ನವದೆಹಲಿ: ದೀಪಾವಳಿ (Diwali) ಶುಭ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಧರ್ಮಗ್ರಂಥಗಳಲ್ಲಿ ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ದೀಪಾವಳಿ ಹಬ್ಬದಂದು ಲಕ್ಷ್ಮಿ ದೇವಿಯ ವಿಶೇಷ ಪೂಜೆ ಮತ್ತು ಉಪಾಸನೆ ಮಾಡಲಾಗುತ್ತದೆ. ಲಕ್ಷ್ಮಿ ಪೂಜೆಯ ವಿಶೇಷ ಪ್ರಾಮುಖ್ಯತೆಯನ್ನು ದೀಪಾವಳಿಯಂದು ತಿಳಿಸಲಾಗಿದೆ. ಪಂಚಾಂಗದ ಪ್ರಕಾರ, ಶುಭ ಸಮಯದಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಬಡತನ ನಿವಾರಣೆಯಾಗುತ್ತದೆ. ಹಣದ ಬಿಕ್ಕಟ್ಟನ್ನು ಕೊನೆಗೊಳಿಸುತ್ತದೆ ಮತ್ತು ಸಾಲದ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-Pushya Nakshatra 2020: ಇಂದು ಪುಷ್ಯ ನಕ್ಷತ್ರದ ಶುಭ ಯೋಗ, ಯಾವ ವಸ್ತು ಖರೀದಿಗೆ ಯಾವುದು ಶುಭ ಮುಹೂರ್ತ


ಹಣವಿಲ್ಲದ ಭೌತಿಕ ಜೀವನ ನಿರಸವಾಗಿ ಕಾಣಿಸುತ್ತದೆ. ಹಣದ ಕೊರತೆಯಿಂದಾಗಿ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಜೀವನದಲ್ಲಿ ಹಣವು ಒಂದು ಪ್ರಮುಖ ಸಾಧನವಾಗಿದೆ. ಆದ್ದರಿಂದ, ಜೀವನದಲ್ಲಿ ಹಣದ ಕೊರತೆ ಇರಬಾರದು. ಹಣದ ಪ್ರಾಮುಖ್ಯತೆಯಿಂದಾಗಿ, ಒಬ್ಬ ವ್ಯಕ್ತಿಯು ಕಷ್ಟಪಟ್ಟು ಕೆಲಸ ಮಾಡುತ್ತಾನೆ. ಆದರೆ ಹಲವು ಬಾರಿ ಕಷ್ಟಪಟ್ಟು ದುಡಿದರೂ ಲಕ್ಷ್ಮಿಯ ಆಶೀರ್ವಾದ ಸಿಗುವುದಿಲ್ಲ. ಒಂದು ವೇಳೆ ಜೀವನದಲ್ಲಿ ಹಣದ ಕೊರತೆ ಇದ್ದಾರೆ ಈ ಬಾರಿ ದೀಪಾವಳಿಯ ಶುಭ ಯೋಗ ಮತ್ತು ಮುಹೂರ್ತಗಳಲ್ಲಿ ಕೆಲವು ಪರಿಹಾರಗಳನ್ನು ಮಾಡಿ. ಇದನ್ನು ಮಾಡುವುದರಿಂದ, ನೀವು ಖಂಡಿತವಾಗಿಯೂ ಲಕ್ಷ್ಮಿಯ ಆಶೀರ್ವಾದ ಪಡೆಯುತ್ತೀರಿ.


ಹೊಸ ಪೊರಕೆ ಖರೀದಿಸಿ ಮನೆಗೆ ತನ್ನಿ
ಮಾರುಕಟ್ಟೆಯಿಂದ ಹೊಸ ಪೊರಕೆಯನ್ನು ಖರೀದಿಸಿ ಮನೆಗೆ ತಂದು ದೀಪಾವಳಿಯ ಶುಭ ಮೂಹುರ್ತದಲ್ಲಿ ಪೂಜೆ ಸಲ್ಲಿಸಿ. ಬಳಿಕ ಹೊಸ ಪೊರಕೆಯಿಂದ ಮನೆಯನ್ನು ಸ್ವಚ್ಛಗೊಳಿಸಿದ್. ಇದರ ನಂತರ, ಪೊರಕೆಯನ್ನು ಯಾರೂ ನೋಡದ ಸ್ಥಳದಲ್ಲಿ ಮರೆಮಾಚಿ. ಕೆಲವೊಮ್ಮೆ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ, ಇದರಿಂದಾಗಿ ಸಮಸ್ಯೆ ಉದ್ಭವಿಸುತ್ತದೆ ಎಂದು ನಂಬಲಾಗಿದೆ. ಈ ಉಪಾಯ ಮಾಡುವುದರಿಂದ ಪೊರಕೆಯ ಮಾಧ್ಯಮದ ಮೂಲಕ ನೀವು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊರಹಾಕಬಹುದು.


ಇದನ್ನು ಓದಿ-ದೀಪಾವಳಿಗೂ ಮುನ್ನ ಈ ಅದ್ಭುತ ಶುಭ ಸಂಯೋಗ ಸೃಷ್ಟಿ, ಶುಭ ಕಾರ್ಯಗಳಲ್ಲಿ ಸಿಗಲಿದೆ ಶನಿ ಕೃಪೆ


ಅರಿಶಿಣದ ಉಪಯೋಗ
ದೀಪಾವಳಿಯ ಲಕ್ಷ್ಮಿ ಪೂಜೆಯ ವೇಳೆ ಒಂದೆರಡು ಅರಿಶಿಣದ ಬೇರನ್ನು ಇಡಿ. ಅರಿಶಿಣ ಬೇರಿಗೆ ಪೂಜೆ ಸಲ್ಲಿಸಿ. ಪೂಜೆಯ ಬಳಿಕ ಈ ಬೇರುಗಳನ್ನು ಧನ ಹಾಗೂ ಆಭರಣಗಳನ್ನು ಇಡುವ ಜಾಗದಲ್ಲಿ ಇರಿಸಿ. ಇದರಿಂದ ಮನೆಯಲ್ಲಿ ಧನವೃದ್ಧಿಯಾಗುತ್ತದೆ.


ಹಳದಿ ಕವಡೆಗಳ ಮಹತ್ವ
ದೀಪಾವಳಿಯ ದಿನ ಹಳದಿ ಕವಡೆಗಳ ಪೂಜೆ ಮನೆಯಲ್ಲಿ ಸುಖ ಹಾಗೂ ಸಮೃದ್ಧಿ ತರುತ್ತದೆ. ಪೂಜೆಯ ವೇಳೆ ಈ ಕವಡೆಗಳನ್ನೂ ಪೂಜಾ ತಟ್ಟೆಯಲ್ಲಿ ಇರಿಸಿ ಹಾಗೂ ಪೂಜೆ ಸಲ್ಲಿಸಿ. ದೇವಿ ಲಕ್ಷ್ಮಿಗೆ ಈ ಕವದೆಗಳು ಪ್ರಿಯ ಎಂದು ಹೇಳಲಾಗುತ್ತದೆ. ಕವಡೆಗಳಿಗೆ ಪೂಜೆ ಸಲ್ಲಿಸುವುದರಿಂದ  ಆರ್ಥಿಕ ಸಮಸ್ಯೆ ದೂರವಾಗುತ್ತದೆ. ನಿಂತುಹೋದ ನಿಮ್ಮ ಹಣ ನಿಮ್ಮ ಬಳಿಗೆ ಮರಳುತ್ತದೆ ಹಾಗೂ ಸಾಲದಿಂದ ಮುಕ್ತಿ ಕೂಡ ಸಿಗುತ್ತದೆ.


ಇದನ್ನು ಓದಿ- ಆಭರಣ ಪ್ರಿಯರಿಗೆ ಬಿಗ್ ಶಾಕ್ : ಹಬ್ಬದ ಹೊತ್ತಲ್ಲಿ ಮತ್ತೆ ಏರಿಕೆ ಕಂಡ ಚಿನ್ನ-ಬೆಳ್ಳಿ ಬೆಲೆ


ಆಂಜನೇಯನಿಗೆ ಆರತಿ ಬೆಳಗಿ
ದೀಪಾವಳಿಯ ದಿನ ಸಾಸಿವೆ ಎಣ್ಣೆಯಿಂದ ದೀಪ ಪ್ರಜ್ವಲಿಸಿ ಹಾಗೂ ಅದರಲ್ಲಿ ಲವಂಗ್ ವನ್ನು ಹಾಕಿ ಶ್ರೀ ಆಂಜನೇಯನಿಗೆ ಆರತಿ ಬೆಳಗಿ. ಹನುಮನಿಗೆ ಆರತಿ ಮಾಡುವುದರಿಂದ ರೋಗ ಹಾಗೂ ಎಲ್ಲ ರೀತಿಯ ಸಂಕಷ್ಟಗಳಿಂದ ಮುಕ್ತಿ ಲಭಿಸುತ್ತದೆ.