ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ PSI ಮರುಪರೀಕ್ಷೆ ದಿನಾಂಕ ಪ್ರಕಟ: ಡಿಜಿ ಪ್ರವೀಣ್ ಸೂದ್

ಸಿಐಡಿ ಪೊಲೀಸರು ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಚಾರ್ಚ್ ಶೀಟ್ ಆಗುವವರೆಗೂ ಏನೂ ಹೇಳುವುದಕ್ಕೆ ಆಗುವುದಿಲ್ಲವೆಂದು ಪ್ರವೀಣ್ ಸೂದ್ ಹೇಳಿದ್ದಾರೆ.

Written by - VISHWANATH HARIHARA | Edited by - Puttaraj K Alur | Last Updated : Sep 19, 2022, 07:12 PM IST
  • 545 ಪಿಎಸ್ಐ ಹುದ್ದೆಗಳ ಅಕ್ರಮ ನೇಮಕಾತಿ ಹಗರಣ ಸಂಬಂಧ ಸಿಐಡಿ ತನಿಖೆ ನಡೆಯುತ್ತಿದೆ
  • ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಪಿಎಸ್ಐ ಮರುಪರೀಕ್ಷೆ ದಿನಾಂಕ ಪ್ರಕಟಿಸಲಾಗುವುದು
  • ಕಳಂಕಿತರು ಮತ್ತೆ ಪರೀಕ್ಷೆ ಬರೆಯಬಾರದು ಎಂದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್
ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ PSI ಮರುಪರೀಕ್ಷೆ ದಿನಾಂಕ ಪ್ರಕಟ: ಡಿಜಿ ಪ್ರವೀಣ್ ಸೂದ್ title=
PSI Recruitment Scam

ಬೆಂಗಳೂರು: 545 ಪಿಎಸ್ಐ ಹುದ್ದೆಗಳ ಅಕ್ರಮ ನೇಮಕಾತಿ ಹಗರಣ ಸಂಬಂಧ ಸಿಐಡಿ ತನಿಖೆ ನಡೆಸುತ್ತಿದ್ದು, ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಪಿಎಸ್ಐ ಮರುಪರೀಕ್ಷೆ ದಿನಾಂಕ ಪ್ರಕಟಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾಹಿತಿ‌ ನೀಡಿದ್ದಾರೆ.

ಇದನ್ನೂ ಓದಿ: ಎಕ್ಸ್ಪ್ರೆಸ್ ಕ್ಲಿನಿಕ್ ದೇಶಕ್ಕೆ ಮಾದರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಿಐಡಿ ಪೊಲೀಸರು ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಚಾರ್ಚ್ ಶೀಟ್ ಆಗುವವರೆಗೂ ಏನೂ ಹೇಳುವುದಕ್ಕೆ ಆಗುವುದಿಲ್ಲ. ಪಿಎಸ್ಐ ಮರುಪರೀಕ್ಷೆ ಯಾವಾಗ ಮಾಡುತ್ತೇವೆ‌ ಎಂದು ಶೀಘ್ರವೇ ತಿಳಿಸುತ್ತೇವೆ. ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ‌ ರೀ ಎಕ್ಸಾಂ ಮಾಡುತ್ತೇವೆ ಅಂತಾ ಅವರು ಹೇಳಿದ್ದಾರೆ.

ಇದನ್ನೂ ಓದಿ: Crime News: ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಕೊಲೆ!

ಕಳಂಕಿತರು ಮತ್ತೆ ಪರೀಕ್ಷೆಯನ್ನು ಬರೆಯಬಾರದು. ತಪ್ಪಿತಸ್ಥ ಆಭ್ಯರ್ಥಿಗಳಿಗೆ ಮತ್ತೊಮ್ಮೆ ಅವಕಾಶ ಸಿಗಕೂಡದು. ಈ ಸಲುವಾಗಿ‌‌ ಪರೀಕ್ಷೆ ದಿನಾಂಕವನ್ನು ನಾವು ಪ್ರಕಟಿಸಿಲ್ಲ. ಇನ್ನೆರಡು ತಿಂಗಳಲ್ಲಿ ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಡೇಟ್ ಅನೌನ್ಸ್ ಮಾಡುತ್ತೇವೆ ಎಂದು ಡಿಜಿ‌ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News