Puttakkana Makkalu Serial : ಪುಟ್ಟಕ್ಕನ ಮಗಳ ಮದುವೆ ಮುರಿದು ಬಿತ್ತು ಮುಂದೇನು..ಕಂಠಿ ಮಾಡಿದ ಶಪಥದ ಕಥೆ ಏನು?

Puttakkana Makkalu Serial: ಕನ್ನಡ ಕಿರುತೆರೆ ಮಾರುಕಟ್ಟೆಯನ್ನು ನಂಬರ್ 1 ಸ್ಥಾನದಲ್ಲಿ ನಿಂತು ಮುನ್ನಡೆಸುತ್ತಿರುವ ಮನರಂಜನಾ ವಾಹಿನಿ ಜೀ ಕನ್ನಡ . ತಮ್ಮ ವಿಶೇಷ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಬದುಕಿಗೆ ಹತ್ತಿರವಾಗಿರುವ ವಾಹಿನಿ ಹಲವಾರು ಮೈಲಿಗಲ್ಲುಗಳನ್ನು ದಾಟಿ ದಾಖಲೆಗಳನ್ನು  ನಿರ್ಮಿಸುತ್ತಲೇ ಇರುವುದು ಈಗ ಇತಿಹಾಸ . 

Written by - Zee Kannada News Desk | Last Updated : Jun 26, 2023, 07:37 PM IST
  • ಪುಟ್ಟಕ್ಕನ ಮಕ್ಕಳು ಧಾರಾವಾಹಿ ಜನ ಮೆಚ್ಚುಗೆ ಪ್ರತೀವಾರದ ರೇಟಿಂಗ್ ಪಡೆದಿರುವ ಧಾರವಾಹಿ
  • ಕನ್ನಡ ಕಿರುತೆರೆ ಮಾರುಕಟ್ಟೆಯನ್ನು ನಂಬರ್ 1 ಸ್ಥಾನದಲ್ಲಿ ಮನರಂಜನಾ ವಾಹಿನಿ ಜೀ ಕನ್ನಡ
  • ಮನರಂಜನೆಯ ಜೊತೆ ಉತ್ತಮ ಸಂದೇಶ ನೀಡುತ್ತಿರುವ ಪುಟ್ಟಕ್ಕನ ಮಕ್ಕಳು
Puttakkana Makkalu Serial : ಪುಟ್ಟಕ್ಕನ ಮಗಳ ಮದುವೆ ಮುರಿದು ಬಿತ್ತು ಮುಂದೇನು..ಕಂಠಿ ಮಾಡಿದ ಶಪಥದ ಕಥೆ ಏನು? title=

ಬೆಂಗಳೂರು: ಕನ್ನಡ ಕಿರುತೆರೆ ಮಾರುಕಟ್ಟೆಯನ್ನು ನಂಬರ್ 1 ಸ್ಥಾನದಲ್ಲಿ ನಿಂತು ಮುನ್ನಡೆಸುತ್ತಿರುವ ಮನರಂಜನಾ ವಾಹಿನಿ ಜೀ ಕನ್ನಡ . ತಮ್ಮ ವಿಶೇಷ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಬದುಕಿಗೆ ಹತ್ತಿರವಾಗಿರುವ ವಾಹಿನಿ ಹಲವಾರು ಮೈಲಿಗಲ್ಲುಗಳನ್ನು ದಾಟಿ ದಾಖಲೆಗಳನ್ನು  ನಿರ್ಮಿಸುತ್ತಲೇ ಇರುವುದು ಈಗ ಇತಿಹಾಸ . 

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಚಂದನವನದ ಪುಟ್ಮಲ್ಲಿ ಹಿರಿಯ ನಟಿ ಉಮಾಶ್ರೀ ಅವರನ್ನು ಕಿರುತೆರೆಗೆ ಕರೆತಂದ ಹೆಗ್ಗಳಿಕೆ ಹೊಂದಿರುವ ವಾಹಿನಿ ಈ ಧಾರಾವಾಹಿಯ ಮೊದಲ ಸಂಚಿಕೆಯಿಂದ ಈವರೆಗೂ ಕಥಾ ನಿರೂಪಣಾ ಶೈಲಿಯಲ್ಲಿ ಹಿಡಿತ ಸಾಧಿಸಿ ಜನ ಮೆಚ್ಚುಗೆ ಸಂಪಾದಿಸಿರುವುದಕ್ಕೆ ಸಾಕ್ಷಿಯಾಗಿದೆ ಪ್ರತೀವಾರದ ರೇಟಿಂಗ್.

ಇದನ್ನೂ ಓದಿ: Puneet Rajkumar: ಶಕ್ತಿ ಯೋಜನೆ ಹಿನ್ನಲೆ ಪುನೀತ್‌ ರಾಜ್‌ ಕುಮಾರ್‌ ಸಮಾಧಿಗೆ ಮಹಿಳೆಯರ ದಂಡು..!

ಪ್ರತಿದಿನ ರಾತ್ರಿ 7.30 ಕ್ಕೆ ಪ್ರಸಾರವಾಗುವ ಈ ಪುಟ್ಟಕ್ಕನ ಮಕ್ಕಳು ಮನರಂಜನೆಯ ಜೊತೆ ಉತ್ತಮಸಂದೇಶ ಕೊಡುತ್ತಿದೆ. ಅಷ್ಟೇ ಅಲ್ಲದೆ ಆರಂಭದಿಂದ ಇಲ್ಲಿಯವರೆಗೂ ಕನ್ನಡ ಮನರಂಜನಾ ಮಾರುಕಟ್ಟೆಯಲ್ಲಿ  ಗರಿಷ್ಠ ರೇಟಿಂಗ್ ಗಳಿಸುವುದರ ಮೂಲಕ ನಂಬರ್ ಧಾರಾವಾಹಿಯಾಗಿ ಮುಂದುವರೆಯುತ್ತಿದೆ. 

ಇದೀಗ , ಈ ಜನಪ್ರಿಯ ಧಾರಾವಾಹಿ ರೋಚಕ ಘಟ್ಟವನ್ನ ತಲುಪಿದ್ದು ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಾದ ಕಂಠಿ - ಸ್ನೇಹಾ ಜೋಡಿಯ ಮದುವೆ ಮುರಿದು ಬಿದ್ದಿದ್ದು ವೀಕ್ಷಕರಿಗೆ ಮುಂದಿನ ಕಥೆಯ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ.  

ಇದನ್ನೂ ಓದಿ: Actress Ramya: ಅಭಿಮಾನಿ ಜೊತೆ ಸರಳತೆ ಮೆರೆದ ಮೋಹಕ ತಾರೆ ರಮ್ಯಾ; ಪದ್ಮಾವತಿ ಸಿಂಪ್ಲಿಸಿಟಿಗೆ ಫ್ಯಾನ್ಸ್‌ ಫಿದಾ!

ಈ ಧಾರಾವಾಹಿ ಸ್ತ್ರೀಶಕ್ತಿಯ ಪ್ರತಿನಿಧಿಸುತ್ತಿರುವುದು ಇದರ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಪುಟ್ಟಕ್ಕ ಒಂಟಿ ಪೋಷಕಿಯಾಗಿ ಎಲ್ಲಾ ಅಡೆತಡೆಗಳನ್ನು ದಾಟಿ ಮೂವರು ಹೆಣ್ಣು ಮಕ್ಕಳನ್ನು ಇಡೀ ಜಗತ್ತೆ ಹೆಮ್ಮೆ ಪಡುವಂತೆ ಬೆಳೆಸುತ್ತಿರುವುದು  ಸ್ತ್ರೀ ಕುಲಕ್ಕೆ  ಆದರ್ಶವಾಗಿದೆ. 

ಒಬ್ಬ ಧೈರ್ಯಶಾಲಿ ಮನೆಮಗಳಾಗಿ ನಾಯಕಿ ಸ್ನೇಹ, ಇಡೀ ಊರನ್ನೇ ನಡುಗಿಸೋ ಶೂರನಾಗಿ ನಾಯಕ ಕಂಠಿ ತಮ್ಮ ಮುದ್ದಾದ ಅಭಿನಯದ ಮೂಲಕ ಇಡೀ ಕರ್ನಾಟಕದ ಮನೆಮಾತಾಗಿದ್ದಾರೆ . 

ಈ ಧಾರಾವಾಹಿಯ ಮುದ್ದಾದ ಜೋಡಿಸ್ನೇಹಾ ಮತ್ತು ಕಂಠಿ ಪ್ರೇಮ ಕತೆಯಲ್ಲಿ ತಿರುವುಗಳನ್ನು ನೀಡುತ್ತಾ ಮದುವೆ ಮುರಿಯುವ  ಹಂತದವರೆಗೂ ಕುತೂಹಲಗಳನ್ನು ಕಾಯ್ದಿರಿಸಿಕೊಂಡು ಬಂದಿರುವ ತಂಡ ಮುಂದೇನು ಎನ್ನುವ ವೀಕ್ಷಕರ ಪ್ರಶ್ನೆಗೆ , ಕುತೂಹಲಕ್ಕೆ ಉತ್ತರ ಕೊಡಲು ಸಜ್ಜಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News