‘ಐಪಿಎಲ್ ಜೂಜಾಟಕ್ಕೆ ದಾಸನಾದ ಪತಿ’ ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಕೊಲೆ..?

ಇಸ್ಪೀಟ್ ಮತ್ತು ಐಪಿಎಲ್ ಕ್ರಿಕೆಟ್ ಜೂಜಾಟಕ್ಕೆ ದಾಸನಾಗಿದ್ದ ಪತಿ ವರದಕ್ಷಿಣೆ ಕಿರುಕುಳ ನೀಡಿ, ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಗರದ ವಿದ್ಯಾನಗರ-ಗುಡ್ಡೇಗೌಡನ ಕೊಪ್ಪಲಲ್ಲಿ ಮಂಗಳವಾರ ನಡೆದಿದೆ. ರಂಜಿತಾ (22) ಮೃತ ಮಹಿಳೆ, ಯು.ಟಿ.ಪವನ್ ಕೊಲೆ ಆರೋಪಿ ಎಂದು ತಿಳಿದುಬಂದಿದೆ.

Written by - Zee Kannada News Desk | Last Updated : May 4, 2023, 12:29 AM IST
  • ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡಲು ಪ್ರಾರಂಭಿಸಿದರು ಎನ್ನಲಾಗಿದೆ.
  • ರಂಜಿತಾಳಿಗೆ ಆಗಾಗ್ಗೆ ವರದಕ್ಷಿಣೆ ತರುವಂತೆ ಹೊಡೆದು, ಹೊರಗೆ ಕಳಿಸುತ್ತಿದ್ದ ಎನ್ನಲಾಗಿದೆ.
  • ಕಳೆದ ಮಾ.10 ಅರ್ಪಿತಾ ತವರು ಮನೆಗೆ ಬಂದು, ಗಂಡನ ಮನೆಗೆ ಹೋಗುವುದಿಲ್ಲ, ನನ್ನನ್ನು ಹೊಡೆದು ಸಾಯಿಸುತ್ತಾರೆಂದು ಹೇಳಿದ್ದಾಳೆ.
 ‘ಐಪಿಎಲ್ ಜೂಜಾಟಕ್ಕೆ ದಾಸನಾದ ಪತಿ’ ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಕೊಲೆ..? title=

ಹಾಸನ : ಇಸ್ಪೀಟ್ ಮತ್ತು ಐಪಿಎಲ್ ಕ್ರಿಕೆಟ್ ಜೂಜಾಟಕ್ಕೆ ದಾಸನಾಗಿದ್ದ ಪತಿ ವರದಕ್ಷಿಣೆ ಕಿರುಕುಳ ನೀಡಿ, ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಗರದ ವಿದ್ಯಾನಗರ-ಗುಡ್ಡೇಗೌಡನ ಕೊಪ್ಪಲಲ್ಲಿ ಮಂಗಳವಾರ ನಡೆದಿದೆ. ರಂಜಿತಾ (22) ಮೃತ ಮಹಿಳೆ, ಯು.ಟಿ.ಪವನ್ ಕೊಲೆ ಆರೋಪಿ ಎಂದು ತಿಳಿದುಬಂದಿದೆ.

ಅರಕಲಗೂಡು ತಾಲ್ಲೂಕು ಹೆಂಟಗೆರೆ ಕೊಪ್ಪಲು ಗ್ರಾಮದ ಮಂಜೇಗೌಡ ಎಂಬುವರ ಮಗಳಾದ ರಂಜಿತಾ ಅವರನ್ನು 2022 ಮೇ.9 ರಂದು ಗುಡ್ಡೇಗೌಡನಕೊಪ್ಪಲು ಗ್ರಾಮದ ಸ್ವಾಮೀಗೌಡ ಎಂಬುವರ ಮಗ ಯು.ಟಿ.ಪವನ್ ಎಂಬುವರೊಂದಿಗೆ  ಮದುವೆ ಮಾಡಿಕೊಡಲಾಗಿತ್ತು.

ಇದನ್ನೂ ಓದಿ: HDK ಏಕಾಂಗಿಯಾಗಿ ನಿಂತು ರೈತರ ಸಾಲ ಮನ್ನಾ ಮಾಡಿದ್ದಾರೆ: ದೇವೇಗೌಡ

ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ 250 ಗ್ರಾಂ. ಚಿನ್ನದ ವಡವೆ ಹಾಗು 2 ಲಕ್ಷ ರೂ. ನಗದು ಹಣ ನೀಡಿದ್ದರು. ತದನಂತರ 2-3 ತಿಂಗಳು ರಂಜಿತಾಳನ್ನು ಗಂಡನ ಮನೆಯವರು ಚೆನ್ನಾಗಿ ನೋಡಿಕೊಂಡರು.ನಂತರ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡಲು ಪ್ರಾರಂಭಿಸಿದರು ಎನ್ನಲಾಗಿದೆ. ಪವನನಿಗೆ ಇಸ್ಪೀಟ್ ಮತ್ತು ಐಪಿಎಲ್ ಕ್ರಿಕೆಟ್ ಜೂಜಾಡುವ ಹವ್ಯಾಸವಿದ್ದು, ರಂಜಿತಾಳಿಗೆ ಆಗಾಗ್ಗೆ ವರದಕ್ಷಿಣೆ ತರುವಂತೆ ಹೊಡೆದು, ಹೊರಗೆ ಕಳಿಸುತ್ತಿದ್ದ ಎನ್ನಲಾಗಿದೆ. ಕಳೆದ ಮಾ.10 ಅರ್ಪಿತಾ ತವರು ಮನೆಗೆ ಬಂದು, ಗಂಡನ ಮನೆಗೆ ಹೋಗುವುದಿಲ್ಲ, ನನ್ನನ್ನು ಹೊಡೆದು ಸಾಯಿಸುತ್ತಾರೆಂದು ಹೇಳಿದ್ದಾಳೆ. ನಂತರ ಸಂಬಂಧಿಕರೆಲ್ಲರೂ ಸೇರಿ ರಾಜಿ ಪಂಚಾಯಿತಿ ಮಾಡಿದ್ದರು.

ಇದನ್ನೂ ಓದಿ: ಬಜರಂಗದಳ ಬ್ಯಾನ್ ಮಾಡ್ತೀವಿ ಅನ್ನೋದೇ ಅಕ್ಷಮ್ಯ ಅಪರಾಧ: ಸಿ.ಟಿ.ರವಿ

ಆದರೂ ಮೇ.2 ರಂದು ಮಧ್ಯಾಹ್ನ ರಂಜಿತಾಳನ್ನು ಗಂಡ ಪವನ್, ಅತ್ತೆ ಮಣಿ, ಮಾವ ತಿಮ್ಮೇಗೌಡ, ಸ್ವಾಮೀಗೌಡ ಎಂಬವರು ಮನ ಬಂದಂತೆ ಹಲ್ಲೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದರು. ಗಂಭೀರ ಗಾಯಗೊಂಡಿದ್ದ ರಂಜಿತಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಈಕೆಯ ಸಾವಿಗೆ ಕಾರಣರಾದ ಗಂಡ ಪವನ್, ಅತ್ತೆ ಮಣಿ, ಮಾವ ತಿಮ್ಮೇಗೌಡ ಸ್ವಾಮೀಗೌಡ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಂಬಂಧಿಕರು ಪೆನ್‌ಷನ್ ಮೊಹಲ್ಲಾ ಠಾಣೆಗೆ ದೂರು ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News