ಬೆಂಗಳೂರು: ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್‌ಸೈಟ್ ಬಳಸಿ ಮೂತ್ರಪಿಂಡ (ಕಿಡ್ನಿ ) ದಾನ ಮಾಡಿದರೆ 4 ಕೋಟಿ ನೀಡುವುದಾಗಿ ಜಾಹೀರಾತು ಹಾಕಿ ಸಾರ್ವಜನಿಕರಿಗೆ ವಂಚಿಸಿದ್ದ ಮೂವರು ವಿದೇಶಿ ಪ್ರಜೆಗಳನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾದ ಮಿನಿ‌ಮಿರಾಕಲ್ , ಕೋವಾ ಕೋಲಿಂಚ್ ಹಾಗೂ ಘಾನಾದ   ಮ್ಯಾಥ್ಯೂ ಇನ್ನೋಸೆಂಟ್ ಬಂಧಿತ ಆರೋಪಿಗಳು. 


COMMERCIAL BREAK
SCROLL TO CONTINUE READING

ಕಿಡ್ನಿ ಕೊಳ್ಳುವ ಹಾಗೂ ಮಾರುವವನ್ನು ಗುರಿಯಾಗಿಸಿಕೊಂಡ ಈ ಮೂವರು ಇತ್ತೀಚೆಗೆ ಸಾಗರ್ ಅಪೋಲೋ ಆಸ್ಪತ್ರೆಯ ಹೆಸರಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿಸಿದ್ದರು. ಕಿಡ್ನಿ ದಾನದ ಮೊದಲು 2 ಕೋಟಿ ಹಾಗೂ ದಾನ ಮಾಡಿದ ಮೇಲೆ 2 ಕೋಟಿ ನೀಡುವುದಾಗಿ ಜಾಹೀರಾತು ನೀಡಿದ್ರು. ಈ ಸಂಬಂಧ ಸಾಗರ್ ಅಪೋಲೋ ಆಸ್ಪತ್ರೆಯ ನಿರ್ದೇಶಕ ಮಹೇಂದ್ರ ಹೆಚ್ ಎಸ್ ಆರ್ ಲೇಔಟ್ ನ ಸಿಇಎನ್ ಠಾಣೆಗೆ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ನಡೆಸಿದ ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ನೇತೃತ್ವದ ತಂಡ ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದೆ.


ಇದನ್ನೂ ಓದಿ- ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ: ನಮಗೇ ಮಗು ಕೊಡಿ ಎಂದು ದುಂಬಾಲು ಬಿದ್ದ ಜನ


ಅಮೃತಹಳ್ಳಿಯ ಅಪಾರ್ಟ್‌ಮೆಂಟ್ ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ವೇಳೆ ಬೃಹತ್ ವಂಚನೆಯ ರಾಕೆಟ್ ಪತ್ತೆಯಾಗಿದೆ. ವಿಚಾರಣೆ ವೇಳೆ ಬ್ಯಾಪ್ಟಿಸ್ಟ್, ಕಾವೇರಿ ಆಸ್ಪತ್ರೆ ಸೇರಿದಂತೆ ಪ್ರಸಿದ್ಧ ಆಸ್ಪತ್ರೆಗಳ ನಕಲಿ ವೆಬ್ ಸೈಟ್ ನ್ನು ಆರೋಪಿಗಳು ಸೃಷ್ಟಿಸಿರುವುದಾಗಿ ಬಾಯ್ಬಿಟ್ಟಿದ್ದಾರೆ. ಆರೋಪಿಗಳು
ವಾಟ್ಸ್ ಆ್ಯಪ್ ಮುಖಾಂತರ ನೋಂದಣಿ  ಹಾಗೂ ವಿವಿಧ ಮಾದರಿಯ ಶುಲ್ಕ ನೆಪದಲ್ಲಿ ಕಿಡ್ನಿ ಕೊಳ್ಳುವ ಹಾಗೂ ಮಾರುವವರನ್ನು  ಗುರಿಯಾಗಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದರು ಎಂದು ತಿಳಿದುಬದಿದೆ. 


ಇದನ್ನೂ ಓದಿ- Crime: ದಿನದ ಖರ್ಚಿಗೆ ಹಣ ಬೇಕು: ಈತ ಮಾಡಿದ್ದೇನು ಗೊತ್ತಾ.!?


ಈ ಎಲ್ಲಾ ಕೆಲಸವನ್ನು ಫೋನ್ ಮುಖಾಂತರವೇ ನಡೆಸುತಿದ್ದ ಆರೋಪಿಗಳು, ಬಲೆಗೆ ಬಿದ್ದವರಿಗೆ ಹಣದ ಆಸೆ ಹುಟ್ಟಿಸಿ ಕೊನೆಗೆ ಬ್ಯಾಂಕ್ ನಲ್ಲಿ ಹಣ ಡೆಪಾಸಿಟ್ ಆಗಿದೆ. ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಬೇಕು. ಹಣ ಬಂದ್ರೆ ಶೇ. 30ರಷ್ಟು ಕಮಿಷನ್ ನೀಡಬೇಕು ಎನ್ನುತ್ತಿದ್ದರಂತೆ. ಕೋಟಿ ಆಸೆಗೆ ಬಿದ್ದು ಹಣ ಕಳೆದುಕೊಂಡವರು ಹಲವರಿದ್ದು ಈವರೆಗೂ ಯಾರು ದೂರು ನೀಡಿಲ್ಲ. ಹೀಗಾಗಿ ಆರೋಪಿಗಳಿಂದ ವಂಚನೆಗೊಳಗಾದವರು ಸಿಇಎನ್ ಪೊಲೀಸರಿಗೆ ದೂರು ನೀಡುವಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣೇಶ್ವರ ರಾವ್ ಮನವಿ ಮಾಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.