Shocking! ಗುರುಗ್ರಾಮದ DSP ಹತ್ಯೆ ಮಾದರಿಯಲ್ಲೇ ಲೇಡಿ ಪಿಎಸ್‌ಐ ಕೊಲೆ..!

ಅಪರಾಧ ನಿಗ್ರಹ ದಳದ ಕಾರ್ಯಾಚರಣೆ ವೇಳೆ ಅತಿವೇಗವಾಗಿ ವಾಹನ ಚಲಾಯಿಸಿ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಸಂಧ್ಯಾ ಟೋಪ್ನೋ ಎಂಬುವರನ್ನು ಹತ್ಯೆಗೈಯಲಾಗಿದೆ.

Written by - Puttaraj K Alur | Last Updated : Jul 20, 2022, 12:42 PM IST
  • ಗುರುಗ್ರಾಮದ DSP ಹತ್ಯೆ ಮಾದರಿಯಲ್ಲಿಯೇ ಲೇಡಿ ಪಿಎಸ್‍ಐ ಮರ್ಡರ್
  • ಜಾರ್ಖಂಡ್‍ನ ರಾಂಚಿಯಲ್ಲಿ ನಡೆದಿರುವ ಆಘಾತಕಾರಿ ಘಟನೆ
  • ಅಪರಾಧ ನಿಗ್ರಹ ದಳದ ಕಾರ್ಯಾಚರಣೆ ವೇಳೆ ವಾಹನ ಹತ್ತಿಸಿ ಹತ್ಯೆ
Shocking! ಗುರುಗ್ರಾಮದ DSP ಹತ್ಯೆ ಮಾದರಿಯಲ್ಲೇ ಲೇಡಿ ಪಿಎಸ್‌ಐ ಕೊಲೆ..!  title=
ಲೇಡಿ ಪಿಎಸ್‍ಐ ಮರ್ಡರ್

ರಾಂಚಿ: ಹರಿಯಾಣದ ಗುರುಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಹೋದ ಡಿಎಸ್‍ಪಿ ಮೇಲೆ ಟ್ರಕ್ ಹತ್ತಿಸಿ ಹತ್ಯೆ ಮಾಡಲಾಗಿತ್ತು. ಪೊಲೀಸರು ಗುಂಡು ಹಾರಿಸುವ ಮೂಲಕ ಆರೋಪಿಯನ್ನು ಬಂಧಿಸಿದ್ದರು. ಇದೇ ಮಾದರಿಯಲ್ಲಿ ರಾಂಚಿಯಲ್ಲಿಯೂ ಸಹ ಲೇಡಿ ಪಿಎಸ್‌ಐಯೊಬ್ಬರನ್ನು ಕೊಲೆ ಮಾಡಿರುವ ಶಾಕಿಂಗ್ ಘಟನೆ ನಡೆದಿದೆ.  

ಬುಧವಾರ ಬೆಳ್ಳಂಬೆಳಗ್ಗೆ ಈ ಆಘಾತಕಾರಿ ಘಟನೆ ನಡೆದಿದೆ. ಅಪರಾಧ ನಿಗ್ರಹ ದಳದ ಕಾರ್ಯಾಚರಣೆ ವೇಳೆ ಅತಿವೇಗವಾಗಿ ವಾಹನ ಚಲಾಯಿಸಿ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಸಂಧ್ಯಾ ಟೋಪ್ನೋ ಎಂಬುವರನ್ನು ಹತ್ಯೆಗೈಯಲಾಗಿದೆ. ವರದಿಗಳ ಪ್ರಕಾರ, ತೂಪುದಾನದ ಉಸ್ತುವಾರಿಯಾಗಿ ನಿಯೋಜನೆಗೊಂಡಿದ್ದ ಮಹಿಳಾ ಎಸ್‌ಐ ಸಂಧ್ಯಾ ಅವರು ತಪಾಸಣೆ ವೇಳೆ ಪಿಕಪ್ ವ್ಯಾನ್ ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ, ವಾಹನ ನಿಲ್ಲಿಸದೆ ಪೊಲೀಸ್ ಅಧಿಕಾರಿಯ ಮೇಲೆಯೇ ವಾಹನ ಹತ್ತಿಸಲಾಗಿದೆ. ಸಂಧ್ಯಾರಿಗೆ ವಾಹನ ಡಿಕ್ಕಿ ಹೊಡೆಸಿದ ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ: Shocking News: ಟ್ರಕ್ ಹರಿಸಿ ಡಿಎಸ್‌ಪಿ ಹತ್ಯೆ..! ಗುಂಡು ಹಾರಿಸಿ ಆರೋಪಿಯ ಬಂಧನ

ಘಟನೆಯ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಬ್ ಇನ್ಸ್‌ಪೆಕ್ಟರ್ ಶವವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಬುಧವಾರ ಬೆಳಗ್ಗೆ 3 ಗಂಟೆ ವೇಳೆ ತೂಪುದಾನದಲ್ಲಿ ಅಪರಾಧ ತಡೆ ತಪಾಸಣಾ ಅಭಿಯಾನ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಹರ್ಯಾಣದಲ್ಲಿ ಮಂಗಳವಾರ ನಡೆದ ಇದೇ ರೀತಿಯ ಘಟನೆಯಲ್ಲಿ ನುಹ್ ಜಿಲ್ಲೆಯ ಪಚ್‌ಗಾಂವ್ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ತಡೆಯಲು ಮುಂದಾಗಿದ್ದ ಡಿಎಸ್‌ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರ ಮೇಲೆ ಟ್ರಕ್ ಹತ್ತಿಸಿ ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ: ಪತ್ನಿ ಮತ್ತು ಪುತ್ರನ ಸಮೇತ ಕಾರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ..! ಆರ್ಥಿಕ ಸಂಕಷ್ಟವೇ ಕಾರಣವಂತೆ

ಈ ಆಘಾತಕಾರಿ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹರಿಯಾಣ ಗೃಹ ಸಚಿವ ಅನಿಲ್ ವಿಜ್, ‘ಹಿರಿಯ ಪೊಲೀಸ್ ಅಧಿಕಾರಿಯನ್ನು ಕೊಂದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ. ‘ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಆದೇಶಿಸಿದ್ದೇನೆ. ನಾವು ಆ ಪ್ರದೇಶದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸುತ್ತೇವೆ. ತಪ್ಪಿತಸ್ಥರು ಯಾರೇ ಆಗಿರಲಿ ಯಾರನ್ನೂ ಬಿಡುವುದಿಲ್ಲ’ವೆಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News