ಯಶೋದಾ’ಗೆ ರಕ್ಷಿತ್ ಸಾಥ್; ಅ. 27ಕ್ಕೆ ಟ್ರೇಲರ್ ಬಿಡುಗಡೆ

‘ಯಶೋದಾ’ಸಿನಿಮಾ ರಿಲೀಸ್ ಆಗುವ ಮೊದಲು, ಈ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆಯಾಗಲಿದೆ. ಐದು ಭಾಷೆಗಳ ಟ್ರೇಲರ್ಗಳ ಪೈಕಿ ಕನ್ನಡದ ಟ್ರೇಲರ್ ಅನ್ನು ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಇದೇ ಅಕ್ಟೋಬರ್ 27ರಂದು ಸಂಜೆ 5:36ಕ್ಕೆ ಬಿಡುಗಡೆ ಮಾಡಲಿದ್ದಾರೆ. 

Written by - YASHODHA POOJARI | Edited by - Yashaswini V | Last Updated : Oct 26, 2022, 07:35 AM IST
  • ‘ಯಶೋದಾ’ ಒಂದು ಹೊಸ ಶೈಲಿಯ ಆಕ್ಷನ್ ಥ್ರಿಲ್ಲರ್ ಚಿತ್ರ
  • ಈ ಚಿತ್ರವನ್ನು ಶಿವಲೆಂಕ ಕೃಷ್ಣ ಪ್ರಸಾದ್ ತಮ್ಮ ಶ್ರೀದೇವಿ ಮೂವಿ ಪ್ರೊಡಕ್ಷನ್ಸ್ ಬ್ಯಾನರ್ನಡಿ ನಿರ್ಮಿಸಿದ್ದಾರೆ.
  • ಹರಿ-ಹರೀಶ್ ಈ ಚಿತ್ರವನ್ನು ಜಂಟಿಯಾಗಿ ನಿರ್ದೇಶಿಸಿದ್ದಾರೆ.
ಯಶೋದಾ’ಗೆ ರಕ್ಷಿತ್ ಸಾಥ್; ಅ. 27ಕ್ಕೆ ಟ್ರೇಲರ್ ಬಿಡುಗಡೆ title=
Yashoda Trailer

Yashoda Trailer: ಸಮಂತಾ ಅಭಿನಯದ ‘ಯಶೋದಾ’ ಚಿತ್ರವು ನವೆಂಬರ್ 11ರಂದು ಜಗತ್ತಿನಾದ್ಯಂತೆ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. 

‘ಯಶೋದಾ’ ಸಿನಿಮಾ ರಿಲೀಸ್ ಆಗುವ ಮೊದಲು, ಈ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆಯಾಗಲಿದೆ. ಐದು ಭಾಷೆಗಳ ಟ್ರೇಲರ್ಗಳ ಪೈಕಿ ಕನ್ನಡದ ಟ್ರೇಲರ್ ಅನ್ನು ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಇದೇ ಅಕ್ಟೋಬರ್ 27ರಂದು ಸಂಜೆ 5:36ಕ್ಕೆ ಬಿಡುಗಡೆ ಮಾಡಲಿದ್ದಾರೆ. 
ಬೇರೆ ಭಾಷೆಗಳ ಟ್ರೇಲರ್ಗಳನ್ನು ಆಯಾ ಭಾಷೆಗಳ ಜನಪ್ರಿಯ ನಟರು ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಓದಿ- ಕೆಜಿಎಫ್‌ ಕಥೆಗೆ ‘ತಂಗಲಾನ್’ ಟೈಟಲ್‌ : ಕೋಲಾರ ಗೋಲ್ಡ್ ಫೀಲ್ಡ್‌ನಲ್ಲಿ ನಟ ವಿಕ್ರಮ್..!
 
ಯಶೋದಾ’ ಒಂದು ಹೊಸ ಶೈಲಿಯ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಈ ಚಿತ್ರವನ್ನು ಶಿವಲೆಂಕ ಕೃಷ್ಣ ಪ್ರಸಾದ್ ತಮ್ಮ ಶ್ರೀದೇವಿ ಮೂವಿ ಪ್ರೊಡಕ್ಷನ್ಸ್ ಬ್ಯಾನರ್ನಡಿ ನಿರ್ಮಿಸಿದ್ದಾರೆ. ಹರಿ-ಹರೀಶ್ ಈ ಚಿತ್ರವನ್ನು ಜಂಟಿಯಾಗಿ ನಿರ್ದೇಶಿಸಿದ್ದಾರೆ. 

ಇದನ್ನೂ ಓದಿ- ಭಾರತ - ಪಾಕ್ ಕ್ರಿಕೆಟ್ ಪಂದ್ಯದಲ್ಲಿ ರಾರಾಜಿಸಿದ "ಘೋಸ್ಟ್‌" ಚಿತ್ರದ ಪೋಸ್ಟರ್

ಸಮಂತಾ ಜತೆಗೆ ಈ ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮ, ಸಂಪತ್ ರಾಜ್, ಶತ್ರು, ಮಧಿರಿಮಾ, ಕಲ್ಪಿಕಾ ಗಣೇಶ್, ದಿವ್ಯ ಶ್ರೀಪಾದ, ಪ್ರಿಯಾಂಕಾ ಶರ್ಮ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಂ. ಸುಕುಮಾರ್ ಅವರ ಛಾಯಾಗ್ರಹಣವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News