ಸ್ಯಾಂಡಲ್ವುಡ್ ಸ್ಟಾರ್ ನಟನ ಫಾರ್ಮ್ ಹೌಸ್‍ನಲ್ಲಿ ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಬರ್ತ್ ಡೇ?!
ಸ್ಯಾಂಡಲ್‍ವುಡ್‍ನ ಸ್ಟಾರ್ ನಟನೊಬ್ಬ ತಮ್ಮ ಫಾರ್ಮ್ ಹೌಸ್‍ನಲ್ಲಿ ಮೊಸ್ಟ್ ವಾಟೆಂಡ್ ನಟೋರಿಯಸ್ ರೌಡಿ ಶೀಟರ್ ಸೈಕಲ್ ರವಿಯ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರಂತೆ.
ಬೆಂಗಳೂರು: ಸ್ಯಾಂಡಲ್‍ವುಡ್‍ನ ಸ್ಟಾರ್ ನಟನೊಬ್ಬ ತಮ್ಮ ಫಾರ್ಮ್ ಹೌಸ್‍ನಲ್ಲಿ ಮೊಸ್ಟ್ ವಾಟೆಂಡ್ ನಟೋರಿಯಸ್ ರೌಡಿ ಶೀಟರ್ ಸೈಕಲ್ ರವಿಯ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರಂತೆ.
ಇದು ನಾವು ಹೇಳ್ತಾ ಇರೋ ಮಾತಲ್ಲ, ಪೊಲೀಸ್ ಉನ್ನತ ಮೂಲಗಳೇ ನೀಡಿರುವ ಪಕ್ಕಾ ಮಾಹಿತಿ ಇದು. ಬಣ್ಣದ ಲೋಕ ಹಾಗೂ ಪಾತಕ ಲೋಕಕ್ಕೂ ಹಳೆಯ ಸಂಬಂಧವಿದೆ ಎಂಬ ಮಾತು ಹಿಂದಿನಿಂದಲೇ ಚಾಲ್ತಿಯಲ್ಲಿದೆ. ಸದ್ಯ ಆ ನಟ ಮೈಸೂರಿನ ತಮ್ಮ ಫಾರ್ಮ್ ಹೌಸ್‍ನಲ್ಲಿ ಅನೇಕ ಕೊಲೆ ಯತ್ನ, ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಸೈಕಲ್ ರವಿಯ ಬರ್ತ್ ಡೇ ಪಾರ್ಟಿಯನ್ನು ಭರ್ಜರಿಯಾಗಿ ಆಚರಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಅಪ್ಪು ʼಗಂಧದಗುಡಿʼಯಿಂದ ಡಾಲಿ ʼಹೆಡ್‌ಬುಷ್ʼಗೆ ಎದುರಾಗುತ್ತಾ ಸಂಕಷ್ಟ...!.
ರೌಡಿ ಶೀಟರ್ ಸೈಕಲ್ ರವಿ ಅನೇಕ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿ ಜೈಲಿಗೂ ಹೋಗಿ ಬಂದಿದ್ದಾನೆ. ಸದ್ಯ ಸ್ಯಾಂಡಲ್‍ವುಡ್‍ನ ಸ್ಟಾರ್ ನಟ ಈ ರೌಡಿ ರವಿಯ ಹುಟ್ಟುಹಬ್ಬ ಆಚರಿಸಿದ್ದಲ್ಲದೇ ಆತನೊಂದಿಗೆ ಕಂಠಪೂರ್ತಿ ಎಣ್ಣೆ ಇಳಿಸಿದ್ರಾ ಅನ್ನೋ ಅನುಮಾನ ಸಹ ಇದೆ. ಹೀಗಾಗಿ ಸೈಕಲ್ ರವಿ ಜೊತೆಗೆ ನಟನಿಗೆ ಇರುವ ಲಿಂಕ್ ಏನು? ಯಾಕಿಷ್ಟು ಕ್ಲೋಸ್ ಆಗಿದ್ದಾರೆ ಅನ್ನೋ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.
ಸದ್ಯ ಪಾರ್ಟಿ ನಡೆದ ಮೈಸೂರಿನ ಫಾರ್ಮ್ ಹೌಸ್‍ನ ಕಡೆ ಪೊಲೀಸರು ಮುಖ ಮಾಡಿದ್ದು, ತನಿಖೆ ಮಂದುವರೆಸಲಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಯಶೋದಾ’ಗೆ ರಕ್ಷಿತ್ ಸಾಥ್; ಅ. 27ಕ್ಕೆ ಟ್ರೇಲರ್ ಬಿಡುಗಡೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ