ನವದೆಹಲಿ: 10ನೇ ತರಗತಿಯಲ್ಲಿ ತೇರ್ಗಡೆಯಾದ ಯುವಕರಿಗೆ ಭಾರತೀಯ ಸೇನೆಯಲ್ಲಿ ಗ್ರೂಪ್ ಸಿ ಪೋಸ್ಟ್‌ಗಳಲ್ಲಿ ಉದ್ಯೋಗ ಪಡೆಯಲು ಉತ್ತಮ ಅವಕಾಶ ಇಲ್ಲಿದೆ. ಆಸಕ್ತ ಅಭ್ಯರ್ಥಿಗಳು ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಕೂಡಲೇ ತಮ್ಮ ಅರ್ಜಿ ಸಲ್ಲಿಸಬೇಕು.


COMMERCIAL BREAK
SCROLL TO CONTINUE READING

ಭಾರತೀಯ ಸೇನೆಯು ಉದ್ಯೋಗ ಪತ್ರಿಕೆಯಲ್ಲಿ ವಿವಿಧ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಕುಕ್, ಬಾರ್ಬರ್, ಟೈಲರ್, ಡ್ರಾಫ್ಟ್ಸ್‌ಮನ್, ಮೆಸೆಂಜರ್, ಡ್ರಾಫ್ಟ್ಸ್‌ಮನ್ ಮತ್ತು ಸಫಾಯಿವಾಲಾಗಳಿಗೆ ಖಾಲಿ ಹುದ್ದೆಗಳು ಲಭ್ಯವಿವೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಆಫ್‌ಲೈನ್ ಮೋಡ್ ಮೂಲಕ ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 11 ಆಗಿರುತ್ತದೆ. ಅಭ್ಯರ್ಥಿಗಳು ಆಫ್‌ಲೈನ್ ಮೋಡ್‌ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು.


ಇದನ್ನೂ ಓದಿ: ದೆಹಲಿ-ಎನ್‌ಸಿಆರ್‌ನಲ್ಲಿ ನಡುಗಿದ ಭೂಮಿ, 30 ಸೆಕೆಂಡ್‌ಗೂ ಹೆಚ್ಚು ಕಾಲ ಭೂಕಂಪನದ ಅನುಭವ


ಇಂಡಿಯನ್ ಆರ್ಮಿ ಗ್ರೂಪ್ C ನೇಮಕಾತಿಗೆ ಅರ್ಹತಾ ಮಾನದಂಡ


ಕುಕ್:- 10ನೇ ತರಗತಿ ಅಥವಾ ತತ್ಸಮಾನ. ಭಾರತೀಯ ಅಡುಗೆ ಮತ್ತು ವ್ಯಾಪಾರದಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.


ಕ್ಷೌರಿಕ:-10ನೇ ತರಗತಿ ಅಥವಾ ತತ್ಸಮಾನ.


ಟೈಲರ್:- ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ತತ್ಸಮಾನದಲ್ಲಿ ತೇರ್ಗಡೆ ಮತ್ತು ಪ್ರತಿಷ್ಠಿತ ಸಂಸ್ಥೆಯಲ್ಲಿ ಟೈಲರ್ ಆಗಿ 3 ವರ್ಷಗಳ ಅನುಭವ.


ಮೆಸೆಂಜರ್, ದಫ್ತಾರಿ, ಸಫಾಯಿವಾಲಾ - ಅಭ್ಯರ್ಥಿಯು 10ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.


ವಯೋಮಿತಿ ಕುರಿತು ಹೇಳುವುದಾದರೆ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷವಾಗಿರಬೇಕು, ಗರಿಷ್ಠ ವಯೋಮಿತಿಯನ್ನು 25 ವರ್ಷಕ್ಕೆ ಇರಿಸಲಾಗಿದೆ. ವೇತನದ ಬಗ್ಗೆ ಹೇಳುವುದಾದರೆ ಅಡುಗೆಯ ಹುದ್ದೆಗೆ ತಿಂಗಳಿಗೆ 19,900 ರೂ.ನಿಂದ 63,200 ರೂ. ವೇತನ ನೀಡಲಾಗುತ್ತದೆ. ಕ್ಷೌರಿಕ ಮತ್ತು ಟೈಲರ್ ಹುದ್ದೆಗೆ ತಿಂಗಳಿಗೆ 18,000 ರೂ.ನಿಂದ 56,900 ರೂ.ವರೆಗೆ ವೇತನ ದೊರೆಯಲಿದೆ. ಮತ್ತೊಂದೆಡೆ ಮೆಸೆಂಜರ್, ಡ್ರಾಫ್ಟಿ ಮತ್ತು ಸಫಾಯಿವಾಲಾ ಹುದ್ದೆಗೆ ತಿಂಗಳಿಗೆ 18,000 ರೂ.ನಿಂದ 56,900 ರೂ.ವರೆಗೆ ವೇತನ ಲಭ್ಯವಿರುತ್ತದೆ.


ಇದನ್ನೂ ಓದಿ: ಗೂಗಲ್, ಅಮೆಜಾನ್ ಸಾಮೂಹಿಕ ವಜಾ: ಉದ್ಯೋಗ ನಷ್ಟದಿಂದ ಒತ್ತಡ ಮತ್ತು ಆತಂಕದಲ್ಲಿರುವ ಜನರು!


ಅರ್ಜಿ ಸಲ್ಲಿಸುವುದು ಹೇಗೆ?


ನಿಗದಿತ ನಮೂನೆಯಲ್ಲಿ ಸರಿಯಾಗಿ ಟೈಪ್ ಮಾಡಿದ ಅಥವಾ ಅಚ್ಚುಕಟ್ಟಾಗಿ ಕೈಬರಹದ ಅರ್ಜಿ ನಮೂನೆಯನ್ನು ಸ್ವಯಂ ವಿಳಾಸದ ಲಕೋಟೆಯೊಂದಿಗೆ (Size not less than 23 cms X 10 cms)ಎಲ್ಲಾ ಸಂಬಂಧಿತ ಪರಿಶೀಲನಾ ಪ್ರತಿಗಳನ್ನು ಸೂಕ್ತ ಮುದ್ರೆಯೊಂದಿಗೆ ಸರಿಯಾಗಿ ಅಂಟಿಸಿರಬೇಕು. ಅರ್ಜಿಗೆ ಬೇಕಾದ ದಾಖಲೆಗಳಾದ 10ನೇ ತರಗತಿಯ ಪ್ರಮಾಣಪತ್ರ ಮತ್ತು 4 ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರಗಳು (In White Background), ಹೆಸರು ಹೀಗೆ ಸಂಪೂರ್ಣ ಮಾಹಿತಿಯನ್ನು Registered/Speed/Ordinary Post (30 cms X 21 cms ಗಿಂತ ಕಡಿಮೆಯಿಲ್ಲದ ಲಕೋಟೆಯಲ್ಲಿ ಭಾರತೀಯ ಅಂಚೆ ಸೇವೆ ಮೂಲಕ ಮಾತ್ರ) ಮೂಲಕ ‘ಆಯ್ಕೆ ಮಂಡಳಿ GP 'C' POST JACK RIFLE REGIMENTAL CENTER JABALPUR CANTT PIN 482001’ಗೆ ವಿಳಾಸಕ್ಕೆ ಕಳುಹಿಸಬೇಕು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.