ಬೆಂಗಳೂರು: ಭಕ್ತರ ಲಕ್ಷ ಲಕ್ಷ ಹಣ ಸೇರಿದ್ದು ಆಕೆಯ ಅಕೌಂಟಿಗೆ ಎಂಬ ವದಂತಿಗಳು ಹಬ್ಬುತ್ತಿವೆ. ವಿಡಿಯೋ ಕಾಲಿಂಗ್‌ನಲ್ಲೇ ನಂಬಿ ಸ್ವಾಮೀಜಿ ಮೋಸಹೋದರಾ ಎಂಬ ಪ್ರಶ್ನೆಗಳು ಕಾಡುತ್ತಿವೆ. ಸದ್ಯ ಮೂರ್ನಾಲ್ಕು ವರ್ಷದ ರಹಸ್ಯ ಬಟಾ ಬಯಲಾಗಿದೆ ಎನ್ನಲಾಗ್ತಿದೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ್ರೂ ರಹಸ್ಯವಾಗಿ ಉಳಿದಿದ್ದ ಸ್ವಾಮೀಜಿ ಸ್ಟೋರಿ, ಇದೀಗ ಬಹಿರಂಗವಾಗಿದೆ ಎನ್ನಲಾಗ್ತಿದೆ. ಯುವತಿ ವಿರುದ್ದವೇ ದೂರು ಸ್ವಾಮೀಜಿ ದೂರು ನೀಡಿದ್ದರು. ಅನಾಮಿಕ ಯುವತಿಯ ಅಕೌಂಟ್ ಗೆ ಲಕ್ಷ ಲಕ್ಷ ಹಣ ಟ್ರಾನ್ಸ್ ಫರ್ ಆಗಿದೆ ಅಂತೆ ಎನ್ನಲಾಗ್ತಿದೆ. ಪರಿಚಯವೇ ಇಲ್ಲದ ಯುವತಿ ಅಕೌಂಟ್ ಗೆ ಲಕ್ಷಾಂತರ ರೂಪಾಯಿ ಹಣ ಹಾಕಿದ್ಯಾಕೆ...? ಎಂಬ ಅನುಮಾನವೂ ಉದ್ಭವಿಸಿದೆ.
ಒಂದು ತಿಂಗಳಿಂದ ಬೆಂಗಳೂರು ಗ್ರಾಮಾಂತರ ಪೊಲೀಸರು ರಹಸ್ಯ ಕಾಪಾಡಿದ್ದರಂತೆ ಎನ್ನಲಾಗಿದೆ. ಆಡಿಯೋ.. ವಿಡಿಯೋ.. ಅಕೌಂಟ್ ಡಿಟೈಲ್ಸ್ ನೊಂದಿಗೆ ಪೊಲೀಸರಿಗೆ ಸ್ವಾಮೀಜಿ ದೂರು ನೀಡಿದ್ದಾರಂತೆ ಎನ್ನಲಾಗಿದೆ. FIR ದಾಖಲಿಸಿಕೊಂಡ ಪೊಲೀಸರು ರಹಸ್ಯವಾಗಿ ತನಿಖೆ ನಡೆಸುತ್ತಿದ್ದರಂತೆ ಎನ್ನಲಾಗಿದೆ.
ಇದನ್ನೂ ಓದಿ:ನಾಗರಹೊಳೆಯ ದಮ್ಮನಕಟ್ಟೆ ರೇಂಜ್ ನಲ್ಲಿ ಪ್ರವಾಸಿಗರಿಗೆ ಬ್ಲಾಕ್ ಪ್ಯಾಂಥರ್ ದರ್ಶನ
ಇದು ಸಿದ್ದಗಂಗಾ ಶಾಖಾ ಮಠದ ಸ್ಪೋಟಕ ಸ್ಟೋರಿಯಾಗಿದೆ. ಇದು ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಂಬಂಧಿಸಿದ ಸ್ಟೋರಿ ಎನ್ನಲಾಗಿದೆ. 2020 ರಲ್ಲಿ ಈ ಯುವತಿ ಫೇಸ್‌ಬುಕ್‌ನಲ್ಲಿ ಸ್ವಾಮೀಜಿಗೆ ಪರಿಚಯವಾಗಿದ್ದರಂತೆ. ವರ್ಷ ಅನ್ನೋ ಹೆಸರಿನಿಂದ ಯುವತಿ ಪರಿಚಯ ಮಾಡಿಕೊಂಡಿದ್ದಳಂತೆ.
ನನಗೆ ಆಧ್ಯಾತ್ಮಿಕದಲ್ಲಿ ಇಚ್ಚೆ ಇದೆ ಎಂದು ಆ ಯುವತಿ ಸ್ವಾಮೀಜಿ ಬಳಿ ಹೇಳಿದ್ದಳಂತೆ. ನಂತರ ತನ್ನ ಮೊಬೈಲ್ ನಂಬರ್ ಎಕ್ಸ್ಚೆಂಜ್ ಮಾಡಿಕೊಂಡಿದ್ದರಂತೆ. ತಿಂಗಳುಗಳ ಕಾಲ ವಿಡಿಯೋ ಕಾಲಿಂಗ್ ಮೂಲಕ ಸಂಪರ್ಕದಲ್ಲಿದ್ದರಂತೆ. ಆದ್ರೆ ಯಾವತ್ತೂ ತನ್ನ ಮುಖವನ್ನ ಸ್ವಾಮೀಜಿಗೆ ವರ್ಷ ತೋರಿಸಿರಲಿಲ್ಲವಂತೆ. ನನಗೆ ತಂದೆ - ತಾಯಿ ಯಾರು ಇಲ್ಲ ಎಂದು ಸ್ವಾಮೀಜಿಗೆ ಯುವತಿ ನಂಬಿಸಿದ್ದರಂತೆ ಎಂದು ಹೇಳಲಾಗ್ತಿದೆ.
ನಾನು ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡ್ತಿದ್ದೇನೆ ಎಂದು ಹೇಳಿದ್ದರಂತೆ. ನನಗೆ ಹಣದ ಸಹಾಯ ಮಾಡಿ ಎಂದು ಯುವತಿ ಕೇಳಿಕೊಂಡಿದ್ಲಂತೆ. ಮೊದಲು ತನ್ನ ಸ್ನೇಹಿತೆ ಅಕೌಂಟಿಗೆ ಅಮೌಂಟ್ ಹಾಕಿಸಿಕೊಂಡಿದ್ದರಂತೆ. ಸ್ವಾಮೀಜಿ ಮೊದಲು 2 ಲಕ್ಷ ಹಣ ಟ್ರಾನ್ಸ್ಫರ್ ಮಾಡಿದ್ದರಂತೆ. ನಂತರ ಆಕೆ ಕೇಳಿದಾಗಲೆಲ್ಲ ಲಕ್ಷ ಲಕ್ಷ ಹಣ ಹಾಕಿದ್ದರಂತೆ ಎನ್ನಲಾಗಿದೆ.
ಇದನ್ನೂ ಓದಿ:ತಮ್ಮನ ಮೇಲಿನ ಸೇಡು; ಹಂತಕರ ಕೈಯಲ್ಲಿ ಬಲಿಯಾಗಿದ್ದು ಮಾತ್ರ ಅಣ್ಣ !
ತನ್ನ ಹೆಸರಲ್ಲಿ ಎಕರೆಗಟ್ಟಲೆ ಜಮೀನಿದೆ ಎಂದು ಯುವತಿ ನಂಬಿಸಿದ್ದರಂತೆ. ಅದನ್ನು ಮಠದ ಹೆಸರಿಗೆ ಬರೆಯೋದಾಗಿ ಯುವತಿ ಹೇಳಿದ್ದರಂತೆ. ಯುವತಿಯ ಎಲ್ಲಾ ಮಾತಿಗೆ ಮರುಳಾಗಿ ಸ್ವಾಮೀಜಿ ಸುಮಾರು 35 ಲಕ್ಷಕ್ಕೂ ಹೆಚ್ಚು ಹಣ ಹಾಕಿದ್ದರಂತೆ. ವಿಪರ್ಯಾಸಕ್ಕೆ ಸ್ವಾಮೀಜಿ ಇದುವರೆಗೂ ಯುವತಿಯನ್ನ ನೋಡಿಲ್ಲವಂತೆ.
ಆಕೆ ಇದುವರೆಗೂ ಮಠಕ್ಕೆ ಬಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರಂತೆ. ಎಮ್ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದೇನೆ ಎಂದು ಮತ್ತೆ ವರ್ಷ ಕರೆ ಮಾಡಿದ್ದರಂತೆ. ಜಾಗದ ಡಾಕ್ಯುಮೆಂಟ್ ತರಲು ಹೋದ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದರಂತೆ. ಆಸ್ಪತ್ರೆಗೆ ಕಟ್ಟಲು ಹಣ ಬೇಕು ಎಂದು ಯುವತಿ ಮತ್ತೆ ಕೇಳಿದ್ದರಂತೆ. ಆಗ ಸ್ವಾಮಿಜಿಗೆ ಅನುಮಾನ ಬಂದು ತಾರಾ ಅನ್ನೋರನ್ನ ಆಸ್ಪತ್ರೆಗೆ ಕಳಿಸಿದ್ದರಂತೆ ಎನ್ನಲಾಗಿದೆ.
ಆದ್ರೆ ವರ್ಷ ಅನ್ನೋ ಯುವತಿ ಆಸ್ಪತ್ರೆಗೆ ದಾಖಲಾಗಿರೊ ಮಾಹಿತಿ ಸಿಗೋದಿಲ್ಲ. ನಂತರ ಅನುಮಾನಗೊಂಡು ಹಣ ಹಾಕಿಸಿಕೊಂಡಿದ್ದ ಸ್ನೇಹಿತೆಗೆ ಸ್ವಾಮಿಜಿ ಕರೆ ಮಾಡಿದ್ದರಂತೆ. ಸ್ವಾಮೀಜಿ ನಮ್ಮ ಹಣ ವಾಪಸ್ಸು ಕೊಡುವಂತೆ ಕೇಳಿಕೊಂಡಿದ್ರಂತೆ. ಆಗ ಆಕೆಯ ಸ್ನೇಹತೆ ನಾನು 55 ಲಕ್ಷ ಸಾಲ ಮಾಡಿ ವರ್ಷಾಳನ್ನ ಡಿಸ್ಚಾರ್ಜ್ ಮಾಡಿಸಿದ್ದೇನೆ ಎಂದು ಹೇಳಿದ್ದಳಂತೆ.
ಇದನ್ನೂ ಓದಿ:Video: ನಿರ್ಮಾಣ ಹಂತದಲ್ಲಿಯೇ ಕುಸಿದ ಬಿಹಾರದ ಆಗುವನಿ-ಸುಲ್ತಂಗಂಜ್ ಸೇತುವೆ
ಆ ಹಣವನ್ನ ನೀವು ಕೊಡಬೇಕೆಂದು ಸ್ನೇಹಿತೆ ಮಠಕ್ಕೆ ತೆರಳಿದ್ದರಂತೆ. ಏಪ್ರಿಲ್ 23 ಕ್ಕೆ 6 ಜನರ ಜೊತೆ ಆಕೆಯ ಸ್ನೇಹಿತೆ ಮಠಕ್ಕೆ ತೆರಳಿದ್ದರಂತೆ. ಅವ್ರ ದುಡ್ಡನ್ನ ವಾಪಸ್ಸು ಕೊಡಿ ಎಂದು ಕೇಳಿಕೊಂಡಿದ್ದರಂತೆ. ಆ ಸಂದರ್ಭ ಸ್ವಾಮಿಜಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರಂತೆ. ನಾನು ದುಡುಕಿ ತಪ್ಪು ಮಾಡಿದ್ದೇನೆಂದಿದ್ದರಂತೆ. ಸ್ವಾಮೀಜಿಯ ಪೂರ್ಣ ಹೇಳಿಕೆ ರೆಕಾರ್ಡ್ ಮಾಡಿಕೊಂಡು ಅವರು ತೆರಳಿದ್ದರಂತೆ ಎನ್ನಲಾಗಿದೆ.
ನಂತರ ಸ್ವಾಮೀಜಿಯೆ ಎಲ್ಲರಿಗೂ ಊಟ ಹಾಕಿ ಕಳಿಸಿಕೊಟ್ಟಿದ್ರಂತೆ. ನಂತರ ಒಂದು ವಾರದ ಬಳಿಕ ಠಾಣೆಗೆ ಖುದ್ದು ಸ್ವಾಮೀಜಿ ಬಂದು ದೂರು ನೀಡಿದ್ದರಂತೆ. ಸ್ವಾಮೀಜಿ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದರಂತೆ. ಸ್ವಾಮೀಜಿ ದೂರಿನ ಮೇಲೆ FIR ದಾಖಲಿಸಿಕೊಂಡಿದ್ದ ದಾಬಸ್ ಪೇಟೆ ಪೊಲೀಸರು.
ಆಕೆಯ ಸ್ನೇಹತೆ ಸೇರಿ ಆರು ಜನರ ಮೇಲೆ ದೂರು ಸ್ವಾಮಿಜಿ ದೂರು ನೀಡಿದ್ದಾರೆ ಎನ್ನಲಾಗಿದೆ. ಏಪ್ರಿಲ್ 30 ರಂದು ದೂರು ನೀಡಿದ್ದಾರೆ ಎನ್ನಲಾಗಿದೆ. ಆದರೆ ಅನಾಮಿಕ ಸ್ನೇಹಿತೆ ಯಾರು ಅನ್ನೋದೆ ತಿಳಿದು ಬಂದಿಲ್ಲ ಎನ್ನಲಾಗಿದೆ. ಅನಾಮಿಕ ಯುವತಿಗೆ ಸ್ವಾಮೀಜಿ ಲಕ್ಷ ಲಕ್ಷ ಹಣ ಹಾಕಿದ್ದಾದ್ರು ಈಗ ಅನ್ನೋದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂಉ ಹೇಳಲಾಗಿದೆ.
ಇದನ್ನೂ ಓದಿ:ರಾಯಚೂರು: ವಿದ್ಯುತ್ ಶಾಕ್ ನಿಂದ ಲೈನ್ ಮೆನ್ ಸಾವು, ಗ್ರಾಮಸ್ಥರ ಆಕ್ರೋಶ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.