ಫ್ಯಾಮಿಲಿ ಥ್ರಿಲ್ಲರ್ ಕಥಾಹಂದರವುಳ್ಳ "ಮಾಂಕ್ ದಿ ಯಂಗ್" ಟೀಸರ್ ಬಿಡುಗಡೆ!

"ಮಾಂಕ್ ದಿ ಯಂಗ್" ವಿಂಟೇಜ್ ಫ್ಯಾಮಿಲಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಇಂದು ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದೇವೆ. ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಅಂತಿಮ ಹಂತದಲ್ಲಿದೆ. ಇನ್ನು ಮೂರು ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.

Written by - Bhavishya Shetty | Last Updated : Jun 28, 2023, 12:36 PM IST
    • ಮಾಂಕ್ ದಿ ಯಂಗ್" ವಿಂಟೇಜ್ ಫ್ಯಾಮಿಲಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ.
    • ಹೊಸ ಕಥೆಯೊಂದಿಗೆ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಬರುತ್ತಿದೆ.
    • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿದರು
ಫ್ಯಾಮಿಲಿ ಥ್ರಿಲ್ಲರ್ ಕಥಾಹಂದರವುಳ್ಳ "ಮಾಂಕ್ ದಿ ಯಂಗ್" ಟೀಸರ್ ಬಿಡುಗಡೆ! title=
Monk The Young Movie

ಕನ್ನಡ ಚಿತ್ರರಂಗದಲ್ಲೀಗ ಹೊಸಬರ ಹೊಸ ಪ್ರಯತ್ನಕ್ಕೆ ನೋಡುಗರ ಬೆಂಬಲ ಸಿಗುತ್ತಿದೆ. "ಮಾಂಕ್ ದಿ ಯಂಗ್" ಚಿತ್ರ ಕೂಡ ಹೊಸ ಕಥೆಯೊಂದಿಗೆ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಬರುತ್ತಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿದರು. ನಟ ಪ್ರಥಮ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು‌. ಚಿತ್ರದಲ್ಲಿ ನಟಿಸಿರುವ ಪ್ರಣಯಮೂರ್ತಿ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: Ravi Kishan Daughter: ಭಾರತೀಯ ಸೇನೆ ಸೇರಿದ ‘ಹೆಬ್ಬುಲಿʼ ನಟ ರವಿ ಕಿಶನ್ ಮಗಳು ಇಶಿತಾ..!

"ಮಾಂಕ್ ದಿ ಯಂಗ್" ವಿಂಟೇಜ್ ಫ್ಯಾಮಿಲಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಇಂದು ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದೇವೆ. ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಅಂತಿಮ ಹಂತದಲ್ಲಿದೆ. ಇನ್ನು ಮೂರು ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡುತ್ತಿರುವ ಚಿತ್ರತಂಡಕ್ಕೆ ನನ್ನ ಧನ್ಯವಾದ. ಪ್ರೇಕ್ಷಕ ಕೊಟ್ಟ ದುಡ್ಡಿಗೆ ಮೋಸವಾಗದಂತಹ ಚಿತ್ರ ಮಾಡಿದ್ದೇವೆ.‌ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಮಾಸ್ಚಿತ್ ಸೂರ್ಯ.

ಈ ಚಿತ್ರದ ನಿರ್ದೇಶಕ ಮಾಸ್ಚಿತ್ ಸೂರ್ಯ, ನನ್ನನ್ನು ಈ ಚಿತ್ರದಲ್ಲಿ ಅಭಿನಯಿಸಲು ಕಥೆ ಹೇಳುವುದಕ್ಕೆ ಕರೆದಿದ್ದರು. ಕಥೆ ಚೆನ್ನಾಗಿತ್ತು. ನಟನೆಗೆ ಹೋದ ನಾನು ನಿರ್ಮಾಪಕನಾದೆ. ನನ್ನೊಂದಿಗೆ ನನ್ನ ಸ್ನೇಹಿತರು ನಿರ್ಮಾಣಕ್ಕೆ ಜೊತೆಯಾದರು. ಇಂದು ಟೀಸರ್ ಬಿಡುಗಡೆಯಾಗಿದೆ. ಸೆಪ್ಟೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ನಾನು ಸೇರಿದಂತೆ ಐದು ಜನ ನಿರ್ಮಾಪಕರು ಈ ಚಿತ್ರದಲ್ಲಿ ಅಭಿನಯಿಸಿದ್ದೇವೆ ಎಂದು ನಿರ್ಮಾಪಕರಲ್ಲೊಬ್ಬರಾದ ರಾಜೇಂದ್ರನ್ ಹೇಳಿದರು.

ನಿರ್ಮಾಪಕರಾದ ವಿನಯ್ ಬಾಬು ರೆಡ್ಡಿ, ಗೋಪಿಚಂದ್, ಲಾಲ್ ಚಂದ್ ಸಹ ಚಿತ್ರದ ಕುರಿತು ಮಾತನಾಡಿದರು.

ನಾವು ಸೀಮಿತವಾದ ಜೀವನ ನಡೆಸುತ್ತಿರುತ್ತೇವೆ. ಆದರೆ ಅದರ ಆಚೆ ಬಂದು ನೋಡಿದಾಗ ಬೇರೆ ಜೀವನ ಇದೆ. ಹಾಗೆ ನಮ್ಮ ಚಿತ್ರ ಕೂಡ. ಮಾಮೂಲಿ ಜಾನರ್‌ ಗಿಂತ ಸ್ವಲ್ಪ ಭಿನ್ನವಾದ ಚಿತ್ರ ಎನ್ನಬಹುದು. ‌ನಾನು ಹಾಗೂ ಮಾಸ್ಚಿತ್ ಸೂರ್ಯ ಮೊದಲು ಸಣ್ಣದಾಗಿ ಈ ಚಿತ್ರ ಆರಂಭ ಮಾಡಿದ್ದೆವು. ಆನಂತರ ನಾಲ್ಕು ಜನ ನಿರ್ಮಾಪಕರು ಜೊತೆಯಾದರು. ನಾನು ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬ. ಹಾಗೆ ನಾಯಕ ಕೂಡ. ನೋಡುಗರು ನಮ್ಮ ಚಿತ್ರವನ್ನು ಮೆಚ್ಚಿಕೊಳ್ಳುವ ಭರವಸೆಯಿದೆ ಎಂದು ಸರೋವರ್ ತಿಳಿಸಿದರು.

ಇದನ್ನೂ ಓದಿ: #Kichcha46 : ಸುದೀಪ್‌ ಹೊಸ ಸಿನಿಮಾ ಟೀಸರ್‌ ರಿಲೀಸ್‌ ಡೇಟ್‌ ಗೊತ್ತಾಯ್ತಾ?

ನಾಯಕಿ ಸೌಂದರ್ಯ ಗೌಡ, ಸಂಕಲನಕಾರ ಧನುಷ್ ಎಲ್ ಬೇದ್ರೆ, ಹಿನ್ನೆಲೆ ಸಂಗೀತ ನೀಡಿರುವ  ಸ್ವಾಮಿನಾಥನ್ ಹಾಗೂ ವಿ ಎಫ್ ಎಕ್ಸ್ ಮಾಡಿರುವ ಜಯೇಂದ್ರ ವಾಕ್ವಾಡಿ ಚಿತ್ರದ ಕುರಿತು ಮಾತನಾಡಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News