ಕೊಳಕು ಸ್ವಿಚ್ ಬೋರ್ಡ್‌ನ್ನು ಕ್ಲೀನ್‌ ಮಾಡಲು ಇಲ್ಲಿದೆ ಸಿಂಪಲ್‌ ಟ್ರಿಕ್ಸ್‌

Switch Boards Cleaning: ಮನೆಯನ್ನು ಸುಂದರವಾಗಿಸಲು ನಾವು ನೆಲ, ಗೋಡೆ ಮತ್ತು ಗೃಹೋಪಯೋಗಿ ವಸ್ತುಗಳನ್ನು ಸ್ವಚ್ಛಗೊಳಿಸುತ್ತೇವೆ. ಆದರೆ ಸ್ವಿಚ್ ಬೋರ್ಡ್ ಅನ್ನು ನಿರ್ಲಕ್ಷಿಸುತ್ತೇವೆ. ಇದರಿಂದಾಗಿ ಮನೆಯ ಸೌಂದರ್ಯದಲ್ಲಿ ಕೊರತೆ ಕಾಣುತ್ತದೆ.   

Written by - Chetana Devarmani | Last Updated : Jun 27, 2023, 06:12 PM IST
  • ಕೊಳಕು ಸ್ವಿಚ್ ಬೋರ್ಡ್‌ ಸ್ವಚ್ಛ ಮಾಡದೆ ಹಾಗೆ ಬಿಟ್ಟಿದ್ದೀರಾ?
  • ಕೊಳಕು ಸ್ವಿಚ್ ಬೋರ್ಡ್ ಅನ್ನು ಹೇಗೆ ಸ್ವಚ್ಛಗೊಳಿಸಬಹುದು?
  • ಕೊಳಕು ಸ್ವಿಚ್ ಬೋರ್ಡ್‌ನ್ನು ಕ್ಲೀನ್‌ ಮಾಡಲು ಇಲ್ಲಿದೆ ಸಿಂಪಲ್‌ ಟ್ರಿಕ್ಸ್‌
ಕೊಳಕು ಸ್ವಿಚ್ ಬೋರ್ಡ್‌ನ್ನು ಕ್ಲೀನ್‌ ಮಾಡಲು ಇಲ್ಲಿದೆ ಸಿಂಪಲ್‌ ಟ್ರಿಕ್ಸ್‌  title=
Switch Boards

Switch Boards Cleaning: ಮನೆಯನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ಕಾಣುವಂತೆ ಮಾಡಲು ನಾವು ಸಾಕಷ್ಟು ಪ್ರಯತ್ನಿಸುತ್ತೇವೆ. ಅದನ್ನು ಸರಿಯಾಗಿ ಶುಚಿಗೊಳಿಸುವುದರಿಂದ ಹಿಡಿದು ವಿಶೇಷ ರೀತಿಯಲ್ಲಿ ಅಲಂಕರಿಸುವವರೆಗೆ ನಮ್ಮ ಮನೆ ಸುಂದರವಾಗಿ ಕಾಣುವಂತೆ ನೋಡಿಕೊಳ್ಳುತ್ತೇವೆ. ಸಾಮಾನ್ಯವಾಗಿ ನಾವು ನೆಲ ಅಥವಾ ಪೀಠೋಪಕರಣಗಳನ್ನು ಸ್ವಚ್ಛಗೊಳಿಸುತ್ತೇವೆ. ಆದರೆ ಕೊಳಕು ಸ್ವಿಚ್ ಬೋರ್ಡ್ ಅನ್ನು ನಾವು ಗಮನಿಸುವುದಿಲ್ಲ. ಏಕೆಂದರೆ ನಾವು ಅದನ್ನು ನೀರಿನಿಂದ ಒರೆಸಿ ಸ್ವಚ್ಛ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅದನ್ನು ಸ್ವಚ್ಛಗೊಳಿಸುವುದಿಲ್ಲ. ಇಂದು ನಾವು ನಿಮಗೆ ಹಳೆಯ ಮತ್ತು ಕೊಳಕು ಸ್ವಿಚ್ ಬೋರ್ಡ್ ಅನ್ನು ಹೇಗೆ ಸ್ವಚ್ಛಗೊಳಿಸಬಹುದು ಎಂದು ತಿಳಿಸುತ್ತವೆ. 

ಸ್ವಿಚ್ ಬೋರ್ಡ್ ಅನ್ನು ಹೇಗೆ ಸ್ವಚ್ಛಗೊಳಿಸುವುದು? 

ಕೊಳಕು ಸ್ವಿಚ್ ಬೋರ್ಡ್‌ಗಳು ಮನೆಯ ಅಂದವನ್ನು ಕೆಡಿಸುತ್ತವೆ. ಕೆಲವರು ಇದಕ್ಕಾಗಿ ಪ್ರತಿ ವರ್ಷ ಸಂಪೂರ್ಣ ಸ್ವಿಚ್ ಬೋರ್ಡ್ ಬದಲಾಯಿಸುತ್ತಾರೆ. ಆದರೆ ಹಾಗೆ ಮಾಡುವ ಅಗತ್ಯವಿಲ್ಲ. ಸ್ವಿಚ್ ಬೋರ್ಡ್‌ಗಳ ಮೇಲಿರುವ ಹಳದಿ ಮತ್ತು ಕಪ್ಪು ಗುರುತುಗಳನ್ನು ಸ್ವಚ್ಛಗೊಳಿಸುವಾಗ ಶಾಕ್ ಆಗಬಹುದೆಂಬ ಭಯವೂ ಇದೆ. ಆದರೆ ಈ ವಸ್ತುಗಳನ್ನ ಬಳಸಿ ಸ್ವಚ್ಛಗೊಳಿಸಿದರೆ, ಅನಾಹುತ ಸಂಭವಿಸದು. 

ಇದನ್ನೂ ಓದಿ: Rainy Season Tips: ಮಳೆಗಾಲದ ಋತುವಿನಲ್ಲಿ ಈ ಗಿಡಮೂಲಿಕೆಗಳನ್ನು ಬಳಸಿ ಆರೋಗ್ಯ ರಕ್ಷಿಸಿಕೊಳ್ಳಿ!

ಪ್ರಮುಖ ಮತ್ತು ಮುಖ್ಯವಾದ ವಿಷಯವೆಂದರೆ ಸ್ವಿಚ್ ಬೋರ್ಡ್ ಅನ್ನು ಸ್ವಚ್ಛಗೊಳಿಸುವ ಮೊದಲು, ಮನೆಯ ಮುಖ್ಯ ವಿದ್ಯುತ್ ಸಂಪರ್ಕವನ್ನು ಆಫ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಮೊದಲು ಅದನ್ನು ಆಫ್‌ ಮಾಡಿ. ಇದರಿಂದ ಶಾಕ್‌ ಭಯವೂ ನಿಮಗೆ ಇರುವುದಿಲ್ಲ. ಸ್ವಿಚ್‌ಬೋರ್ಡ್ ಅನ್ನು ಸ್ವಚ್ಛಗೊಳಿಸುವಾಗ ನಿಮ್ಮ ಕೈಯಲ್ಲಿ ರಬ್ಬರ್ ಕೈಗವಸುಗಳನ್ನು ಮತ್ತು ನಿಮ್ಮ ಪಾದಗಳಲ್ಲಿ ಡ್ರೈ ಚಪ್ಪಲ್‌ಗಳನ್ನು ಧರಿಸಲು ಮರೆಯಬೇಡಿ. 

ಈ 2 ವಸ್ತುಗಳ ಸಹಾಯದಿಂದ ಸ್ವಿಚ್ ಬೋರ್ಡ್ ಸ್ವಚ್ಛಗೊಳಿಸಿ

1. ಅಡಿಗೆ ಸೋಡಾ: ಸ್ವಿಚ್ ಬೋರ್ಡ್ ಸ್ವಚ್ಛ ಮಾಡಲು ಅಡುಗೆ ಸೋಡಾವನ್ನು ಕೂಡ ಬಳಸಬಹುದು. ಇದಕ್ಕಾಗಿ ಅಡುಗೆ ಸೋಡಾವನ್ನು ಒಂದು ಬೌಲ್‌ನಲ್ಲಿ ಹಾಕಿ, ಅದಕ್ಕೆ ನಿಂಬೆಹಣ್ಣನ್ನು ಹಿಂಡಿ ಮಿಶ್ರಣ ಮಾಡಿ. ಈಗ ಹಳೆಯ‌ ಟೂತ್ ಬ್ರಷ್ ಸಹಾಯದಿಂದ ಸ್ವಿಚ್ ಬೋರ್ಡ್‌‌ ಮೇಲೆ ಮಿಶ್ರಣವನ್ನು ಉಜ್ಜಿ=, ಇದು ಬೋರ್ಡ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ.

2. ಬಿಳಿ ವಿನೆಗರ್ : ಸ್ವಿಚ್ ಬೋರ್ಡ್ ಅನ್ನು ಸ್ವಚ್ಛಗೊಳಿಸಲು ಬಿಳಿ ವಿನೆಗರ್ ಬಳಕೆ ತುಂಬಾ ಪರಿಣಾಮಕಾರಿಯಾಗಿದೆ. ಇದಕ್ಕಾಗಿ 2 ಚಮಚ ವಿನೆಗರ್ ಮತ್ತು 1 ಚಮಚ ನಿಂಬೆ ರಸವನ್ನು 1 ಕಪ್ ನೀರಿನಲ್ಲಿ ಬೆರೆಸಿ. ಈಗ ಈ ದ್ರಾವಣದಲ್ಲಿ ಹಲ್ಲುಜ್ಜುವ ಬ್ರಷ್ ಅಥವಾ ಬಟ್ಟೆಯನ್ನು ಅದ್ದಿ ಮತ್ತು ಸ್ವಿಚ್ ಬೋರ್ಡ್ ಅನ್ನು ಒರೆಸಿ. ಇದು ನಿಮ್ಮ ಸ್ವಿಚ್‌ಬೋರ್ಡ್ ಅನ್ನು ತಕ್ಷಣವೇ ಹೊಳೆಯುವಂತೆ ಮಾಡುತ್ತದೆ.

ತಕ್ಷಣವೇ ಮೇನ್‌ ಸ್ವಿಚ್ ಆನ್ ಮಾಡಬೇಡಿ 

ಸ್ವಿಚ್ ಬೋರ್ಡ್ ಅನ್ನು ಸ್ವಚ್ಛಗೊಳಿಸಿದ ನಂತರ, ತಕ್ಷಣವೇ ಮನೆಯ ಮೇನ್ ಸ್ವಿಚ್ ಅನ್ನು ಆನ್ ಮಾಡಬೇಡಿ. ಸ್ವಲ್ಪ ಸಮಯ ಕಾಯಿರಿ. ಸ್ವಿಚ್ ಬೋರ್ಡ್ ಕ್ಲೀನ್ ಮಾಡಿದ ನಂತರ 30-40 ನಿಮಿಷಗಳ ನಂತರ ಮಾತ್ರ ಬೋರ್ಡ್ ಅನ್ನು ಆನ್ ಮಾಡಿ. ಬೋರ್ಡ್ ಸಂಪೂರ್ಣವಾಗಿ ಒಣಗಿದೆಯೆ ಎಂದು ಖಚಿತಪಡಿಸಿಕೊಂಡ ಬಳಿಕವೇ ಆನ್‌ ಮಾಡಿ. 

ಇದನ್ನೂ ಓದಿ: ಆಲೂಗಡ್ಡೆ ಜೊತೆ ಇದನ್ನು ಬೆರೆಸಿ ಮುಖಕ್ಕೆ ಹಚ್ಚಿ.. ಕಲೆ, ಸುಕ್ಕುಗಳಿಂದ ಸಿಗುತ್ತೆ ಮುಕ್ತಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News