ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ವಕೀಲನನ್ನ‌ ಅಡ್ಡಗಟ್ಟಿ ಅಪಹರಿಸಿ ಹಣ ಸುಲಿಗೆ ಮಾಡಿದ್ದ ಗ್ಯಾಂಗ್ ನ ಇಬ್ಬರು ಆರೋಪಿಗಳನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಕೊಳಕು ಸ್ವಿಚ್ ಬೋರ್ಡ್‌ನ್ನು ಕ್ಲೀನ್‌ ಮಾಡಲು ಇಲ್ಲಿದೆ ಸಿಂಪಲ್‌ ಟ್ರಿಕ್ಸ್‌


ಮೂಲತಃ ಹಾಸನದ ಶಾಂತಿಗ್ರಾಮದ ನಿವಾಸಿಯಾಗಿರುವ ವಕೀಲ ಅಶೋಕ್ ಕಳೆದ‌ ಜೂನ್ 19 ರಂದು ಊರಿಗೆ ಹೋಗಿ ಹನುಮಂತನಗರದ ಪಿಇಎಸ್ ಕಾಲೇಜು ಬಳಿ‌ ಮನೆಗೆ ನಡೆದುಕೊಂಡು ಬರುತ್ತಿದ್ದರು.‌ ಈ ವೇಳೆ‌ ಅಪಹರಣಕಾರರ ಗುಂಪು ಆಟೊದಲ್ಲಿ ಬಂದಿದೆ. ಅಶೋಕ್‌ ನನ್ನ ತಡೆದು ಕತ್ರಿಗುಪ್ಪೆಗೆ ಹೇಗೆ ಹೋಗಬೇಕು ಎಂದು ವಿಳಾಸ ಕೇಳಿದ್ದಾರೆ.‌ ಮಾತು ಆರಂಭವಾಗುತ್ತಿದ್ದಂತೆ ಆಟೊದಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ. ನೈಸ್ ರೋಡ್ ಪೂರ್ತಿ ತಿರುಗಾಡಿಸಿ‌ ಹಣ ನೀಡುವಂತೆ‌ ಧಮ್ಕಿ ಹಾಕಿ ಹಲ್ಲೆ ನಡೆಸಿದ್ದಾರೆ‌. ಹಣ ನೀಡದಿದ್ದರೆ ಕೊಲೆ‌ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.‌ ಅಶೋಕ್ ಬಳಿ ಹಣವಿಲ್ಲದಿರುವುದು ಗೊತ್ತಾಗಿ ಸಹದ್ಯೋಗಿಗಳಿಗೆ ಕರೆ ಮಾಡಿಸಿ ಆಕ್ಸಿಡೆಂಟ್ ಆಗಿದೆ. ತುರ್ತಾಗಿ ಹಣದ ಅಗತ್ಯವಿದೆ ಎಂದು ಹೇಳಿಸಿ ಅನ್ ಲೈನ್ ಮುಖಾಂತರ 20 ಸಾವಿರ ಹಣ ಹಾಕಿಸಿಕೊಂಡಿದ್ದಾರೆ.


ಇದನ್ನೂ ಓದಿ: Puttakkana Makkalu Serial : ಪುಟ್ಟಕ್ಕನ ಮಗಳ ಮದುವೆ ಮುರಿದು ಬಿತ್ತು ಮುಂದೇನು..ಕಂಠಿ ಮಾಡಿದ ಶಪಥದ ಕಥೆ ಏನು?


ನಂತರ ಕನಕಪುರದ ‌ರವಿಶಂಕರ್ ಗುರೂಜಿ ಆಶ್ರಮದ ಬಳಿ ಬಿಟ್ಟು ಐವರು ಆರೋಪಿಗಳು‌ ಪರಾರಿಯಾಗಿದ್ದಾರೆ. ಇನ್ನೂ ಅಶೋಕ್ ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಿದ‌ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು ಇಬ್ಬರು‌ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಉಳಿದ ಮೂವರಿಗಾಗಿ ಬಲೆ ಬೀಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ