ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಆಯನೂರು ಬಳಿಯಲ್ಲಿ ಬಾರ್​ವೊಂದರ ಕ್ಯಾಶಿಯರ್​ನ ಕೊಲೆಯಾಗಿದೆ. ಇಲ್ಲಿನ ನವರತ್ನ ಬಾರ್​ನಲ್ಲಿ ಈ ದುರ್ಘಟನೆ ಸಂಭವಿಸಿದ್ದು 27 ವರ್ಷದ ಸಚಿನ್ ಕುಮಾರ್ ಕೊಲೆಯಾದ ದುರ್ದೈವಿ ಯುವಕ ಎಂದು ತಿಳಿದುಬಂದಿದೆ. ಕೊಲೆಗೀಡಾದ ಯುವಕ ಸಚಿನ್ ನನ್ನು ಸೊರಬ ಮೂಲದ ನಿವಾಸಿ ಎಂದು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಏನಿದು ಘಟನೆ?
ನಿನ್ನೆ (06 ಜೂನ್, ಭಾನುವಾರ) ರಾತ್ರಿ 10 ಗಂಟೆ ಸುಮಾರಿಗೆ ಆಯನೂರು ಕೋಟೆ ತಾಂಡದ ಮೂವರು ಇಲ್ಲಿನ ನವರತ್ನ ಬಾರ್​ನಲ್ಲಿ ಕುಡಿದು ಗಲಾಟೆ ಮಾಡಿದ್ದಾರೆ. ಬಾರ್​ ಮುಚ್ಚುವ ಸಮಯವಾಗಿದ್ದರೂ ಮದ್ಯಪಾನ ಮಾಡುತ್ತಾ ಕುಳಿತಿದ್ದರಿಂದ ಬಾರ್ ಸಿಬ್ಬಂದಿ 112 ಸಿಬ್ಬಂದಿಗೆ ತಿಳಿಸಿದ್ದಾರೆ. ಈ ವೇಳೆ ಅಲ್ಲಿಗೆ ಪೊಲೀಸರು ಬಂದಿದ್ಧಾರೆ. 


ಇದನ್ನೂ ಓದಿ- ನೀರಿಗಾಗಿ ಅಕ್ಕಪಕ್ಕದವರ ಗಲಾಟೆ: ಮನನೊಂದು ಗೃಹಿಣಿ ಆತ್ಮಹತ್ಯೆ!


ಪೊಲೀಸರನ್ನ ಏಕೆ ಕರೆಸಿದ್ದಿಯಾ ಎಂದು ಬಾರ್ ಸಿಬ್ಬಂದಿ ಜೊತೆ ಗಲಾಟೆ ತೆಗೆದಿದ್ದಾರೆ. ಅಷ್ಟೇ ಅಲ್ಲದೆ ಮದ್ಯದ ಮತ್ತಿನಲ್ಲಿದ್ದ ಮೂವರು ಬಾರ್​ ಸಿಬ್ಬಂದಿಗಳಾದ ಶಿವಕುಮಾರ್, ಸಚಿನ್​ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆಗೆ ಮುಂದಾಗಿದ್ಧಾರೆ. ಖಾಲಿ ಬಿಯರ್​ ಬಾಟಲಿಯನ್ನ ತನ್ನ ತಲೆಗೆ ಹೊಡೆದುಕೊಂಡು ಸತೀಶ್ ಎಂಬಾತ ಅಲ್ಲಿದ್ದವರಿಗೆ ಅದರಿಂದ ಚುಚ್ಚಲು ಮುಂದಾಗಿದ್ಧಾನೆ. ಈ ವೇಳೆ ಪೊಲೀಸರು ಅದನ್ನು ತಪ್ಪಿಸಿದಿದ್ದಾರೆ. ಇದೇ ವೇಳೆ ಸತೀಶ್ ತನ್ನ  ಸೊಂಟದಲ್ಲಿದ್ದ ಚಾಕುವನ್ನು ಹೊರ ತೆಗೆದು ಬಾರ್ ಕ್ಯಾಶಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಚಿನ್​ಗೆ ಚುಚ್ಚಿರುವುದಾಗಿ ದೂರು ದಾಖಲಾಗಿದೆ. 


ಇದನ್ನೂ ಓದಿ- Crime News: ರೇವಾ ಯುನಿವರ್ಸಿಟಿ ಕಾಲೇಜು ಫೆಸ್ಟ್ ವೇಳೆ ಚಾಕುವಿನಿಂದ ಇರಿದು ವಿದ್ಯಾರ್ಥಿ ಕೊಲೆ!


ಪೊಲೀಸರ ಎದುರಲ್ಲೆ ನಡೆದು ಹೋಯ್ತು ಘಟನೆ!
ಘಟನೆಯಲ್ಲಿ ತಕ್ಷಣವೇ ಪೊಲೀಸರು ಹಾಗೂ ಬಾರ್ ಸಿಬ್ಬಂದಿ ಸಚಿನ್​​ನನ್ನು ಆಯನೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಅಲ್ಲಿಂದ ನಂಜಪ್ಪ ಆಸ್ಪತ್ರೆಗೆ ರವಾನಿಸಿದ್ದಾರೆ. ಆದಾಗ್ಯೂ, ಅಷ್ಟರಲ್ಲಿ ಸಚಿನ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ತಿಳಿದುಬಂದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ