ಮಂಗಳೂರು(ದಕ್ಷಿಣ ಕನ್ನಡ): ನಿಷೇಧಿತ ಭಯೋತ್ಪಾದಕ ಸಂಘಟನೆ ಜೊತೆ ನಂಟು ಹೊಂದಿರುವ ಆರೋಪ ಹಿನ್ನೆಲೆ ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡವು ಇಬ್ಬರನ್ನು ಬಂಧಿಸಿದೆ.   


COMMERCIAL BREAK
SCROLL TO CONTINUE READING

ಮಂಗಳೂರಿನ 22 ವರ್ಷದ ಮಾಜ್ ಮುನೀರ್‌ ಅಹಮ್ಮದ್‌ ಮತ್ತು ಸಯ್ಯದ್‌ ಯಾಸೀನ್‌ ಬಂಧಿತ ಯುವಕರು. ಮತ್ತೋರ್ವನಿಗಾಗಿ ಪೊಲೀಸರ ಶೋಧ ನಡೆಸುತ್ತಿದ್ದಾರೆ. ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟನ್ನು ಹೊಂದಿರುವ ಕಾರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯಿದೆಯಡಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಾಜ್ ಮುನೀರ್‌ ಅಹಮ್ಮದ್‌ ಮತ್ತು ಸಯ್ಯದ್‌ ಯಾಸೀನ್‍ರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಇದನ್ನೂ ಓದಿ: ಇಡ್ಲಿ ವಿಚಾರಕ್ಕೆ ಗುಂಪುಗಳ ನಡುವೆ ಗ್ಯಾಂಗ್ವಾರ್: ದಾಳಿಗೆ ಕಾರು ಜಖಂ!


ಬಂಧಿತ ಮಾಜ್ ಗೋಡೆ ಬರಹದ ಆರೋಪಿಯಾಗಿದ್ದ. ಈತ ಕಾಣೆಯಾಗಿರೋ ಬಗ್ಗೆ ಸೋಮವಾರ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.


ಬಾಂಬ್ ಸ್ಫೋಟಕ್ಕೆ ಸಂಚು ನಡೆಸಿದ್ದ ಗ್ಯಾಂಗ್!  


ಬಂಧಿತ ಆರೋಪಿಗಳು ಶಿವಮೊಗ್ಗದಲ್ಲೇ ಕುಳಿತು ರಾಜ್ಯದ ಕೆಲವು ಕಡೆ ಬಾಂಬ್ ಬ್ಲ್ಯಾಸ್ಟ್‍ಗೆ ಸಂಚು ನಡೆಸಿದ್ದ ಮಾಹಿತಿ ಬಹಿರಂಗವಾಗಿದೆ. ಸ್ವಲ್ಪ ಯಾಮಾರಿದ್ರು ರಾಜ್ಯದ ಕೆಲವು ಕಡೆ ಬಾಂಬ್ ಬ್ಲ್ಯಾಸ್ಟ್ ಆಗೋ ಸಾಧ‍್ಯತೆ ಇತ್ತು ಎನ್ನಲಾಗಿದೆ. ಪೊಲೀಸರ ತನಿಖೆಯಲ್ಲಿ ಬಾಂಬ್ ಗ್ಯಾಂಗ್‍ನ ಅಸಲಿಯತ್ತು ಅನಾವರಣವಾಗಿದೆ. ಐಸಿಸ್ ಉಗ್ರರ ಜೊತೆ ಶಿವಮೊಗ್ಗ ಮತ್ತು ಮಂಗಳೂರು ಲಿಂಕ್ ಇರುವುದು ತಿಳಿದುಬಂದಿದೆ. ಬಾಂಬ್ ಬ್ಲ್ಯಾಸ್ಟ್ ಸೇರಿದಂತೆ ಉಗ್ರ ಚಟುವಟಿಕೆಗಳ ಬಗ್ಗೆ ಈ ಗ್ಯಾಂಗ್ ಟ್ರೈನಿಂಗ್ ಪಡೆದಿತ್ತು. ಐಸಿಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದರ ಬಗ್ಗೆ ಪೊಲೀಸರಿಗೆಗೆ ಸಾಕ್ಷಿ ಲಭ್ಯವಾಗಿದೆ.


ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಲ್ವರು ಶಂಕಿತ ಉಗ್ರರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಶಂಕಿತ ಉಗ್ರ ಕಿಂಗ್ ಪಿನ್ ಯಾಸಿನ್‍ನನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಯಾಸಿನ್ ಬಾಂಬ್ ತಯಾರಿಯ ಟ್ರೈನಿಂಗ್ ಕೊಡ್ತಿದ್ದ ಬಗ್ಗೆ ಪೊಲೀಸರಿಗೆ ಸಾಕ್ಷಿ ಸಿಕ್ಕಿದೆ.


ಇದನ್ನೂ ಓದಿ: Crime News: ಕೇವಲ 9 ಸಾವಿರ ರೂ. ಸಾಲಕ್ಕೆ ಚಾಕುವಿನಿಂದ ಇರಿದು ಹತ್ಯೆ..! 


ಶಂಕಿತ ಉಗ್ರ ಯಾಸಿನ್ ಐಸಿಸ್ ಜೊತೆ ನೇರ ಸಂಪರ್ಕ ಹೊಂದಿರುವ ಮಾಹಿತಿ ಲಭಿಸಿದೆ. ಸದ್ಯ ಯಾಸಿನ್‍ನನ್ನು ಕರೆದೊಯ್ದು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. UAPA ಕೇಸ್ ದಾಖಲಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.