ಕಳ್ಳತನಕ್ಕೆ ಬಂದ… ಮನೆಯವರು ಬಂದ್ರು ಅಂತಾ ನೇಣಿಗೆ ಶರಣಾದ..!?
ಸದ್ಯ ಮೃತ ಕಳ್ಳನನ್ನ ದಿಲೀಪ್ ಬಹದ್ದೂರ್ ಎಂದು ಗುರುತಿಸಲಾಗಿದ್ದು, ದಿಲೀಪ್ 2006ರಲ್ಲಿ ಜೀವನ್ ಭೀಮಾನಗರದಲ್ಲಿ ಕಳ್ಳತನ ಕೃತ್ಯದಲ್ಲಿ ಬಂಧಿಯಾಗಿದ್ದ.
ಬೆಂಗಳೂರು: ಕಳ್ಳ ಮನೆಗೆ ನುಗ್ಗಿದರೆ ಒಂದೋ ಮನೆಯಲ್ಲಿ ಚಿನ್ನಾಭರಣ ದೋಚುತ್ತಾನೆ. ಇಲ್ಲವೇ ಮನೆಯಲ್ಲಿರುವ ವಸ್ತು ಎಗರಿಸುತ್ತಾನೆ. ಆದರೆ ಇಲ್ಲೊಬ್ಬ ಕಳ್ಳ ಇವೆರಡನ್ನು ಬಿಟ್ಟು ಕಳ್ಳತನಕ್ಕೆ ಬಂದ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದನ್ನೂ ಓದಿ: Puneeth Parva: ‘ಪುನೀತ ಪರ್ವ’ ಕಾರ್ಯಕ್ರಮ ನೋಡುತ್ತಲೇ ಹೃದಯಾಘಾತ; ಅಪ್ಪು ಅಭಿಮಾನಿ ಸಾವು..!
ಸೈಕೋ ಮನಸ್ಥಿತಿಯ ಕಳ್ಳನ ಸ್ಥಿತಿ ನೋಡಿ ಮನೆಯವರು ಶಾಕ್ ಆಗಿದ್ದಾರೆ. ಇಂದಿರಾನಗರದಲ್ಲಿ ನಿನ್ನೆ ಘಟನೆ ನಡೆದಿದ್ದು, ಟೆಕ್ಕಿಯೊಬ್ಬರು ಕುಟುಂಬ ಸಮೇತ ವಿದೇಶಿ ಪ್ರವಾಸ ಹೋಗಿದ್ದರು. ನಿನ್ನೆ ಮುಂಜಾನೆಯೇ ಮನೆ ಹೊಕ್ಕಿದ್ದ ಕಳ್ಳ, ಮನೆಯಲ್ಲೇ ಸ್ನಾನಮಾಡಿ, ಸಂಜೆವರೆಗೂ ಮನೆಯನ್ನ ಜಾಲಾಡಿದ್ದಾನೆ. ಆದರೆ ಮುಂದೆ ಏನಾಯಿತೋ ಗೊತ್ತಿಲ್ಲ. ಮನೆಯವರು ಬಂದಾಗ ದೇವರ ಕೋಣೆ ಬಳಿ ಕಳ್ಳ ನೇಣಿಗೆ ಶರಣಾಗಿದ್ದ.
ಸದ್ಯ ಮೃತ ಕಳ್ಳನನ್ನ ದಿಲೀಪ್ ಬಹದ್ದೂರ್ ಎಂದು ಗುರುತಿಸಲಾಗಿದ್ದು, ದಿಲೀಪ್ 2006ರಲ್ಲಿ ಜೀವನ್ ಭೀಮಾನಗರದಲ್ಲಿ ಕಳ್ಳತನ ಕೃತ್ಯದಲ್ಲಿ ಬಂಧಿಯಾಗಿದ್ದ.
ಇದನ್ನೂ ಓದಿ: Belagavi: ವಿಷ ಸೇವಿಸಿದ ಪತಿ, ಮಗು ಕೊಂದು ನೇಣಿಗೆ ಶರಣಾದ ಪತ್ನಿ!
ಸದ್ಯ ಘಟನೆ ಕುರಿತು ಇಂದಿರಾನಗರ ಠಾಣೆಯಲ್ಲಿ ಅನುಮಾನಸ್ಪದ ಸಾವು ಪ್ರಕರಣ ದಾಖಲಾಗಿದ್ದು, ದಿಲೀಪ್ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಮನೆಯವರು ಬಂದದ್ದನ್ನ ಕಳ್ಳ ನೋಡಿದ್ದರೆ ಆತ ಬ್ಯಾಕ್ ಡೋರ್ ನಿಂದ ಎಸ್ಕೇಪ್ ಆಗುವ ಸಾಧ್ಯತೆಯಿದ್ದರೂ ಯಾಕೆ ಆತ್ಮಹತ್ಯೆ ಮಾಡಿಕೊಂಡ. ಇಲ್ಲಾ ಮನೆಯವರು ಬರುವ ಮುನ್ನವೇ ಆತ್ಮಹತ್ಯೆ ಮಾಡಿಕೊಂಡಿದ್ದಾನ..? ಅನ್ನೋದು ಪೊಲೀಸರ ತನಿಖೆಯಲ್ಲಿ ಗೊತ್ತಾಗಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.