ಧರ್ಮ ರಕ್ಷಣೆ ಮಾಡಲು ಹೇಳಿದ್ದೆ,ಬ್ಲಾಸ್ಟ್ ಬಗ್ಗೆ ನನಗೆ ಗೊತ್ತಿಲ್ಲ: ಸಿಸಿಬಿ ಮುಂದೆ ಉಗ್ರ ನಜೀರ್ ಕಣ್ಣೀರು
ಪ್ರಕರಣದ ಪ್ರಮುಖ ಆರೋಪಿಯಾಗಿರೋ ನಾಜಿರ್ ಪೊಲೀಸರ ಮುಂದೆ ಬ್ಲಾಸ್ಟ್ ಆಗಲಿ, ಗ್ರೆನೇಡ್ ಹಾಗೂ ಗನ್ ಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನೂ ಯಾವುದೇ ಬ್ಲಾಸ್ಟ್ ಬಗ್ಗೆ ಕೂಡ ಮಾತನಾಡಿಲ್ಲ. ಸರ್ ನಾನು ಶಿಕ್ಷೆ ಅನುಭವಿಸುತ್ತಿದ್ದೇನೆ. ಜೈಲಿನಿಂದ ಹೊರಬಂದು ಒಳ್ಳೆಯವನಾಗಿ ಬದುಕಬೇಕು ಅಂದುಕೊಂಡಿದ್ದೇನೆ ಎಂದು ವರಸೆ ಬದಲಾಯಿಸಿದ್ದಾನೆ.
ಬೆಂಗಳೂರು: ಸಿಸಿಬಿ ಪೊಲೀಸರ ವಶದಲ್ಲಿರುವ ಉಗ್ರ ನಜೀರ್ ಹೊಸ ವರಸೆ ಶುರುಮಾಡಿದ್ದಾನೆ. ಧರ್ಮ ರಕ್ಷಣೆ ಮಾಡಲು ನಾನು ಹೇಳಿದ್ದೆ. ಆದರೆ ವಿಧ್ವಂಸಕ ಕೃತ್ಯದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಿಸಿಬಿ ಮುಂದೆ ಉಗ್ರ ನಜೀರ್ ಕಣ್ಣೀರು ಹಾಕಿರುವ ಮಾಹಿತಿ ದೊರೆತಿದೆ.
ಸಿಲಿಕಾನ್ ಸಿಟಿಯಲ್ಲಿ ಐವರು ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ A1 ಪ್ರಮುಖ ಆರೋಪಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಉಗ್ರ ಟಿ ನಜೀರ್ ನ ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರೋ ನಾಜಿರ್ ಪೊಲೀಸರ ಮುಂದೆ ಬ್ಲಾಸ್ಟ್ ಆಗಲಿ, ಗ್ರೆನೇಡ್ ಹಾಗೂ ಗನ್ ಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನೂ ಯಾವುದೇ ಬ್ಲಾಸ್ಟ್ ಬಗ್ಗೆ ಕೂಡ ಮಾತನಾಡಿಲ್ಲ. ಸರ್ ನಾನು ಶಿಕ್ಷೆ ಅನುಭವಿಸುತ್ತಿದ್ದೇನೆ. ಜೈಲಿನಿಂದ ಹೊರಬಂದು ಒಳ್ಳೆಯವನಾಗಿ ಬದುಕಬೇಕು ಅಂದುಕೊಂಡಿದ್ದೇನೆ ಎಂದು ವರಸೆ ಬದಲಾಯಿಸಿದ್ದಾನೆ.
ಇದನ್ನೂ ಓದಿ- ಒಂದೇ ತಿಂಗಳಲ್ಲಿ 1785 ಕೆ.ಜಿ ಡ್ರಗ್ಸ್ ಸೀಜ್: 487 ಆರೋಪಿಗಳ ಬಂಧನ
ಜುನೈದ್ ಜೈಲಿನಲ್ಲಿ ನನಗೆ ಪರಿಚಯವಾಗಿದ್ದ. ಎಲ್ಲರಿಗೂ ನಾನು ಧರ್ಮದ ಕುರಿತು ಪ್ರವಚನ ಕೊಟ್ಟಿದ್ದೇನೆ. ಧರ್ಮವನ್ನ ಬೆಳೆಸುವಂತೆ ಪ್ರೇರೆಪಿಸಿದ್ದೇನೆ. ಆದರೆ ನಾನು ವಿದ್ವಂಸಕ ಕೃತ್ಯ ಮಾಡಿ ಅಂತ ಹೇಳಿಲ್ಲ ಎಂದಷ್ಟೆ ಉತ್ತರಿಸಿದ್ದನಂತೆ. ಇನ್ನೂ ಜೈಲಿನಲ್ಲಿ ಮೊಬೈಲ್ ಬಳಕೆ ಬಗ್ಗೆ ಒಪ್ಪಿಕೊಂಡಿರುವ ನಜೀರ್, ಜೈಲಿನಲ್ಲಿ ಮೊಬೈಲ್ ಇಟ್ಟಿರುವ ಬಗ್ಗೆ ಕೂಡ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಪ್ರಕರಣ ಹೊರ ಬರುತ್ತಿದ್ದಂತೆ ಜೈಲಿನ ಅಧಿಕಾರಿಗಳು ಸರ್ಚ್ ಮಾಡಿ ನಜೀರ್ ಬಳಕೆ ಮಾಡುತ್ತಿದ್ದ ಮೊಬೈಲ್ ಸೀಜ್ ಆಗಿರುವ ಶಂಕೆಯಿದೆ.
ಇದನ್ನೂ ಓದಿ- ಗಾರ್ಡನ್ ಸಿಟಿಯಲ್ಲಿ ಹೆಚ್ಚಾಯ್ತು ಸೈಬರ್ ಕ್ರೈಂ: 7 ವರ್ಷಗಳಲ್ಲಿ 50 ಸಾವಿರ ಕೇಸ್..!
ಸಿಸಿಬಿ ಅಧಿಕಾರಿಗಳು ಜೈಲಿನಲ್ಲಿ ಮಹಜರು ನಡೆಸಲಿದ್ದು, ಒಂದು ವೇಳೆ ಜೈಲಿನಲ್ಲಿ ನಜೀರ್ ಬಳಕೆ ಮಾಡುತ್ತಿದ್ದ ಮೊಬೈಲ್ ಪತ್ತೆಯಾದರೆ ಸಿಸಿಬಿ ತನಿಖೆಗೆ ಪೂರಕವಾದ ಸಾಕ್ಷಿಗಳು ದೊರೆಯಲಿದ್ದು, ಸಿಸಿಬಿಗೆ ತನಿಖೆಗೆ ಸಾಕಷ್ಟು ಸಹಕಾರಿಯಾಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.