ರಿಪೇರಿಗೆ ಬರುತ್ತಿದ್ದ ಬೈಕ್ನಲ್ಲಿ ಮೊಬೈಲ್ ಕಳ್ಳತನ: ಟ್ಯಾಲೆಂಟೆಡ್ ಕಳ್ಳರು ಅಂದರ್!
ಈ ಹಿಂದೆ ಮೊಬೈಲ್ ಕಳ್ಳತನ ಮಾಡಿ ಜೈಲಿಗೆ ಹೋಗಿ ಬಂದಿದ್ದ ಈ ಆರೋಪಿಗಳು ಮತ್ತೆ ಅದೇ ಕೆಲಸಕ್ಕೆ ಇಳಿದಿದ್ದರು.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಮೊಬೈಲ್ ಖದೀಮರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಸಜ್ಜದ್, ಅರುಣ್ ಎಂಬುವವರೇ ಬಂಧಿತ ಆರೋಪಿಗಳು. ಇಬ್ಬರಿಂದ ಬರೋಬ್ಬರಿ 7 ಲಕ್ಷ ರೂ. ಮೌಲ್ಯದ 40 ಮೊಬೈಲ್ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಮಹಿಳೆಗೆ ಕಪಾಳಮೋಕ್ಷ ಪ್ರಕರಣ: ಕ್ಷಮೆಯಾಚಿಸಿದ ಸಚಿವ ಸೋಮಣ್ಣ
ಲಿಂಗರಾಜಪುರಂ ಬಳಿಯ ಗ್ಯಾರೇಜ್‍ವೊಂದರಲ್ಲಿ ಆರೋಪಿಗಳು ಕೆಲಸ ಮಾಡುತ್ತಿದ್ದರು. ಅಲ್ಲಿ ರಿಪೇರಿಗೆ ಬರುತ್ತಿದ್ದ ಗ್ರಾಹಕರ ಬೈಕ್‍ಗಳನ್ನು ಟೆಸ್ಟ್ ಡ್ರೈವ್ ನೆಪದಲ್ಲಿ ಕಳ್ಳತನಕ್ಕೆ ಬಳಸುತ್ತಿದ್ದರು. ಒಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡಿ ಕ್ಷಣಮಾತ್ರದಲ್ಲೇ ಮೊಬೈಲ್ ಕದ್ದು ಎಸ್ಕೇಪ್ ಆಗುತ್ತಿದ್ದರು. ಕೃತ್ಯಕ್ಕೆ ತಮ್ಮ ಬೈಕ್ ಬಳಸಿದರೆ ಸಿಕ್ಕಿ ಬೀಳುತ್ತವೆಂದು ಗ್ಯಾರೇಜ್‍ಗೆ ಬರುತ್ತಿದ್ದ ಬೈಕ್‍ಗಳ ಮೂಲಕ ಆರೋಪಿಗಳು ಮೊಬೈಲ್ ಕಳ್ಳತನ ಮಾಡುತ್ತಿದ್ದರು.
ಇದನ್ನೂ ಓದಿ: ಶ್ರೀಗಳ ಸಾವಿನ ಹಿಂದೆ ಖಾಸಗಿ ವಿಡಿಯೋ ಸಿಡಿ..?
ಈ ಹಿಂದೆ ಮೊಬೈಲ್ ಕಳ್ಳತನ ಮಾಡಿ ಜೈಲಿಗೆ ಹೋಗಿ ಬಂದಿದ್ದ ಈ ಆರೋಪಿಗಳು ಮತ್ತೆ ಅದೇ ಕೆಲಸಕ್ಕೆ ಇಳಿದಿದ್ದರು. ಸೌತ್ ಈಸ್ಟ್ ಭಾಗದದಲ್ಲಿ ಆ್ಯಕ್ಟೀವ್ ಆಗಿದ್ದ ಆರೋಪಿಗಳು ಬೆಳ್ಳಂಬೆಳಗ್ಗೆ, ರಾತ್ರಿ ವೇಳೆ ಮೊಬೈಲ್ ಕಳ್ಳತನಕ್ಕಿಳಿಯುತ್ತಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಬೈಕ್ ಮಾಲೀಕರನ್ನು ವಿಚಾರಿಸಿದಾಗ ಟ್ಯಾಲೆಂಟೆಡ್ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ