ಬೆಂಗಳೂರು : ಮನೆ ಕೆಲಸಕ್ಕೆ ಬೇಕು ಅಂತ ನಾವು ಸಿಕ್ಕ ಸಿಕ್ಕವರನ್ನೆಲ್ಲಾ ಸೇರುಸಿಕೊಂಡರೆ ಕೊನೆಗೆ ಆಗೋದೆ ಬೇರೆ. ಉಂಡು ಹೋದ ಕೊಂಡು ಹೋದ ಅನ್ನುವ ರೀತಿಯಲ್ಲಿ ನಿಮ್ಮ ಮನೆಯಲ್ಲಿ ಇರೋ ಬರೋದನ್ನೆಲ್ಲಾ ದೋಚ್ಕೊಂಡು ಹೋಗ್ತಾರೆ ಹುಷಾರ್. ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮನೆ ಕೆಲಸಕ್ಕೆಂದು ಸೇರಿ ಅದೆ ಮನೆಗೆ ಕನ್ನ ಹಾಕುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಮೂರು ಪ್ರತ್ಯೇಕ ಪ್ರಕರಣಗಳಲ್ಲಿ    15 ಆರೋಪಿಗಳನ್ನು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ದಕ್ಷಿಣ ವಿಭಾಗದ ಎರಡು ಠಾಣಾ ವ್ಯಾಪ್ತಿಯ ಮೂರು ಪ್ರಕರಣಗಳು ಪತ್ತೆ ಮಾಡಿದ್ದಾರೆ. ಒಟ್ಟು 2 ಕೋಟಿ ಮೌಲ್ಯದ ಚಿನ್ನಾಭರಣ, ನಗದು, ಪಿಸ್ತೂಲ್, ವಿದೇಶಿ‌ ಕರೆನ್ಸಿ ದೋಚಿದ್ದ ಆಸಾಮಿಗಳನ್ನು ಖೆಡ್ಡಾಗೆ ಕೆಡವಿದ್ದಾರೆ. ನೇಪಾಳ ಮೂಲದ ಎಂಟು‌ ಆರೋಪಿಗಳನ್ನ ಜೆ.ಪಿ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೇತ್ರಾ ಶಾಹಿ, ಲಕ್ಷ್ಮಿ ಸೇಜುವಲ್ , ಗೋರಕ್ ಬಹದ್ದೂರ್ ,ಭೀಮ್ ಬಹದ್ದೂರ್ , ಅಂಜಲಿ‌,ಅಬೇಶ್ ಶಾಹಿ , ಪ್ರಶಾಂತ್ ,ಪ್ರಕಾಶ್ ಬಂಧಿತ ಆರೋಪಿಗಳು.


ಇದನ್ನೂ ಓದಿ : ನಗರದ ಮೇಲೆ ಪೊಲೀಸ್ ಹದ್ದಿನ ಕಣ್ಣು: ಸೇಫ್ ಸಿಟಿ‌ ಯೋಜನೆಯ ಡಿಟೇಲ್ಸ್ ಇಲ್ಲಿದೆ..


ಕಿರಣ್ ಎಂಬಾತನ ಮನೆಯಲ್ಲಿ ಕೆಲಸಕ್ಕಿದ್ದ ಪ್ರೇಮ್ ಹಾಗೂ ಲಕ್ಷ್ಮಿ ಸೆಜುವಲ್ ಎಂಬ ಆರೋಪಿಗಳು  ಕಿರಣ್ ಪೋಷಕರು ತಿರುಪತಿಗೆ ತೆರಳಿದ್ದಾಗ ಮನೆಯಲ್ಲಿ ಕೃತ್ಯ ಎಸಗಲು ತಮ್ಮ ಟೀಮ್ ಕರೆದುಕೊಂಡು ಬಂದು ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.‌ ಬಂಧಿತರಿಂದ 1 ಕೆ.ಜಿ 173 ಗ್ರಾಂ ಚಿನ್ನಾಭರಣ, 350 ಗ್ರಾಂ ಬೆಳ್ಳಿ, 77.69 ಲಕ್ಷ ನಗದನ್ನು ವಶಪಡೆಸಿಕೊಂಡಿದ್ದಾರೆ. ಇನ್ನು ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿಯೇ ವೃದ್ಧ ಮಹಿಳೆಯೊಬ್ಬರ ಮನೆಯಲ್ಲಿ‌ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಅರ್ಜುನ್ ಶಾಯಿ, ಪೂರನ್ ಶಾಯಿ, ಹರೀಶ್ ಶಾಯಿ ಹಾಗೂ ರಮಿತ ಠಾಕೂರ್ ಬಂಧಿತ ಆರೋಪಿಗಳಾಗಿದ್ದು, ಬ್ರಿಜ್ ಭೂಷಣ್ ಎಂಬುವವರ ಮನೆಯಲ್ಲಿ ಕೆಲಸಕ್ಕಿದ್ದ ವಿಮಲಾ ಎಂಬಾಕೆ ಮಾಲೀಕ ಕೆಲಸಕ್ಕೆ ಹೋದಾಗ ಆತನ ಮನೆಯಲ್ಲಿ‌ ತನ್ನ ಗ್ಯಾಂಗ್ ನೊಂದಿಗೆ ಕೃತ್ಯ ಎಸಗಿದ್ದಳು. ಬಂಧಿತರಿಂದ 320 ಗ್ರಾಂ ಚಿನ್ನಾಭರಣ, 6.12 ಲಕ್ಷ ನಗದು,197 ಗ್ರಾಂ ಬೆಳ್ಳಿ ವಸ್ತು ವಶಕ್ಕೆ ಪಡೆದಕೊಂದು ತನಿಖೆ ಮುಂದುವರೆಸಿದ್ದಾರೆ.


ಇದನ್ನೂ ಓದಿ : ಲವ್ವರ್ ನೋಡಲು ಬಂದ ಗಗನಸಖಿ ಸುಸೈಡ್: ಇದು ಆತ್ಮಹತ್ಯೆಯೋ...? ಕೊಲೆಯೋ…?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.