲ್ಲಿನ ಸರ್ಕಾರಗಳೂ ಯಾವುದೇ ರೀತಿಯ ಆದಾಯ ತೆರಿಗೆಯನ್ನು ಪಡೆಯುವುದಿಲ್ಲ ಮತ್ತು ಜನರ ಸಂಪೂರ್ಣ ಆದಾಯವು ಅವರ ಕೈಗೆ ಹೋಗುತ್ತದೆ . ಬನ್ನಿ ಆ ದೇಶಗಳು ಯಾವುವು ತಿಳಿದುಕೊಳ್ಳೋಣ, (Business News In Kannada)


COMMERCIAL BREAK
SCROLL TO CONTINUE READING

ಯುನೈಟೆಡ್ ಅರಬ್ ಎಮಿರೇಟ್ಸ್ ಒಂದು ತೆರಿಗೆ ಮುಕ್ತ ರಾಷ್ಟ್ರವಾಗಿದೆ. ಇಲ್ಲಿ ಕಚ್ಚಾ ತೈಲದ ವ್ಯಾಪಾರ ನಡೆಯುತ್ತದೆ ಮತ್ತು ಇಡೀ ಆರ್ಥಿಕತೆಯು ಅದರ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಅಲ್ಲಿನ ಜನರು ತೆರಿಗೆ ಕಟ್ಟಬೇಕಾಗಿಲ್ಲ. ಗಲ್ಫ್ ದೇಶ ಬಹ್ರೇನ್ ಸರ್ಕಾರವು ತನ್ನ ನಾಗರಿಕರಿಂದ ಯಾವುದೇ ರೀತಿಯ ತೆರಿಗೆಯನ್ನು ಸಂಗ್ರಹಿಸುವುದಿಲ್ಲ.


ತೆರಿಗೆ ಮುಕ್ತ ದೇಶದ ವಿಷಯಕ್ಕೆ ಬಂದಾಗ, ಮನಸ್ಸಿಗೆ ಬರುವ ಮೊದಲ ಹೆಸರು ಬಹಾಮಾಸ್. ಪ್ರವಾಸಿಗರಿಗೆ ಸ್ವರ್ಗವೆನ್ನಲಾಗುವ ಈ ದೇಶ ಪಶ್ಚಿಮಘಟ್ಟದಲ್ಲಿದೆ. ಈ ದೇಶದ ಜನರು ತಮ್ಮ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗಿಲ್ಲ.


ಬ್ರೂನೈ ಕೂಡ ತೈಲ ನಿಕ್ಷೇಪಗಳನ್ನು ಹೊಂದಿದೆ, ಇಲ್ಲಿ ವಾಸಿಸುವ ಜನರು ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಇದಲ್ಲದೇ, ಉತ್ತರ ಅಮೆರಿಕಾ ಖಂಡದ ಕೆರಿಬಿಯನ್ ಪ್ರದೇಶದಲ್ಲಿ ಬರುವ ಕೇಮನ್ ದ್ವೀಪಗಳಲ್ಲಿ ವಾಸಿಸುವ ಜನರು ತಮ್ಮ ಆದಾಯದ ಮೇಲೆ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.


ಇದನ್ನೂ ಓದಿ-ಸರ್ಕಾರಿ ನೌಕರರ ವೇತನದಲ್ಲಿ ನೇರ ₹9000 ಹೆಚ್ಚಳ! 8ನೇ ವೇತನ ಆಯೋಗದ ಸರದಿಯೂ ಬಂದಿದೆ!


ಯುಎಇಯಂತೆ, ಕುವೈತ್ ತೈಲ ಮತ್ತು ಅನಿಲದ ನೈಸರ್ಗಿಕ ನಿಕ್ಷೇಪಗಳನ್ನು ಹೊಂದಿದೆ. ಈ ದೇಶವು ಎರಡರಿಂದಲೂ ಚೆನ್ನಾಗಿ ಗಳಿಕೆಯನ್ನು ಮಾಡುತ್ತದೆ ಮತ್ತು ಅಲ್ಲಿನ ಜನರು ಅದರ ಲಾಭವನ್ನು ಪಡೆಯುತ್ತಾರೆ. ಈ ದೇಶದ ಜನ ಆದಾಯ ತೆರಿಗೆ ಕಟ್ಟದೇ ಇರುವುದಕ್ಕೆ ಇದೇ ಕಾರಣ.


ಇದನ್ನೂ ಓದಿ-Union Budget 2024: ದೇಶದ ಒಂದು ಕೋಟಿ ತೆರಿಗೆ ಪಾವತಿದಾರರಿಗೆ ಭಾರಿ ನೆಮ್ಮದಿಯ ಸುದ್ದಿ


ಭಾರತದ ಕಡಲ ಗಡಿಯ ಪಕ್ಕದಲ್ಲಿರುವ ಮಾಲ್ಡೀವ್ಸ್‌ನ ಜನರು ಸಹ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ. ವಿಶ್ವಾದ್ಯಂತದ ಜನರು ಅಲ್ಲಿಗೆ ಭೇಟಿ ನೀಡುತ್ತಾರೆ. ಇತ್ತೀಚೆಗೆ ಪ್ರಧಾನಿ ಮೋದಿ ವಿರುದ್ಧ ಕಾಮೆಂಟ್ ಮಾಡಿದ್ದಕ್ಕಾಗಿ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ಗೆ ಬಹಿಷ್ಕಾರ ಹಾಕಿದ್ದರು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ