ಡ್ರ್ಯಾಗರ್ ನಿಂದ ಇರಿದ: ಕರಿಯ ಫಿಲ್ಮ್ ಸ್ಟೈಲಲ್ಲಿ ಹೆಗಲ ಮೇಲೆ ಆಸ್ಪತ್ರೆಗೆ ಹೊತ್ತೊಯ್ದ..

ಸೂರಿ ಎಂಬ ಯುವಕ ಸ್ನೇಹಿತ ಮುನಿ ಜೊತೆ ಕಿರಿಕ್‌ ಮಾಡಿಕೊಂಡಿದ್ದ. ಜಸ್ಟ್ ಮುನಿಗೆ ವಾರ್ನ್ ಮಾಡೋಕೆ ಸೂರಿ ಡ್ರ್ಯಾಗರ್ ಸಮೇತ ಬಂದಿದ್ದ...

Written by - VISHWANATH HARIHARA | Edited by - Yashaswini V | Last Updated : Apr 21, 2022, 03:46 PM IST
  • ಈ ಘಟನೆ ನಡೆದಿರೋದು ನಗರದ ಹೆಗ್ಗನಹಳ್ಳಿ ಕ್ರಾಸ್ ಬಳಿ.
  • ಸೂರಿ ಚಾಕು ಇರಿತಕ್ಕೊಳಗಾಗಿರುವ ಯುವಕನಾಗಿದ್ದಾನೆ.
  • ಸ್ನೇಹಿತ ಮುನಿ ಜೊತೆ ಕಿರಿಕ್‌ ಮಾಡಿಕೊಂಡಿದ್ದ ಸೂರಿ.
ಡ್ರ್ಯಾಗರ್ ನಿಂದ ಇರಿದ: ಕರಿಯ ಫಿಲ್ಮ್ ಸ್ಟೈಲಲ್ಲಿ ಹೆಗಲ ಮೇಲೆ ಆಸ್ಪತ್ರೆಗೆ ಹೊತ್ತೊಯ್ದ.. title=
Bengaluru Crime

ಬೆಂಗಳೂರು: ಈ ಸೀನ್ ನೋಡಿದ್ರೆ ದರ್ಶನ್ ಅಭಿನಯದ ಕರಿಯ ಸಿನಿಮಾ ನೆನಪಾಗುತ್ತೆ. ಕರಿಯ ಓಪನಿಂಗ್ ಸೀನ್ ನಲ್ಲಿ ಕರಿಯ ರೌಡಿಯನ್ನು ಕೊಂದು ಹೆಗಲ ಮೇಲೆ ಹಾಕೊಂಡು ಹೋಗ್ತಿರ್ತಾನೆ.‌ ಈ ಸೀನ್ ನಲ್ಲೂ ಹಾಗೇ ಡ್ರ್ಯಾಗರ್ ನಿಂದ ಇರಿದು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾನೆ. ಅಂದಹಾಗೆ ಇವನ ಹೆಸ್ರು ಮುನಿ@ಮುನಿರಾಜ.

ಈ ಘಟನೆ ನಡೆದಿರೋದು ನಗರದ ಹೆಗ್ಗನಹಳ್ಳಿ ಕ್ರಾಸ್ ಬಳಿ. ಸೂರಿ ಚಾಕು ಇರಿತಕ್ಕೊಳಗಾಗಿರುವ ಯುವಕನಾಗಿದ್ದಾನೆ. ಸೂರಿ ಸ್ನೇಹಿತ ಮುನಿ ಜೊತೆ ಕಿರಿಕ್‌ ಮಾಡಿಕೊಂಡಿದ್ದ. ಜಸ್ಟ್ ಮುನಿಗೆ ವಾರ್ನ್ ಮಾಡೋಕೆ ಸೂರಿ ಡ್ರ್ಯಾಗರ್ ಸಮೇತ ಬಂದಿದ್ದ ಎನ್ನಲಾಗಿದೆ.

ಇದನ್ನೂ ಓದಿ- ಪತ್ನಿಯ ಬೆತ್ತಲೆ ಫೋಟೋ ಸ್ನೇಹಿತನಿಗೆ ಕಳುಹಿಸಿದ ವಿಕೃತ ಪತಿ: ಮುಂದೇನಾಯ್ತು!?

ಈ ವೇಳೆ ಜಗಳ ಕೈ ಕೈ ಮಿಲಾಯಿಸೋ ಹಂತಕ್ಕೆ ಹೋದಾಗ ಸೂರಿ ಡ್ರ್ಯಾಗರ್ ಹಿಡಿದು ಮುನಿಗೆ ಹೊಡೆಯಲು ಮುಂದಾದಾಗ ಅದೇ ಡ್ರ್ಯಾಗರ್ ನಿಂದ ಮುನಿ ಸೂರಿಗೆ ಚುಚ್ಚಿದ್ದ....

ಇದನ್ನೂ ಓದಿ- ಕ್ರಿಪ್ಟೋ ಕರೆನ್ಸಿಯಲ್ಲಿ ಲಾಭದ ಆಸೆ ತೋರಿಸಿ ಕೋಟಿ ಕೋಟಿ ರೂ. ವಂಚನೆ..!

ಪ್ರಜ್ಞೆ ತಪ್ಪಿದ ಸೂರಿಯನ್ನು ಹೆಗಲ  ಮೇಲೆ ಹಾಕೊಂಡು ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರೋ ಆಸ್ಪತ್ರೆ ಬಳಿ ಬಂದಿದ್ದ. ಪೊಲೀಸರಿಗೆ ವಿಷಯ ಗೊತ್ತಾಗಿದೆ ಅಂತ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಾಗಿಲಲ್ಲೇ ಸೂರಿಯನ್ನು ಮಲಗಿಸಿ ಎಸ್ಕೇಪ್ ಆಗೋಕೆ ಟ್ರೈ ಮಾಡಿದ್ದ ಮುನಿಯನ್ನು ರಾಜಗೋಪಾಲ ನಗರ ಪೊಲೀಸ್ರು ಬಂಧಿಸಿದ್ದಾರೆ.

ಕಳೆದ 18 ರಂದು ನಡೆದ ಘಟನೆಯ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News