ಉತ್ತರಾಖಂಡ್: ಉತ್ತರಾಖಂಡದ ಪಿಥೋರಗಢದಲ್ಲಿ ಭೀಕರ ಅಪಘಾತ ಸಂಭವಿಸಿದೆ. ನಾಲೆಯೊಂದಕ್ಕೆ ಕಾರು ಬಿದ್ದು 9 ಮಂದಿ ಸ್ಥಳದ್ಲಲೇ ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Watch: ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಮಳೆಯಲ್ಲೇ ನೆನಯುತ್ತಾ ನಿಂತ ಪ್ರಧಾನಿ ಮೋದಿ!


ಬಾಗೇಶ್ವರದ ಶಾಮಾದಿಂದ ಪಿಥೋರಗಢದ ನಾಚಾನಿ ಕಡೆಗೆ ಬರುತ್ತಿದ್ದ ಕಾರು ಅಪಘಾತಕ್ಕೀಡಾಗಿ ಈ ದುರಂತ ಸಂಭವಿಸಿದೆ. ಆಳವಾದ ನಾಲೆಗೆ ಕಾರು ಬಿದ್ದ ಪರಿಣಾಮ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.


ಇದನ್ನೂ ಓದಿ: PM Modi In US: ಪ್ರಧಾನಿ ಮೋದಿ ಭಾಷಣ ಬಹಿಷ್ಕರಿಸಲು ಮುಂದಾದ ಇಬ್ಬರು ಅಮೆರಿಕ ಸಂಸದರು


ಇನ್ನು ಅಪಘಾತದ ಬಗ್ಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಬಾಗೇಶ್ವರದ ಶಾಮಾದಿಂದ ಪಿಥೋರಗಢದ ನಾಚಾನಿ ಕಡೆಗೆ ಬರುತ್ತಿದ್ದ ವಾಹನ ಅಪಘಾತದಿಂದ ಅನೇಕ ಜನರು ಸಾವನ್ನಪ್ಪಿರುವ ಬಗ್ಗೆ ಅತ್ಯಂತ ದುಃಖದ ಸಂಗತಿ. ಈ ಸುದ್ದಿ ಕೇಳಿ ನನಗೆ ತೀವ್ರ ಆಘಾತವಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ರಕ್ಷಣಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅಗಲಿದವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ: ಶಾಂತಿ: ಶಾಂತಿ:’ ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.