10 ಕೆಜಿ ಅಲ್ಲ 6 ಕೆಜಿ ಅಕ್ಕಿ ವಿತರಣೆಗೂ ಸರ್ವರ್ ಡೌನ್ ಡೌನ್ !

Sever Down : ರಾಜ್ಯ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಭಾಗ್ಯಗಳಲ್ಲಿ ಒಂದಾದ ಅನ್ನಭಾಗ್ಯ ಹತ್ತು ಕೆಜಿ ಅಕ್ಕಿ ವಿತರಿಸಲು ಸರ್ಕಸ್ ನಡೆಸಿರುವ ಬೆನ್ನಲ್ಲೆ ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ಸೇವಾ ವ್ಯವಹಾರಗಳ ಇಲಾಖೆ ಸರ್ವರ್ ಡೌನ್ ಸಾರ್ವಜನಿಕರ ಕಣ್ಣು ಕೆಂಪಾಗುವಂತೆ ಮಾಡಿದೆ.  

Written by - Savita M B | Last Updated : Jun 27, 2023, 07:49 AM IST
  • ರೇಷನ್ ಕಾರ್ಡ್ ಹಿಡಿದು ಗಂಟೆ ಎರೆಡು ಗಂಟೆ ಕಾಯಬೇಕಾಗಿದೆ
  • 6 ಕೆಜಿ ಅಕ್ಕಿ ಪಡೆಯಲು ಕಾಯುವ ಪ್ರಸಂಗ ಬೇಸರ ತರಸಿದೆ
  • ಮಹಿಳೆಯರು ನಾಗರೀಕರು ಸರ್ವರ್'ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
10 ಕೆಜಿ ಅಲ್ಲ 6 ಕೆಜಿ ಅಕ್ಕಿ ವಿತರಣೆಗೂ ಸರ್ವರ್ ಡೌನ್ ಡೌನ್ ! title=

Kundgol : ಹೌದು ! ಕುಂದಗೋಳ ತಾಲೂಕಿನ 27 ಗ್ರಾಮ ಪಂಚಾಯಿತಿ 48 ನ್ಯಾಯಬೆಲೆ ಅಂಗಡಿಗಳು ಪಡಿತರ ಸಾಮಗ್ರಿ ನೀಡಲು ಪ್ರತಿ ತಿಂಗಳು ಗ್ರಾಹಕರ ಥಂಬ್ ಅಥವಾ ಓಟಿಪಿ ಸಂಖ್ಯೆ ಪಡೆಯಬೇಕಿದೆ.

ಆದರೆ ಕಳೆದ ಜೂನ್ 21 ರಿಂದ ಇಲ್ಲಿಯವರೆಗೆ ಆಹಾರ ಇಲಾಖೆ ಸರ್ವರ್ ಡೌನ್ ಆಗಿರುವ ಕಾರಣ ಪಡಿತರ ಸಾಮಗ್ರಿ ಹಂಚಲು ಥಂಬ್ ಓಟಿಪಿ ಪಡೆಯುವ ಪ್ರಕ್ರಿಯೆ ವಿಳಂಬವಾಗಿ ಮಹಿಳೆಯರು ನಾಗರೀಕರು ಸರ್ವರ್'ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ-ಸಂವಿಧಾನ ಇಲ್ಲದಿದ್ರೆ ನಾನು, ಸಿಟಿ ರವಿ, ಈಶ್ವರಪ್ಪ ಕುರಿ ಮೇಯಿಸ್ತಾ ಇರಬೇಕಿತ್ತು: ಸಿದ್ದರಾಮಯ್ಯ

ನಿತ್ಯ ವಿವಿಧೆಡೆ ಉದ್ಯೋಗ ಹಾಗೂ ಕೃಷಿ ಕಾಯಕ ತೆರಳುವ ಜನರು ಕೈಯಲ್ಲಿ ರೇಷನ್ ಕಾರ್ಡ್ ಹಿಡಿದು ಗಂಟೆ ಎರೆಡು ಗಂಟೆ ಅರ್ಧ ದಿನ 10 ಕೆಜಿ ಅಲ್ಲಾ ಬದಲಾಗಿ 6 ಕೆಜಿ ಅಕ್ಕಿ ಪಡೆಯಲು ಕಾಯುವ ಪ್ರಸಂಗ ಬೇಸರ ತರಸಿ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ಸೇವಾ ವ್ಯವಹಾರಗಳ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ-Nag Panchami 2023: ನಾಗಪಂಚಮಿಯ ದಿನಾಂಕ ಮತ್ತು ಪೂಜೆಯ ಮುಹೂರ್ತ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News