NEET UG 2022: ವಿದ್ಯಾರ್ಥಿಗಳ ಒಳ ಉಡುಪು ತೆಗೆಯುವಂತೆ ಒತ್ತಾಯಿಸಿದ ಐವರು ಮಹಿಳೆಯರ ಬಂಧನ

NEET UG 2022: ಪ್ರಕರಣಕ್ಕೆ ಸಂಬಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಕೇರಳ ಸರ್ಕಾರವು ಕೇಂದ್ರವನ್ನು ಒತ್ತಾಯಿಸಿದೆ. ಇದಾದ ಬಳಿಕ ಪರೀಕ್ಷೆಯನ್ನು ನಡೆಸುವ ಎನ್‌ಟಿಎ ಕೂಡ ಸಮಿತಿಯನ್ನು ರಚಿಸಿದೆ. 

Written by - Ranjitha R K | Last Updated : Jul 20, 2022, 11:05 AM IST
  • ನೀಟ್-ಯುಜಿ 2022ಕ್ಕೆ ಹಾಜರಾಗುವ ಮುನ್ನ ಒಳಉಡುಪು ತೆಗೆಯುವಂತೆ ಒತ್ತಾಯ
  • ಐದು ಮಹಿಳೆಯರ ಬಂಧನ
  • ಕೇಂದ್ರದಿಂದ ಸತ್ಯ ಶೋಧನಾ ಸಮಿತಿ ರಚನೆ
NEET UG 2022: ವಿದ್ಯಾರ್ಥಿಗಳ ಒಳ ಉಡುಪು ತೆಗೆಯುವಂತೆ ಒತ್ತಾಯಿಸಿದ ಐವರು ಮಹಿಳೆಯರ ಬಂಧನ  title=
NEET UG 2022

NEET UG 2022 : ನೀಟ್-ಯುಜಿ 2022ಕ್ಕೆ ಹಾಜರಾಗುವ ಮುನ್ನ ವಿದ್ಯಾರ್ಥಿಗಳನ್ನು ಒಳಉಡುಪು ತೆಗೆಯುವಂತೆ ಒತ್ತಾಯಿಸಿದ್ದಾರೆ ಎನ್ನಲಾದ ಐವರು ಮಹಿಳೆಯರನ್ನು ಬಂಧಿಸಲಾಗಿದೆ. ಬಂಧಿತ ಮಹಿಳೆಯರಲ್ಲಿ ಮೂವರು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ, ನೇಮಿಸಿದ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರೆ, ಇಬ್ಬರು ಘಟನೆ ನಡೆದ ಕೊಲ್ಲಂನ ಆಯುರ್‌ನ ಖಾಸಗಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿ. ಜುಲೈ 17 ರ ಅರ್ಹತಾ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವ ಮುನ್ನ ಒಳ ಉಡುಪು ತೆಗೆಯುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಲಾಗಿತ್ತು ಎಂದು ದೂರು ನೀಡಲಾಗಿದೆ. ವಿದ್ಯಾರ್ಥಿಗಳು ನೀಡಿದ ದೂರಿನ ಆಧಾರದ ಮೇಲೆ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಪ್ರಕರಣಕ್ಕೆ ಸಂಬಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಕೇರಳ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ. ಇದಾದ ಬಳಿಕ ಪರೀಕ್ಷೆಯನ್ನು ನಡೆಸುವ ಎನ್‌ಟಿಎ ಕೂಡ ಸಮಿತಿಯನ್ನು ರಚಿಸಿದೆ. ಒಳಉಡುಪುಗಳಲ್ಲಿ ಲೋಹದ ಕೊಕ್ಕೆ ಇರುವುದರಿಂದ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧ ಪಟ್ಟಂತೆ ಐಪಿಸಿ ಸೆಕ್ಷನ್ 354 ಮತ್ತು 509 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.  

ಇದನ್ನೂ ಓದಿ : ಪತ್ನಿ ಮತ್ತು ಪುತ್ರನ ಸಮೇತ ಕಾರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ..! ಆರ್ಥಿಕ ಸಂಕಷ್ಟವೇ ಕಾರಣವಂತೆ

ಘಟನೆ ನಂತರ ಕೊಲ್ಲಂನಲ್ಲಿ ತೀವ್ರ ಪ್ರತಿಭಟನೆ ನಡೆದಿತ್ತು. ಘಟನೆಯ ತೀವ್ರತೆಯನ್ನು ಗಮನಿಸಿದ ಕೇಂದ್ರ ಶಿಕ್ಷಣ ಸಚಿವಾಲಯವು ಈ ಬಗ್ಗೆ ಕ್ರಮಕ್ಕೆ ಮುಂದಾಗಿದೆ. ಸತ್ಯಾಂಶಗಳನ್ನು ವಿವರವಾಗಿ ಖಚಿತಪಡಿಸಿಕೊಳ್ಳಲು ಎನ್‌ಟಿಎಯಿಂದ ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಸತ್ಯಶೋಧನಾ ಸಮಿತಿಯ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಈ ನಡುವೆ,  ಘಟನೆಯ ಬಗ್ಗೆ "ನಮಗೆ ಯಾವುದೇ ದೂರು ಬಂದಿಲ್ಲ. ಮಾಧ್ಯಮ ವರದಿಗಳಲ್ಲಿನ ಆಧಾರದ ಮೇಲೆ ಕೇಂದ್ರದ ಅಧೀಕ್ಷಕರು ಮತ್ತು ವೀಕ್ಷಕರಿಂದ ವರದಿಯನ್ನು ಕೋರಲಾಗಿದೆ ಎಂದು ಹಿರಿಯ ಎನ್‌ಟಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ. 

ಇದನ್ನೂ ಓದಿ : Shocking News: ಟ್ರಕ್ ಹರಿಸಿ ಡಿಎಸ್‌ಪಿ ಹತ್ಯೆ..! ಗುಂಡು ಹಾರಿಸಿ ಆರೋಪಿಯ ಬಂಧನ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News