ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಚರ್ಚ್‌ಸ್ಟ್ರೀಟ್‌ನಲ್ಲಿ ಚಿತ್ತಾಕರ್ಷಕ ಕಲಾಕೃತಿ

ನಗರದ ಚರ್ಚ್‌ಸ್ಟ್ರೀಟ್‌ನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಚಿತ್ತಾಕರ್ಷಕ ಕಲಾಕೃತಿಯನ್ನು ರೂಪಿಸಲಾಗಿದೆ.

Written by - Manjunath Hosahalli | Edited by - Manjunath N | Last Updated : Nov 14, 2022, 10:19 PM IST
  • ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಸರಕು ಪೂರೈಕೆಯಲ್ಲಿ ಬಳಸಿದರೆ ಬಹುದೊಡ್ಡ ಪ್ರಮಾಣದಲ್ಲಿ ಇಂಗಾಲದ ಮಾಲಿನ್ಯವನ್ನು ತಡೆಗಟ್ಟಬಹುದು.
  • ಕರ್ನಾಟಕದಲ್ಲಿ ಸುಸ್ಥಿರ ಸಾರಿಗೆಗೆ ನಗರ ಭೂಸಾರಿಗೆ ನಿರ್ದೇಶನಾಲಯ ಒತ್ತು ನೀಡುತ್ತಿದೆ.
  • ಬೆಂಗಳೂರು ಮೂವಿಂಗ್ ಅಭಿಯಾನವನ್ನು ಸರ್ಕಾರ ಬೆಂಬಲಿಸುತ್ತದೆ ಎಂದರು.
ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಚರ್ಚ್‌ಸ್ಟ್ರೀಟ್‌ನಲ್ಲಿ ಚಿತ್ತಾಕರ್ಷಕ ಕಲಾಕೃತಿ   title=

ಬೆಂಗಳೂರು: ನಗರದ ಚರ್ಚ್‌ಸ್ಟ್ರೀಟ್‌ನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಚಿತ್ತಾಕರ್ಷಕ ಕಲಾಕೃತಿಯನ್ನು ರೂಪಿಸಲಾಗಿದೆ.

ಗುಜರಿ ಸಾಮಗ್ರಿಗಳಿಗೆ ಹೊಳಪು ನೀಡಿ ಎಲೆಕ್ಟ್ರಿಕ್ ವಾಹನದ ಪ್ರತಿಕೃತಿಯೊಂದನ್ನು ನಿರ್ಮಿಸಲಾಗಿದ್ದು ಇದು ಸೌರಶಕ್ತಿಯ ನೆರವಿನಿಂದ ಕಾರ್ಯನಿರ್ವಹಿಸುತ್ತದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯ ಅಗತ್ಯತೆಯನ್ನು ಈ ಪ್ರತಿಕೃತಿ ತೋರಿಸುತ್ತಿದೆ. ಬೆಂಗಳೂರು ಮೂವಿಂಗ್ ಹೆಸರಿನ ಸಂಸ್ಥೆೆಯೊಂದರ ಇವಿಮೈಡೆಲಿವರಿ ಅಭಿಯಾನದ ಭಾಗವಾಗಿರುವ ಈ ಇಂಟರ್ಯಾಕ್ಟಿವ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನದ ಮಾದರಿ ಕಲೆ ಮತ್ತು ವಿಜ್ಞಾನದ ಸಂಗಮದಂತಿದೆ. ಸರಕು ಸಾಗಾಣಿಕೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯ ಅಗತ್ಯತೆಯನ್ನು ಇದು ಪ್ರತಿಬಿಂಬಿಸುತ್ತದೆ. ವೀಕ್ಷಕರು ಇದನ್ನು ಸ್ಪರ್ಶಿಸಿ ಎಲೆಕ್ಟ್ರಿಕ್ ವಾಹನದ ರಿಯಲ್ ಟೈಮ್ ಅನುಭವ ಪಡೆಯಬಹುದಾಗಿದೆ.

ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಮಾರಾಮಾರಿ! ಮುಂದಾಗಿದ್ದನ್ನು ನೋಡಿದ್ರೆ ಎದ್ದುಬಿದ್ದು ನಗ್ತೀರಾ

ಸಾಮಾಜಿಕ ಅರಿವು ಮೂಡಿಸಲು ಕಲೆಯನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆೆ ಈ ಪ್ರತಿಕೃತಿ ಪ್ರದರ್ಶನ ಉತ್ತಮ ಉದಾಹರಣೆಯಾಗಿದ್ದು, ಮುಂಬೈ ಮೂಲದ ವರ್ಕ್‌ಶಾಪ್ ಕ್ಯೂ ಕಲಾವಿದರಾದ ರಾಧಿಕಾ ಮತ್ತು ಮಾಧವಿ, ಬೆಂಗಳೂರಿನ ರಾಹುಲ್ ಕೆಪಿ ಒಗ್ಗೂಡಿ ಇದನ್ನು ನಿರ್ಮಿಸಿದ್ದಾರೆ. ಆಟೋಗುರು ಮತ್ತು ಬೆಂಗಳೂರು ಡಿಸೈನ್ ವೀಕ್ ಸಂಸ್ಥೆೆಗಳೂ ಅಭಿಯಾನಕ್ಕೆೆ ಕೈಜೋಡಿಸಿವೆ.

ಪ್ರತಿಕೃತಿ ಕುರಿತು ಮಾತನಾಡಿರುವ ಕರ್ನಾಟಕ ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತೆ ವಿ. ಮಂಜುಳಾ, ಇವಿಮೈಡೆಲಿವರಿ ಅಭಿಯಾನ ಮತ್ತು ಇಲ್ಲಿ ಪ್ರದರ್ಶಿಸಲಾದ ಮಾದರಿ ಇ ಕಾಮರ್ಸ್ ಸಂಸ್ಥೆೆಗಳ ಸರಕು ಸಾಗಾಣಿಕೆಯಲ್ಲಿ ಆಗುವ ಮಾಲಿನ್ಯದ ಬಗ್ಗೆೆ ಅರಿವು ಮೂಡಿಸುತ್ತಿದೆ. ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಸರಕು ಪೂರೈಕೆಯಲ್ಲಿ ಬಳಸಿದರೆ ಬಹುದೊಡ್ಡ ಪ್ರಮಾಣದಲ್ಲಿ ಇಂಗಾಲದ ಮಾಲಿನ್ಯವನ್ನು ತಡೆಗಟ್ಟಬಹುದು. ಕರ್ನಾಟಕದಲ್ಲಿ ಸುಸ್ಥಿರ ಸಾರಿಗೆಗೆ ನಗರ ಭೂಸಾರಿಗೆ ನಿರ್ದೇಶನಾಲಯ ಒತ್ತು ನೀಡುತ್ತಿದೆ. ಬೆಂಗಳೂರು ಮೂವಿಂಗ್ ಅಭಿಯಾನವನ್ನು ಸರ್ಕಾರ ಬೆಂಬಲಿಸುತ್ತದೆ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News