ಬೆಂಗಳೂರು: ದಿನ ಖರ್ಚಿಗೆ ಹಣ ಬೇಕು, ಐಶಾರಾಮಿ ಜೀವನ ನಡೆಸಬೇಕು ಅಂತಾ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಸಂಜಯ ನಗರ ಪೊಲೀಸರು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ತಮಿಳುನಾಡು ಮೂಲದ ಇಸಯ್ ರಾಜ್ ಬಂಧಿತ ಆರೋಪಿ. ಕೆಲ ವರ್ಷಗಳಿಂದ ಕುಟುಂಬ ಸಮೇತ ಅಮೃತಹಳ್ಳಿಯಲ್ಲಿ ವಾಸವಾಗಿದ್ದ. ಜೀವನಕ್ಕಾಗಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ. ಡ್ರಗ್ಸ್ ಚಟಕ್ಕೆ ದಾಸನಾಗಿದ್ದ ಈತನ ವಿರುದ್ಧ ಸಂಪಿಗೆಹಳ್ಳಿ ಹಾಗೂ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು‌. 


ಇದನ್ನೂ ಓದಿ- Karnataka Crime : ಪರಪುರುಷನ ಜೊತೆ ಪತ್ನಿ ಪೋನ್ ಸಂಪರ್ಕ : ಹೆಂಡತಿ ಕೊಂದು ಎಸ್ಕೇಪ್ ಆಗಿದ್ದ ಪತಿ ಅರೆಸ್ಟ್


ಡ್ರಗ್ಸ್ ಚಟ ಬಿಡಿಸಲು ಕುಟುಂಬಸ್ಥರು ಈತನನ್ನು ಹತ್ತಿರದ ರಿಹಾಬಿಲೇಷನ್ ಸೆಂಟರ್ ಸೆಂಟರ್ ಸೇರಿಸಿದ್ದರು. ಎರಡು ವರ್ಷಗಳ ಕಾಲ ಚಿಕಿತ್ಸೆ ಪಡೆದು ಹೊರಬಂದಿದ್ದ. ಕೈಯಲ್ಲಿ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದ. ದಿನದ ಖರ್ಚಿಗೆ ಹಣ ಹೊಂದಿಸಲು ಪರದಾಡುತ್ತಿದ್ದ ಇಸಯ್ ರಾಜ್ ಗೆ ಹೊಳೆದಿದ್ದು ಕಳ್ಳತನ ದಾರಿ.


ಹಣಕ್ಕಾಗಿ ಕಳ್ಳತನಕ್ಕೆ ಕೈ ಹಾಕಿದ ಈತ, ಪ್ಲ್ಯಾನ್ ರೂಪಿಸಿ ಅಪಾರ್ಟ್ಮೆಂಟ್‌ಗಳನ್ನುಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದನು. ಫ್ಲಂಬರ್, ಎಲೆಕ್ಟ್ರಿಷಿಯನ್ ಸೋಗಿನಲ್ಲಿ ಅಪಾರ್ಟ್ಮೆಂಟ್ ನುಗ್ಗುತ್ತಿದ್ದ. ಕಿಟಕಿ ಪಕ್ಕದಲ್ಲಿರುವ ಬೀಗ ಹಾಕಿದ ಮನೆಯನ್ನು ಟಾರ್ಗೆಟ್ ಮಾಡಿಕೊಂಡು ಅದೇ ಅಪಾರ್ಟ್ಮೆಂಟ್ ನ ಟೆರೇಸ್ ನಲ್ಲಿ‌ ಉಳಿದುಕೊಳ್ಳುತ್ತಿದ್ದ‌. ರಾತ್ರಿ ವೇಳೆ ಮನೆಯ ಕಿಟಕಿ ಮುರಿದು ಕಳ್ಳತನ ಮಾಡುತ್ತಿದ್ದ. ಕೃತ್ಯವೆಸಗುವಾಗ ಮನೆಯ ಯಾವುದೇ ವಸ್ತು ಚೆಲ್ಲಾಪಿಲ್ಲಿಯಾಗದಂತೆ ನಿಗಾವಹಿಸುತ್ತಿದ್ದ. ಕಳ್ಳತನ ಬಳಿಕ ಒಬ್ಬಂಟಿಗನಾಗಿ ಹೊರ ಹೋದರೆ ಅನುಮಾನ ಬರುತ್ತೆ ಅಂತಾ ರಾತ್ರಿಯಿಡಿ ಟೇರೆಸ್ ಮೇಲೆ  ಉಳಿದುಕೊಳ್ಳುತ್ತಿದ್ದ. ಮಾರನೇ ದಿನ ಬೆಳಗ್ಗೆ ಹಾಲು ಹಾಕುವವರು, ಕೆಲಸಗಾರರ ಬರುವುದನ್ನ ಕಂಡು ಅವ್ರ ಜೊತೆಯಲ್ಲಿ ಎಸ್ಕೇಪ್ ಆಗುತ್ತಿದ್ದನಂತೆ. 


ಇದನ್ನೂ ಓದಿ- ರಸ್ತೆಯಲ್ಲಿಯೇ ಪ್ರೇಮಿಗಳ ಲವ್ವಿ-ಡವ್ವಿ; ಪೆಟ್ರೊಲ್ ಟ್ಯಾಂಕ್ ಮೇಲೆ ಕುಳಿತು ಲವರ್ಸ್ ಹುಚ್ಚಾಟ!


ಅದೇ ರೀತಿ ಕಳೆದ  ಮಾರ್ಚ್‌ನಲ್ಲಿ ಸಂಜಯ್ ನಗರದ ಮನೆಯೊಂದರಲ್ಲಿ ಲಾಕರ್ ಸಮೇತ ಚಿನ್ನಾಭರಣ ದೋಚಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೆರೆಯಾಗಿದ್ದ ಸಿಸಿಟಿವಿ ಸೇರಿದಂತೆ ತಾಂತ್ರಿಕ ತನಿಖೆ ನಡೆಸಿ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಆರೋಪಿ ಬಂಧನದಿಂದ 12 ಪ್ರಕರಣ ಪತ್ತೆಯಾಗಿದ್ದು 30 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ದುಬಾರಿ ವಾಚ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.


  https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.