ನವದೆಹಲಿ : ಆರು ತಿಂಗಳ ಹಿಂದಿನ ಭೀಕರ ಹತ್ಯೆ ಪ್ರಕರಣವನ್ನು ಭೇದಿಸಿರುವ ದೆಹಲಿ ಪೊಲೀಸರು, 26 ವರ್ಷದ ಗೆಳತಿ ಶ್ರದ್ಧಾ ವಾಕರ್‌ನನ್ನು ಕೊಂದ ಆರೋಪದ ಮೇಲೆ ಆಫ್ತಾಬ್ ಅಮೀನ್ ಪೂನಾವಾಲಾನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಆಫ್ತಾಬ್‌ ಭಯಾನಕ ಮಾಹಿತಿಯ ಬಗ್ಗೆ ಬಾಯಿಬಿಚ್ಚಿದ್ದಾನೆ. ಮೇ 18 ರ ರಾತ್ರಿ ನಡೆದ ಸಣ್ಣ ಜಗಳ ಅಮಾಯಕ ಜೀವದ ಹತ್ಯೆಗೆ ಸಾಕ್ಷಿಯಾಗಿತ್ತು. ಪ್ರಕರಣದ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದು ಹೇಗೆ?


ಪಾಲ್ಘರ್ (ಮಹಾರಾಷ್ಟ್ರ) ನಿವಾಸಿಯಾದ ಹುಡುಗಿಯ ತಂದೆ ವಿಕಾಶ್ ಮದನ್ ವಾಕರ್ ನವೆಂಬರ್‌ನಲ್ಲಿ ಪೊಲೀಸರನ್ನು ಸಂಪರ್ಕಿಸಿ ತನ್ನ ಮಗಳು ಕಾಣೆಯಾದ ಬಗ್ಗೆ ದೂರು ನೀಡುತ್ತಾರೆ. ತನಿಖೆಯ ಬಳಿಕ ಆಘಾತಕಾರಿ ಮತ್ತು ಕ್ರೂರ ಕೊಲೆ ಪ್ರಕರಣ ಜೀವ ಪಡೆದುಕೊಂಡಿತು. ಆರಂಭಿಕ ತನಿಖೆಯಲ್ಲಿ, ಸಂತ್ರಸ್ತೆಯ ಕೊನೆಯ ಸ್ಥಳವು ದೆಹಲಿಯಲ್ಲಿ ಪತ್ತೆಯಾಗಿದೆ ಮತ್ತು ಇದರ ಆಧಾರದ ಮೇಲೆ, ಪ್ರಕರಣವನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಲಾಯಿತು.


ಇದನ್ನೂ ಓದಿ: “ಬಿಜೆಪಿ ಬಹುಮತ ಪಡೆದರೆ, ಭೂಪೇಂದ್ರ ಪಟೇಲ್ ಮುಂದಿನ ಮುಖ್ಯಮಂತ್ರಿ”


ಶ್ರದ್ಧಾ ತಂದೆ ತನ್ನ ಮಗಳು ಅಫ್ತಾಬ್ ಜೊತೆಗಿನ ಸಂಬಂಧದ ಬಗ್ಗೆ ಪೊಲೀಸರಿಗೆ ತಿಳಿಸಿದರು. ಪ್ರಕರಣದಲ್ಲಿ ಅವನು ಭಾಗಿಯಾಗಿದ್ದಾನೆ ಎಂದು ಶಂಕಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ, ಅಫ್ತಾಬ್ ಮತ್ತು ಶ್ರದ್ಧಾ ದೆಹಲಿಗೆ ಬಂದು ಛತ್ತರ್‌ಪುರ ಪಹಾಡಿ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ತನಿಖೆ ಚುರುಕುಗೊಳಿಸಿದ ಪೊಲೀಸರು ಅಫ್ತಾಬ್‌ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.


ಆರೋಪಿ ವಿಚಾರಣೆ ವೇಳೆ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಶ್ರದ್ಧಾ ಮದುವೆಗೆ ಒತ್ತಾಯಿಸುತ್ತಿದ್ದರಿಂದ ಆಗಾಗ್ಗೆ ಜಗಳವಾಡುತ್ತಿದ್ದರು ಎಂಬ ಅಂಶವು ತಿಳಿದು ಬಂದಿದೆ. ಅಲ್ಲದೆ, ಮೇ 2022 ರಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿರುವುದಾಗಿ ಪೂನಾವಾಲಾ ಒಪ್ಪಿಕೊಂಡಿದ್ದಾರೆ.


ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಚರ್ಚ್‌ಸ್ಟ್ರೀಟ್‌ನಲ್ಲಿ ಚಿತ್ತಾಕರ್ಷಕ ಕಲಾಕೃತಿ


ಇಬ್ಬರು ಭೇಟಿಯಾಗಿದ್ದು ಹೇಗೆ..?


ಮುಂಬೈನ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿರುವಾಗ ಶ್ರದ್ಧಾ ಮತ್ತು ಅಫ್ತಾಬ್‌ ಪರಿಚಯವಾಗಿತ್ತು. ಇಬ್ಬರು ಮುಂಬೈನಲ್ಲಿ ಡೇಟಿಂಗ್ ಅಪ್ಲಿಕೇಶನ್ ಮೂಲಕ ಒಟ್ಟಿಗೆ ಸೇರಿದರು. ಮೂರು ವರ್ಷಗಳಿಂದ ಲಿವ್ಇನ್ ಸಂಬಂಧದಲ್ಲಿದ್ದರು. ಶ್ರದ್ಧಾ ಅಫ್ತಾಬ್‌ನನ್ನು ಮದುವೆಯಾಗುವಂತೆ ಒತ್ತಡ ಹೇರಲು ಪ್ರಾರಂಭಿಸಿದರು. ಇಬ್ಬರು ಆಗಾಗ್ಗೆ ಜಗಳವಾಡುತ್ತಿದ್ದರು. ಮೇ 18 ರಂದು ನಡೆದ ಜಗಳ ವಿಕೋಪಕ್ಕೆ ತೆರಳಿದೆ. ಕೋಪವನ್ನು ಕಳೆದುಕೊಂಡ ಅಫ್ತಾಬ್‌ ಶ್ರದ್ಧಾ ಅವಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ 18 ದಿನಗಳ ಕಾಲ ಪ್ರಿಡ್ಜ್‌ನಲ್ಲಿ ಇಟ್ಟು ನಂತರ ದಿನವೂ ಛತ್ತರ್‌ಪುರ ಜಂಗಲ್ ಪ್ರದೇಶದಲ್ಲಿ ವಿಲೇವಾರಿ ಮಾಡಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಹೆಚ್ಚುವರಿ ಡಿಸಿಪಿ ಐ ಸೌತ್ ದೆಹಲಿ ಅಂಕಿತ್ ಚೌಹಾಣ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಅಪರಾಧ ನಡೆದಿದ್ದು ಹೇಗೆ..?


ಆರೋಪಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ರೆಫ್ರಿಜರೇಟರ್ ಖರೀದಿಸಿ ಅದರಲ್ಲಿ ಇರಿಸಿದ್ದರು. ನಂತರ ಮುಂದಿನ 18 ದಿನಗಳವರೆಗೆ ರಾತ್ರಿ ಸಮಯದಲ್ಲಿ ದೆಹಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ದೇಹದ ಭಾಗಗಳನ್ನು ವಿಲೇವಾರಿ ಮಾಡಲು ಪ್ರಾರಂಭಿಸಿದ. ಶ್ರದ್ಧಾಳನ್ನು ಕೊಂದ ನಂತರ ಶವವನ್ನು ಕೊಚ್ಚಿದ ಅದೇ ಕೋಣೆಯಲ್ಲಿ ಅಫ್ತಾಬ್ ಪ್ರತಿದಿನ ಮಲಗಿದ್ದನು. ಫ್ರಿಜ್ ನಲ್ಲಿಟ್ಟ ನಂತರ ಆಕೆ ಮುಖವನ್ನು ನೋಡುತ್ತಿದ್ದರು. ಅಫ್ತಾಬ್ ದೇಹದ ಭಾಗಗಳನ್ನು ವಿಲೇವಾರಿ ಮಾಡಿದ ನಂತರ ಫ್ರಿಡ್ಜ್ ಅನ್ನು ಸ್ವಚ್ಛಗೊಳಿಸಿದ್ದರು.


ಇದನ್ನೂ ಓದಿ: CISF Recruitment 2022 : CISF ನಲ್ಲಿ 787 ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಅರ್ಜಿ : ನ. 21 ರಿಂದ ಅರ್ಜಿ ಆರಂಭ!


ಬಲಿಪಶುವಿನ ಕೊಳೆಯುತ್ತಿರುವ ದೇಹದ ವಾಸನೆಯನ್ನು ಮುಚ್ಚಲು ಪೂನಾವಾಲ್ ರೂಮ್ ಫ್ರೆಶ್ನರ್ ಮತ್ತು ಅಗರಬತ್ತಿಗಳನ್ನು ಬಳಸಿದರು. ಶ್ರದ್ಧಾ ಮುಂಚೆಯೇ ಅಫ್ತಾಬ್ ಅನೇಕ ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ. ಅಪರಾಧ ಮಾಡುವ ಮೊದಲು, ಅವರು ಅಮೇರಿಕನ್ ಅಪರಾಧ ನಾಟಕ ಸರಣಿ `ಡೆಕ್ಸ್ಟರ್` ಸೇರಿದಂತೆ ಅನೇಕ ಅಪರಾಧ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ವೀಕ್ಷಿಸಿದರು.


ಕಳೆದ ಎರಡೂವರೆ ತಿಂಗಳಿನಿಂದ ಶ್ರದ್ಧಾಳೊಂದಿಗೆ ಯಾವುದೇ ಸಂಪರ್ಕವಿಲ್ಲ ಮತ್ತು ಆಕೆಯ ಮೊಬೈಲ್ ಸಂಖ್ಯೆಯೂ ಸ್ವಿಚ್ ಆಫ್ ಆಗಿದೆ ಎಂದು ಸಂತ್ರಸ್ತೆಯ ಸ್ನೇಹಿತೆ ಸೆಪ್ಟೆಂಬರ್‌ನಲ್ಲಿ ಆಕೆಯ ಕುಟುಂಬಕ್ಕೆ ತಿಳಿಸಿದ್ದರು. ಆಕೆಯ ಕುಟುಂಬವು ಆಕೆಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದೆ ಮತ್ತು ಈ ಅವಧಿಯಲ್ಲಿ ಯಾವುದೇ ನವೀಕರಣಗಳು ಕಂಡುಬಂದಿಲ್ಲ.


ಅಫ್ತಾಬ್‌ ಮೇಲಿನ ಆರೋಪಗಳೇನು?


"ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 201 (ಅಪರಾಧದ ಸಾಕ್ಷ್ಯಾಧಾರಗಳು ಕಣ್ಮರೆಯಾಗಲು ಕಾರಣ) ಅಡಿಯಲ್ಲಿ ಪ್ರಕರಣವನ್ನು ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯ ಬಾಡಿಗೆ ಫ್ಲಾಟ್‌ನಿಂದ ಕೆಲವು ಮೂಳೆಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ದೇಹದ ಉಳಿದ ಭಾಗಗಳನ್ನು ಹೊರತೆಗೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, 27 ವರ್ಷದ ಶ್ರದ್ಧಾ ವಾಕರ್ ಅವರ ಭೀಕರ ಹತ್ಯೆಯನ್ನು ಕಾಂಗ್ರೆಸ್ ಖಂಡಿಸಿದೆ ಮತ್ತು ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.