ಬೆಂಗಳೂರು: ದಿ ಪಾರ್ಕ್ ಹೋಟೆಲ್‌ನಲ್ಲಿ ನಡೆದಿದ್ದ ಡ್ರಗ್ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ಸಹೋದರ ಸಿದ್ಧಾಂತ್ ಕಪೂರ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ಬೆಂಗಳೂರಿನ ಹಲಸೂರು ಪೊಲೀಸರು ನೋಟಿಸ್ ನೀಡಲಿದ್ದಾರೆ. ವಾಟ್ಸ್ಆ್ಯಪ್ ಹಾಗೂ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಕಳುಹಿಸಿ ಒಂದು ವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಕರೆಯಲಿದ್ದಾರೆ‌. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Shocking! ಗುರುಗ್ರಾಮದ DSP ಹತ್ಯೆ ಮಾದರಿಯಲ್ಲೇ ಲೇಡಿ ಎಸ್ಪಿ ಕೊಲೆ..!


ದಿ ಪಾರ್ಕ್ ಹೋಟೆಲ್‌ನಲ್ಲಿ ತಡರಾತ್ರಿ ನಡೆದ ಪಾರ್ಟಿಯಲ್ಲಿ ಸಿದ್ಧಾಂತ್ ಕಪೂರ್ ಡ್ರಗ್ಸ್ ಸೇವಿಸಿದ್ದರು. ಪಾರ್ಟಿ ಓಪನ್ ಫಾರ್ ಪಬ್ಲಿಕ್ ಆಗಿದ್ದು, ದಾಳಿ ವೇಳೆ  ಡಸ್ಟ್ ಬಿನ್ ಬಳಿ 7 MDMA ಮಾತ್ರೆಗಳು, ಗಾಂಜಾ ಪತ್ತೆಯಾಗಿದ್ದವು. ದಿ ಪಾರ್ಕ್ ಹೊಟೇಲ್ ಮೇಲೆ ಪೊಲೀಸರು ದಾಳಿ ನಡೆಸಿದಾಗ ಡ್ರಗ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಅನೇಕರು ಸಿಕ್ಕಿಬಿದ್ದಿದ್ದರು. ಅವರಲ್ಲಿ ಸಿದ್ಧಾಂತ್ ಕಪೂರ್ ಸಹ ಒಬ್ಬರು.


ವೈದ್ಯಕೀಯ ಪರೀಕ್ಷೆ ವೇಳೆ ಸಿದ್ಧಾಂತ್ ಕಪೂರ್‌ ಸೇರಿ ಐವರು ಡ್ರಗ್ ಸೇವಿಸಿದ್ದು ಸಾಬೀತಾಗಿತ್ತು. ವಿಚಾರಣೆ ನಡೆಸಿ ನಂತರ ಬಂಧಿತರಿಗೆ ಬೇಲ್​ ನೀಡಿ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಮತ್ತೆ ಸಿದ್ಧಾಂತ್ ಕಪೂರ್​ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ‌. ಈ ಮೊದಲು ನಡೆದ ವಿಚಾರಣೆಯಲ್ಲಿ ಸಿದ್ಧಾಂತ್ ಪಾರ್ಟಿಯಲ್ಲಿ ಯಾರೋ ನೀರಿನಲ್ಲಿ ಮಾದಕ ವಸ್ತು ಮಿಕ್ಸ್​ ಮಾಡಿ ನೀಡಿರಬಹುದು ಎಂದು ಹೇಳಿದ್ದರು. ಹಾಗಾಗಿ ಈ ಕುರಿತಂತೆ ವಿಚಾರಣೆ ನಡೆಸಲು ಪೊಲೀಸರು ನೋಟಿಸ್​​ ಕಳುಹಿಸಲಿದ್ದಾರೆ. 


ಇದನ್ನೂ ಓದಿ: NEET UG 2022: ವಿದ್ಯಾರ್ಥಿಗಳ ಒಳ ಉಡುಪು ತೆಗೆಯುವಂತೆ ಒತ್ತಾಯಿಸಿದ ಐವರು ಮಹಿಳೆಯರ ಬಂಧನ


ಇನ್ನು ಪಾರ್ಟಿ ನಡೆಯುತ್ತಿದ್ದ ಹೋಟೆಲ್‌ಗೆ ಪೊಲೀಸರು ನೋಟಿಸ್ ನೀಡಿದ್ದು, ಈ ಹಿಂದೆಯೂ ಸಿದ್ಧಾಂತ್ ಸೇರಿ ಮತ್ತಿರರಿಗೆ ಪೊಲೀಸರು ಅನೇಕ ಪ್ರಶ್ನೆಗಳನ್ನು ಮುಂದಿಟ್ಟು ವಿಚಾರಣೆ ನಡೆಸಿದ್ದರು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.