Viral Video: ದೆಹಲಿ ಮೆಟ್ರೋದಲ್ಲಿ ನಡೀ ಬಾರದ್ದೇ ನಡೆದು ಹೋಯ್ತು.. ಏನೆನೆಲ್ಲಾ ಮಾಡಿದ್ರು ನೀವೇ ನೋಡಿ!

Delhi Metro Viral Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಹಳದಿ ಮೆಟ್ರೋ ಮಾರ್ಗದಲ್ಲಿ ನಡೆದ ಘಟನೆ ಎನ್ನಲಾಗ್ತಿದೆ. ಮೆಟ್ರೋ ಸೀಟಿನಲ್ಲಿ ಕುಳಿತಿದ್ದ ಜೋಡಿ ಜನರ ಮುಂದೆ ನಿರ್ಭೀತಿಯಿಂದ ಪಬ್ಲಿಕ್‌ ಪ್ಲೇಸ್‌ನಲ್ಲಿ ಏನು ಮಾಡಬಾರದೋ ಅದನ್ನೇ ಮಾಡುತ್ತಿದ್ದಾರೆ.

Written by - Chetana Devarmani | Last Updated : Jun 21, 2023, 05:15 PM IST
  • ದೆಹಲಿ ಮೆಟ್ರೋದಲ್ಲಿ ಜೋಡಿಯೊಂದು ಚುಂಬಿಸುತ್ತಿರುವ ವಿಡಿಯೋ
  • ಜೋಡಿಯೊಂದು ಚುಂಬಿಸುತ್ತಿರುವ ವಿಡಿಯೋ ಇದೀಗ ವೈರಲ್
  • ಈ ಕುರಿತು ದೆಹಲಿ ಮೆಟ್ರೋ ನೀಡಿರುವ ಉತ್ತರ ಕೂಡ ವೈರಲ್
Viral Video: ದೆಹಲಿ ಮೆಟ್ರೋದಲ್ಲಿ ನಡೀ ಬಾರದ್ದೇ ನಡೆದು ಹೋಯ್ತು.. ಏನೆನೆಲ್ಲಾ ಮಾಡಿದ್ರು ನೀವೇ ನೋಡಿ! title=
Viral Video

Delhi Metro Viral Video: ದೆಹಲಿ ಮೆಟ್ರೋದಲ್ಲಿ ಜೋಡಿಯೊಂದು ಚುಂಬಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ಬಗ್ಗೆ ದೆಹಲಿ ಮೆಟ್ರೋ ಕೂಡ ಉತ್ತರ ನೀಡಿದೆ. ಕಳೆದ ಕೆಲವು ದಿನಗಳಲ್ಲಿ, ದೆಹಲಿ ಮೆಟ್ರೋದಿಂದ ನಿರಂತರವಾಗಿ ಇಂತಹ ಅನೇಕ ವಿಡಿಯೋಗಳು ವೈರಲ್ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಆ ಬಗ್ಗೆ ಅನೇಕರು ಅಸಮಾಧಾನ ಕೂಡ ಹೊರ ಹಾಕುತ್ತಿದ್ದಾರೆ. ಹೀಗಿರುವಾಗ ಈ ವೈರಲ್ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ದೆಹಲಿ ಮೆಟ್ರೋ ನೀಡಿರುವ ಉತ್ತರ ಕೂಡ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಹಳದಿ ಮೆಟ್ರೋ ಮಾರ್ಗದಲ್ಲಿ ಸೆರೆ ಹಿಡಿದಿರುವುದು ಎಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ ಜೋಡಿಯು ಸೀಟಿನಲ್ಲಿ ಕುಳಿತು ಪರಸ್ಪರ ಚುಂಬಿಸುತ್ತಿರುವುದನ್ನು ಕಾಣಬಹುದು. ಈ ಜೋಡಿಗಳು ಚುಂಬಿಸುತ್ತಿದ್ದ ಕೋಚ್‌ನಲ್ಲಿ ಬೇರೆ ಜನರು ಸಹ ಕುಳಿತಿರುವುದು ವಿಡಿಯೋದಲ್ಲಿ ನೋಡಬಹುದು. ಮೆಟ್ರೋದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. ಈ ಬಗ್ಗೆ ದೆಹಲಿ ಮೆಟ್ರೋ ಆಡಳಿತವನ್ನು ಟ್ರೋಲ್ ಮಾಡಲಾಗುತ್ತಿದೆ. ಈ ವಿಡಿಯೋ ಕುರಿತು ದೆಹಲಿ ಮೆಟ್ರೋ ಹೇಳಿಕೆ ನೀಡಿದೆ. "ನಮಸ್ತೆ. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ. HUDA ಸಿಟಿ ಸೆಂಟರ್‌ನಲ್ಲಿ ಪರಿಶೀಲಿಸಲಾಗಿದ್ದು, ಅಂತಹ ಯಾವುದೇ ಪ್ರಯಾಣಿಕರು ಕಂಡುಬಂದಿಲ್ಲ.." ಎಂದು ದೆಹಲಿ ಮೆಟ್ರೋ ಸ್ಪಷ್ಟನೆ ನೀಡಿದೆ. ಇದಕ್ಕೂ ಮುನ್ನ ದೆಹಲಿ ಮೆಟ್ರೋದಲ್ಲಿ ನಡೆದ ಅನೇಕ ಅಶ್ಲೀಲ ಕೆಲಸಗಳ ವಿಡಿಯೋಗಳು ವೈರಲ್ ಆಗಿವೆ.

 

 

ಇದನ್ನೂ ಓದಿ: Video Viral: ಗಾಯಕರನ್ನು ಮೀರಿಸುವಂತಿತ್ತು ಈ ಪೊಲೀಸ್ ಅಧಿಕಾರಿ ಹಾಡು; ಇಲ್ಲಿದೆ ನೋಡಿ ವಿಡಿಯೋ ..!

ಮೂರು ದಿನಗಳ ಹಿಂದೆ ದೆಹಲಿ ಮೆಟ್ರೋದಲ್ಲಿ ಹುಡುಗಿಯೊಬ್ಬಳು ತನ್ನ ಕೂದಲನ್ನು ಸ್ಟ್ರೈಟ್‌ನರ್‌ನಿಂದ ಸ್ಟ್ರೈಟ್‌ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಮೆಟ್ರೋದಲ್ಲಿ ಜನಜಂಗುಳಿಯ ನಡುವೆ ಈ ಹುಡುಗಿ ಕೋಚ್‌ನ ಪ್ಲಗ್ ಪಾಯಿಂಟ್‌ನಲ್ಲಿ ಸ್ಟ್ರೈಟ್‌ನರ್ ಹಾಕಿಕೊಂಡು ತಲೆಗೂದಲನ್ನು ಸ್ಟ್ರೈಟ್ ಮಾಡುತ್ತಿದ್ದಳು. ಇದಕ್ಕೂ ಮೊದಲು, ಮೆಟ್ರೋದಲ್ಲಿ ರೀಲ್‌ ಮಾಡುವ ಅನೇಕ ವಿಡಿಯೋಗಳು ವೈರಲ್ ಆಗಿದ್ದವು, ಇದರಿಂದಾಗಿ ಪ್ರಯಾಣಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇದರಿಂದಾಗಿ ದೆಹಲಿ ಮೆಟ್ರೋ ಮಾರ್ಗಸೂಚಿಯನ್ನೂ ಹೊರಡಿಸಿತ್ತು. ಅಶ್ಲೀಲತೆಯನ್ನು ಹರಡುವ ಅಥವಾ ಇತರರಿಗೆ ತೊಂದರೆ ಉಂಟುಮಾಡುವ ಯಾವುದೇ ಕೆಲಸ ಅಪರಾಧ ಎಂದು ಇದರಲ್ಲಿ ಹೇಳಲಾಗಿದೆ.

 

 

ಇದನ್ನೂ ಓದಿ: Viral Video: ಫೋಟೋಗಾಗಿ ಲಿಪ್‌ಲಾಕ್‌, ನಂತರ ವಧು - ವರ ಕಂಟ್ರೋಲ್‌ ತಪ್ಪಿ ಕ್ಯಾಮೆರಾ ಮುಂದೆಯೇ ಮಾಡಿದ್ರು...!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News