ಬೆಂಗಳೂರು: ಆಗ್ನೇಯ ವಿಭಾಗ ಪೊಲೀಸರು ಭರ್ಜರಿ ಬೇಟೆ ಆಡಿದ್ದಾರೆ. ಲ್ಯಾಪ್ಟಾಪ್, ಮೊಬೈಲ್‌ ಕದಿಯುತ್ತಿದ್ದವರನ್ನ ಜೈಲಿಗಟ್ಟಿದ್ದಾರೆ. ಲಕ್ಷ ಲಕ್ಷ ಮೌಲ್ಯದ ಮಾಲುಗಳನ್ನ ವಶಕ್ಕೆ ಪಡೆದಿದ್ದಾರೆ. ತಮಿಳು ಸೆಲ್ವಂ, ಕಾರ್ತಿಕ್ ಮತ್ತು ಲಕ್ಷ್ಮಣ ಬಂಧಿತ ಆರೋಪಿಗಳು. ತಮಿಳುನಾಡಿನ ಮೂಲದವರಾದ ಖತರ್ನಾಕ್ ಗಳು ಬೆಂಗಳೂರಿಗೆ ಪೇಂಟಿಂಗ್ ಕೆಲಸಕ್ಕೆ ಅಂತಾ  ಬರುತ್ತಿದ್ದರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: 10 ಕೆಜಿ ಅಲ್ಲ 6 ಕೆಜಿ ಅಕ್ಕಿ ವಿತರಣೆಗೂ ಸರ್ವರ್ ಡೌನ್ ಡೌನ್ !


ಐಷಾರಾಮಿ ಜೀವನದ ಹುಚ್ಚಿಗೆ ಮನೆ, ಪಿಜಿ ಬಾಡಿಗೆ ಕೇಳೊ ನೆಪದಲ್ಲಿ ಹೋಗ್ತಿ ಯಾರು ಇಲ್ಲ ಅಂತಾ ಗೊತ್ತಾಗ್ತಿದ್ದಂತೆ ಕೈಗೆ ಸಿಕ್ಕ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ಎಗರಿಸಿ ಬರ್ತಿದ್ರು. ಆರೋಪಿಗಳ ಪತ್ತೆಗೆ ಬಲೆ ಬೀಸಿದ ಮೈಕೋ ಲೇಔಟ್ ಪೊಲೀಸರು ಕಳ್ಳತನ ಮಾಡಿದ್ದ 33 ಲ್ಯಾಪ್ಟಾಪ್ 40 ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿಗಳ ಮೇಲೆ ಕರ್ನಾಟಕ ಮಾತ್ರವಲ್ಲದೇ ಗುಜರಾತ್ ಮತ್ತು ಕೇರಳದಲ್ಲಿಯೂ ಕೇಸ್ ಗಳಿರೋದು ತನಿಖೆಯಿಂದ ಗೊತ್ತಾಗಿದೆ. 


ಇನ್ನೂ ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ದಾರಿಹೋಕರ ಮೊಬೈಲ್ ಎಗರಿಸ್ತಿದ್ದ ಸಂತೋಷ್ ಅಭಿಲಾಷ್, ಶ್ರೀನಿವಾಸ್. ಎಂಬುವವರನ್ನ ಮಡಿವಾಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಐಫೋನ್, ಸ್ಯಾಮ್ಸಂಗ್, ಓನ್ ಪ್ಲಸ್ ಸೇರಿದಂತೆ 25 ಲಕ್ಷ ಮೌಲ್ಯದ 120 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ವಿಲಾಸಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದಿದ್ದು ಗೊತ್ತಾಗಿದೆ.


ಇದನ್ನೂ ಓದಿ: ವರ್ಕ್ ಆಯ್ತು ಸೇಫ್ಟಿ ಐಲ್ಯಾಂಡ್: ಪತ್ತೆಯಾಯ್ತು ಮಾಲ್ಡೀವ್ಸ್ ಪ್ರಜೆಯ ಬ್ಯಾಗ್..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.