ಬೆಂಗಳೂರು: ಆಟೋ ಚಾಲಕರ ಪಾಲಿಗೆ ಪ್ರಯಾಣಿಕರೇ ದೇವರು.. ಆದರೆ ಕೆಲವರು ಕನ್ನಡ ಭಾಷೆ ಬಾರದ ಪ್ರಯಾಣಿಕರು ಸಿಕ್ಕರೆ ಸಾಕು ಬಲಿಕಾ ಬಕ್ರಾ ಮಾಡಿ ಬಿಡ್ತಾರೆ. ಹಣಕಾಸಿನ ವಿಚಾರದಲ್ಲಿ ಆಟೋ ಚಾಲಕ ಮತ್ತು ಪ್ರಯಾಣಿಕರ ಜಟಾಪಟಿ ಕೊಲೆಯಲ್ಲಿ ಅಂತ್ಯವಾಗಿದೆ.. 


COMMERCIAL BREAK
SCROLL TO CONTINUE READING

ಕೊಲೆಯಾದವನ ಹೆಸರು ಅಹಮದ್, ಮೂಲತಃ ಒರಿಸ್ಸಾದವನು. ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದ.. ಈತ ಮತ್ತು ಈತನ ಸ್ನೇಹಿತ ಆಯೂಬ್ ಇಬ್ಬರು ಸಂಬಂಧಿಕನೊಬ್ಬನನ್ನು ಕರೆದುಕೊಂಡು ಹೋಗಲು ಮೆಜೆಸ್ಟಿಕ್ ನಿಂದ ಆಟೋ ಹತ್ತಿದ್ದಾರೆ. ಆದರೆ ಅವರಿಬ್ಬರೂ ಸಹ ಎಲ್ಲಿ ಇಳಿಯಬೇಕು ಎಂಬ ಬಗ್ಗೆ ಕನ್ಫೂಸ್ ಆಗಿದ್ದಾರೆ. 


ಇದನ್ನೂ ಓದಿ- ಖ್ಯಾತ ನಟನ ಮದುವೆ ಪಾರ್ಟಿಯಲ್ಲಿ ಗಲಾಟೆ: ವೈಷ್ಣವಿ ಬಿಲ್ಡರ್ಸ್ ದರ್ಶನ್ ಕೊಲೆಗೆ ವೇದಾಂತ್ ದುಗಾರ್ ಯತ್ನ ಆರೋಪ


ಇನ್ನೂ ಆಟೋ ಚಾಲಕ ಅಶ್ವಥ್ ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಬಿಡಲು ಪ್ರಯಾಣಿಕರ ಬಳಿ ಹೆಚ್ಚು ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ. ಆದರೆ ಹಣ ನೀಡಲು ನಿರಾಕರಿಸಿದ್ದೆ ತಡ ಪ್ರಯಾಣಿಕರಾದ ಅಹಮದ್ ಮತ್ತು ಆಯೂಬ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಆಯೂಬ್ ಕಾಲಿಗೆ ಪೆಟ್ಟು ಬಿದ್ದಿದ್ರೆ.. ಅಹಮದ್ ಗಂಭೀರವಾಗಿ ಗಾಯಗೊಂಡಿದ್ದಾನೆ.. ಅಹಮದ್ ನನ್ನು ಆಸ್ಪತ್ರೆಗೆ ಸಾಗಿಸಿದರಾದ್ರು ಚಿಕಿತ್ಸೆ ಫಲಕಾರಿಯಾಗದೇ ಅಹಮದ್ ಮೃತಪಟ್ಟಿದ್ದಾನೆ. 


ನಿಯಮಗಳ ಪ್ರಕಾರ, ಆಟೋ ಚಾಲಕರು ತಮ್ಮ ವಾಹನದಲ್ಲಿ ಡಿಸ್ಲ್ಪೇ ಕಾರ್ಡ್ ಹಾಕಬೇಕು ಆದರೆ ಅಶ್ವಥ್ ಯಾವುದೇ ಡಿಸ್ಲ್ಪೇ ಕಾರ್ಡ್ ಹಾಕಿರಲಿಲ್ಲ. ಇನ್ನು ಈತ ಮೂಲತಃ ಹಾಸನದ ಹೊಳೆನರಸೀಪುರದವನಾಗಿದ್ದು ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವಾಸವಾಗಿದ್ದ.. ಈತನ ಮೇಲೆ ಹಾಸನ , ಉಪ್ಪಾರಪೇಟೆ ಸೇರಿದಂತೆ ಹಲವೆಡೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ. 


ಇದನ್ನೂ ಓದಿ- ಪಕ್ಕದ್ಮನೆ ಮಹಿಳೆ ಸ್ನಾನ ಮಾಡುತ್ತಿದ್ದಾಗ ಇಣುಕಿ ನೋಡಿದ ಕಾಮುಕನ ಬಂಧನ..!


ಕೆಲವು ಆಟೋ ಚಾಲಕರು ಮೀಟರ್ ಹಾಕದೇ ಜನರ ಬಳಿ ಹಗಲು ದರೋಡೆ ಮಾಡುತ್ತಿದ್ದಾರೆ. ಇನ್ನು ಕೆಲವು ಆಟೋ ಚಾಲಕರು ದುರ್ವರ್ತನೆ  ಮತ್ತು ಹೆಚ್ಚು ಹಣಕ್ಕಾಗಿ ಡಿಮ್ಯಾಂಡ್ ಮಾಡಿ ಕಿರಿಕಿರಿ‌ಮಾಡುತ್ತಾರೆ. ಇಂಥವರ ವಿರುದ್ಧ ದೂರು ನೀಡಲು ಆಟೋ ಹೆಲ್ಪ್ ಲೈನ್ ನಂಬರ್ 080 22868550, 080 22943381 ಕರೆ ಮಾಡಬಹುದಾಗಿದೆ.. ಅದೇನಾದ್ರು ಆಗಲಿ ಆಟೋ ಚಾಲಕ ಹಣಕ್ಕಾಗಿ ಪ್ರಯಾಣಿಕನ ಹೆಣ ಕೆಡವಿದ್ದು ದುರಂತವೇ ಸರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ