Crime News: ರೇವಾ ಯುನಿವರ್ಸಿಟಿ ಕಾಲೇಜು ಫೆಸ್ಟ್ ವೇಳೆ ಚಾಕುವಿನಿಂದ ಇರಿದು ವಿದ್ಯಾರ್ಥಿ ಕೊಲೆ!

Bengaluru Murder: ರೇವಾ ಯುನಿವರ್ಸಿಟಿಯಲ್ಲಿ ರೇವೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾರಾಮಾರಿ ನಡೆದು ಮ್ಯಾಕನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

Written by - Zee Kannada News Desk | Last Updated : Apr 29, 2023, 06:03 PM IST
  • ಕಾಲೇಜು ಫೆಸ್ಟ್ ವೇಳೆ ಚಾಕುವಿನಿಂದ ಇರಿದು ವಿದ್ಯಾರ್ಥಿ ಕೊಲೆ
  • ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾರಾಮಾರಿ
  • ಮ್ಯಾಕನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಲೆ
Crime News: ರೇವಾ ಯುನಿವರ್ಸಿಟಿ ಕಾಲೇಜು ಫೆಸ್ಟ್ ವೇಳೆ ಚಾಕುವಿನಿಂದ ಇರಿದು ವಿದ್ಯಾರ್ಥಿ ಕೊಲೆ! title=

ಬೆಂಗಳೂರು: ಇತ್ತೀಚೀನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬುದೇ ಗೊಂದಲಕ್ಕೆ ಇಡು ಮಾಡಿದೆ. ಒಂದು ಶಾಲಾ ಕಾಲೇಜು ಎಂದರೆ ಎಲ್ಲರೂ ಒಂದೇ ಇರುವ ಎಲ್ಲರೂ ಸ್ನೇತಹಿರೆಂದು ಭಾವಿಸಿ ಮುನ್ನಡೆಯುವುದು ಉತ್ತಮ ಕಾಲೇಜಿನ ನಡೆಯುವೂ ಆಗಿದೆ. ಆದರೆ ರೇವಾ ಯುನಿವರ್ಸಿಟಿಯಲ್ಲಿ ನಡೆದ ಘಟನೆ ವಿದ್ಯಾರ್ಥಿಗಳನ್ನು ಮನಸ್ಥಿಯನ್ನು ಚಿಂತಿಸುವಂತೆ ಮಾಡಿದೆ.

ಹೌದು, ಕಾಲೇಜು ಎಂದರೆ, ಸ್ನೇಹ ಬಾಂಧವ್ಯ , ಓದು ಶಿಕ್ಷಣ, ಉತ್ತಮ ಗೆಳೆತನ ಸ್ನೇಹಿತರ ತರಲೆ ತಮಾಷೆ. ಆದಾಗ್ಯೂ ಒಂದು ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮಾತ್ರ ಮುಖ್ಯವಾಗಿರದೇ ಸಂಸ್ಕೃತಿ ಹಾಗೂ ಕ್ರೀಡೆ ವ್ಯವಸ್ಥೆಯು ಮುಖ್ಯವಾಗಿದೆ. ಇದರ ನಿಟ್ಟಿನಲ್ಲಿ ರೇವಾ ಯುನಿವರ್ಸಿಟಿಯಲ್ಲಿ ರೇವೋತ್ಸವ ಸಮಾರಂಭ ಆಯೋಜಿಸಲಾಗಿತ್ತು.

ಇದನ್ನೂ ಓದಿ: ಲೋಕಾಪುರ ಪಟ್ಟಣದ ಬಳಿ 5 ಕೋಟಿ ರೂ. ಹಣ ಜಪ್ತಿ

ಶುಕ್ರವಾರ ರಾತ್ರಿ ಅದ್ದೂರಿಯಾಗಿಯೇ ರೇವಾ ಯುನಿವರ್ಸಿಟಿಯಲ್ಲಿ ಕಾಲೇಜು ವಾರ್ಷಿಕೋತ್ಸವ ನಡೆಯುತ್ತಿತ್ತು. ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಏಂಜಾಯ್‌ ಮಾಡುತ್ತಿದ್ದರು. ಅದರ ನಡುವೆ ರಾತ್ರಿ 9:30-9:45ರ ಸುಮಾರಿಗೆ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾರಾಮಾರಿ ನಡೆದಿದೆ. ಮಾತಿನ ಚಕಮಕಿ ನಡುವೆ ಭಾಸ್ಕರ್ ಜೆಟ್ಟಿ ಎಂಬ ಮ್ಯಾಕನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಚಾಕುವಿನಿಂದ ದುಷ್ಕರ್ಮಿಗಳು ಆತನ ಹೊಟ್ಟೆಗೆ ಹಲವು ಬಾರಿ ಇರಿದ್ದಿದ್ದಾರೆ. ಹೊಟ್ಟೆಗೆ ಚಾಕು ಇರಿದ ಪರಿಣಾಮ ತೀವ್ರ ರಕ್ತ ಸ್ರಾವ ಉಂಟಾಗಿದೆ.

ಇದನ್ನೂ ಓದಿ:ಬೀದರ್, ವಿಜಯಪುರ, ಕಲಬುರಗಿಯಲ್ಲಿ ಪ್ರಧಾನಿ ಮೋದಿ ಕ್ಯಾಂಪೇನ್

"ಬಿಜೆಪಿಗೆ ಅಧಿಕಾರ ಕೊಟ್ಟರೆ, 40% ಪರ್ಸೆಂಟ್ ಭ್ರಷ್ಠಾಚಾರಕ್ಕೆ ಮತ್ತೇ ಅವಕಾಶ ಮಾಡಿಕೊಟ್ಟಂತೆ"-ರಾಹುಲ್ ಗಾಂಧಿ ಚಾಕು ಇರಿತಕ್ಕೆ ಒಳಗಾದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸಲು ಕಾಲೇಜು ಆಡಳಿತ ಮುಂದಾಗಿದ್ದಾರೆ. ತೀವ್ರ ರಕ್ತಸ್ರಾವ ಆಗಿದ್ದರಿಂದ ಭಾಸ್ಕರ್ ಜೆಟ್ಟಿ ಮಾರ್ಗ ಮಧ್ಯೆ ಸಾವನ್ನಪಿದ್ದಾನೆ. ಮೃತ ವಿದ್ಯಾರ್ಥಿಯ ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಶನಿವಾರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಗುಜರಾತ್‌ನಲ್ಲಿನಲ್ಲಿರುವ ಆತನ ಪೋಷಕರಿಗೆ ಆಡಳಿತ ಮಂಡಳಿ ವಿಷಯ ತಲುಪಿಸಿದೆ. ಸದ್ಯ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News