Bengaluru News: ಇಂದು ಬೆಳ್ಳಂ‌ ಬೆಳಗ್ಗೆ ಬೆಂಗಳೂರಿನ ರೌಡಿಗಳಿಗೆ ಪೊಲೀಸರು ಬಿಗ್ ಶಾಕ್ ಕೊಟ್ಟಿದ್ದಾರೆ. ನಗರದಾದ್ಯಂತ ನಸುಕಿನಲ್ಲೇ ಎಂಟ್ರಿ ಕೊಟ್ಟಿದ್ದ ಖಾಕಿ ಪಡೆಯ ಒಂದು ಸಣ್ಣ ಸುಳಿವೂ ರೌಡಿಗಳಿಗಿರಲಿಲ್ಲ.. ಬೆಂಗಳೂರಿನ ಎಂಟೂ ಡಿವಿಷನ್ ನಲ್ಲೂ ಇವತ್ತು ನಡೆದಿದ್ದ ಪೊಲೀಸ್ ಮೆಗಾ ರೇಡ್ ಅಪ್ಡೇಟ್ ಇಲ್ಲಿದೆ.  


COMMERCIAL BREAK
SCROLL TO CONTINUE READING

ಹೌದು.. ಇವತ್ತು ಬೆಳ್ಳಂ ಬೆಳಗ್ಗೆಯೇ ನಗರದ ಎಲ್ಲಾ ರೌಡಿಗಳಿಗೆ ಬೆಂಗಳೂರು ಸಿಟಿ ಪೊಲೀಸರು ಶಾಕ್ ಕೊಟ್ಟಿದ್ದಾರೆ. ರಾತ್ರಿ  ಪಾರ್ಟಿಗೀರ್ಟಿ ಅಂತಾ ಮಾಡ್ಕೊಂಡು ನಿದ್ದೆ ಮಂಪರಿನಲ್ಲಿದ್ದ ರೌಡಿ ಆಸಾಮಿಗಳಿಗೆ ಪೊಲೀಸರು ಬರ್ತಾರೆ ಅನ್ನೋ ಸುಳಿವೇ ಇರ್ಲಿಲ್ಲ.. ಸೀಕ್ರೆಟ್ ಆಗಿಯೇ ಪ್ಲಾನ್ ಮಾಡಿಕೊಂಡಿದ್ದ ಪೊಲೀಸರು ನಗರದ ಎಂಟೂ ವಿಭಾಗಗಳಲ್ಲಿ ದಾಳಿ ನಡೆಸಿದರು. ಹೊಸ ಪೊಲೀಸ್ ಕಮಿಷನರ್ ದಯಾನಂದ್ ಸೂಚನೆಯಂತೆ ಮುಂಜಾನೆ ಸಾವಿರಾರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು. 


ಎಲೆಕ್ಷನ್ ಟೈಮಲ್ಲಿ ರೇಡ್ ಮಾಡಿ ವಾರ್ನಿಂಗ್ ಕೊಟ್ಟಿದ್ದ ಪೊಲೀಸರು ಎಲೆಕ್ಷನ್ ಟೈಮಲ್ಲಿ ಜೈಲಿಗೆ ಕಳಿಸಿದ್ದೋರನ್ನೆಲ್ಲಾ ಚುನಾವಣೆ ಮುಗಿದ ಮೇಲೆ ಬಿಡುಗಡೆಗೊಳಿಸಿ ವಾರ್ನ್ ಮಾಡಿದ್ದರು. ಆದರೆ,  ನಗರದ ಕೆಲವೆಡೆ ರೌಡಿ ಆಸಾಮಿಗಳ ಪುಂಡಾಟ ಶುರುವಾಗಿತ್ತು.. ಅಲ್ಲದೇ ಗಾಂಜಾ ಘಾಟು, ಡ್ರಗ್ ಗಮ್ಮತ್ತು ಮತ್ತೆ ಶುರುವಾಗಿತ್ತು. 


ಇದನ್ನೂ ಓದಿ- ಈ ದಿನದ ಟಾಪ್ 10 ಸುದ್ದಿಗಳು- ಜೂನ್ 08 ಗುರುವಾರ 2023


ಮಾದಕ ಜಗತ್ತಿನ ವಿರುದ್ಧ ಮತ್ತು ರೌಡಿಸಂ ವಿರುದ್ದ ಡ್ರೈವ್ ಮುಂದುವರೆಸಿರೋ ಬೆಂಗಳೂರು ಸಿಟಿ ಪೊಲೀಸರು ಇಂದು ನಗರದಾದ್ಯಂತ ದಾಳಿ ನಡೆಸಿದ್ದಾರೆ. ಪಶ್ಚಿಮ ವಲಯದ ಕೇಂದ್ರ, ಪಶ್ಚಿಮ, ಉತ್ತರ ದಕ್ಷಿಣ ವಿಭಾಗದ 607 ರೌಡಿಗಳ ಮನೆ ಮೇಲೆ‌ ದಾಳಿ ಮಾಡಲಾಗಿದ್ದು, ದಾಳಿ ವೇಳೆ 2ವೆಪನ್ ಗಳು, ಒಂದು ವಾಹನ, 8ಕೆಜಿ ಗಾಂಜಾ ಪತ್ತೆಯಾಗಿದೆ. ಅಲ್ಲದೇ ಜಾಮೀನು ರಹಿತ ವಾರೆಂಟ್ ಇಶ್ಯೂ ಆಗಿದ್ರು ತಲೆಮರೆಸಿಕೊಂಡಿದ್ದ 11ರೌಡಿಗಳು ಪತ್ತೆಯಾಗಿದ್ದಾರೆ.. ಜೊತೆಗೆ ಅಕ್ರಮವಾಗಿ ಲ್ಯಾಂಡ್ ಡೀಲಿಂಗ್ ಮಾಡ್ತಿದ್ದೋರು ಕೂಡ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗಿದೆ. 


ಇನ್ನು ಪೂರ್ವ ವಲಯದ ಈಶಾನ್ಯ, ಪೂರ್ವ, ಆಗ್ನೇಯ, ವೈಟ್ ಫಿಲ್ಡ್ ವಿಭಾಗದ 648ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿತ್ತು.. ದಾಳಿ ವೇಳೆ 1.1ಕೆಜಿ ಗಾಂಜಾ, ಎಂಟು ನಂಬರ್ ಪ್ಲೇಟ್ ಇಲ್ಲದ ವಾಹನಗಳು ಪತ್ತೆಯಾಗಿದ್ವು.. ಅಲ್ಲದೇ ಕೆಲ ಮಾರಕಾಸ್ತ್ರಗಳು, ಜಾಮೀನು ರಹಿತ ವಾರೆಂಟ್ ಇದ್ದರೂ ತಲೆ ಮರೆಸಿಕೊಂಡಿದ್ದ 34ಜನ ಆರೋಪಿಗಳು ಪತ್ತೆಯಾಗಿದ್ದು, ಠಾಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಓರ್ವನ ವಿರುದ್ಧ ಕೇಸ್ ದಾಖಲು ಮಾಡಲಾಗಿದ್ದು 64 ಸಣ್ಣಪುಟ್ಟ ಕೇಸದ ಗಳು ದಾಖಲಾಗಿವೆ..
 
ಇದನ್ನೂ ಓದಿ- ಪ್ರೀತಿಸಿದವಳ ದೇಹವನ್ನು ಕತ್ತರಿಸಿ ಕುಕ್ಕರ್ ನಲ್ಲಿ ಬೇಯಿಸಿ ಬೀದಿ ನಾಯಿಗಳಿಗೆ ತಿನ್ನಿಸಿದ ! ಮುಂಬಯಿಯಲ್ಲಿ ಘನ ಘೋರ ಘಟನೆ 


ಒಟ್ಟಾರೆಯಾಗಿ ನಗರದಾದ್ಯಂತ ಇಂದು ರೌಡಿಗಳಿಗೆ ಪೊಲೀಸರು ಚಳಿ ಬಿಡಿಸಿದ್ದಾರೆ.. ಕ್ರೈಂ ಆ್ಯಕ್ಟಿವಿಟೀಸ್ ಕಮ್ಮಿ ಮಾಡೋ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಾಚರಣೆ ಮುಂದುವರೆದಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ