ದೀಪಾವಳಿ ಹಬ್ಬಕ್ಕೂ ಮುನ್ನವೇ ಆಭರಣ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್
10 ಗ್ರಾಂ ಚಿನ್ನದ ಬೆಲೆ 48,010 ರೂ.ಗೆ ಏರಿಕೆ
ಶುಕ್ರವಾರ 64,500 ಇದ್ದ ಬೆಳ್ಳಿ ಬೆಲೆ ಇಂದು 65,400ಗೆ ಏರಿಕೆ
ನವದೆಹಲಿ: ದೀಪಾವಳಿ ಹಬ್ಬಕ್ಕೂ ಮುನ್ನವೇ ಆಭರಣ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಚಿನ್ನದ ಬೆಲೆಯಲ್ಲಿ 400 ರೂ. ಏರಿಕೆಯಾಗಿದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ 48,010 ರೂ.ಗೆ ಏರಿಕೆಯಾಗಿದೆ. ಶುಕ್ರವಾರವೂ ಅದೇ ಬೆಲೆಯಿದ್ದು ಗ್ರಾಹಕರಿಗೆ ನಿರಾಸೆ ತಂದಿತ್ತು. ಇಂದಾದರೂ ಚಿನ್ನದ ಬೆಲೆ ಇಳಿಕೆ ಆಗುತ್ತೆ ಅಂತಾ ನಿರೀಕ್ಷೆ ಹೊಂದಿದ್ದ ಆಭರಣ ಪ್ರಿಯರಿಗೆ ಒಮ್ಮೆಲೆ ಬೆಲೆ ಏರಿಕೆಯಾಗಿ ಶಾಕ್ ಆಗಿದೆ.
ದೈನಂದಿನ ಬೆಲೆ ಏರಿಕೆ ಪ್ರಕ್ರಿಯೆಯಲ್ಲಿ ಇಂದು (ಶನಿವಾರ) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ಆಭರಣ ಚಿನ್ನದ (22 ಕ್ಯಾರಟ್) ಬೆಲೆ 48,010 ರೂಪಾಯಿ ನಿಗದಿಯಾಗಿದೆ. ಕಳೆದ ಗುರುವಾರ 350 ರೂ. ಏರಿಕೆಯಾಗಿ 47,610 ರೂ. ತಲುಪಿ ಚಿನ್ನಪ್ರಿಯರಿಗೆ ಶಾಕ್ ನೀಡಿತ್ತು. ನಿನ್ನೆ ಕೂಡ ಬೆಲೆ ಕಡಿಮೆಯೂ ಆಗದೆ 47,610ರಲ್ಲೇ ನಿಂತಿತ್ತು. ಆದರೆ ಇಂದು ಶನಿವಾರ ಒಮ್ಮೆಲೇ 400 ರೂ. ಏರಿಕೆಯಾಗಿ 48,010ರೂ.ಗೆ ತಲುಪಿದೆ.
10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆಯಲ್ಲಿ ಕಳೆದ ಮೂರು ದಿನಗಳಿಂದ ಇಳಿಕೆ ಕಂಡು ಆಭರಣಪ್ರಿಯರಿಗೆ ಸಂತಸ ನೀಡಿತ್ತು. ಗುರುವಾರ ಮತ್ತೆ ಚಿನ್ನದ ಬೆಲೆ ಮತ್ತೆ 51,930ಗೆ ತಲುಪಿತ್ತು. ಆದರೆ ನಿನ್ನೆ ಮತ್ತೆ 10 ರೂಪಾಯಿ ಏರಿಕೆಯಾಗಿ 51,940ಗೆ ನಿಗದಿಯಾಗಿತ್ತು. ಆದರೆ ಇಂದು ಶನಿವಾರ ಒಮ್ಮೆಲೇ 430 ರೂಪಾಯಿ ಏರಿಕೆಯಾಗಿ 52,370ಗೆ ತಲುಪಿದೆ. ಈ ಮೂಲಕ ಚಿನ್ನ ಖರೀದಿಸುವವರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಬೆಳ್ಳಿ ದರ: ಬೆಳ್ಳಿ ಬೆಲೆ ಗುರುವಾರ 300ರೂಪಾಯಿ ಏರಿಕೆಯಾಗಿ 62,000ಗೆ ನಿಗದಿಯಾಗಿತ್ತು. ಆದರೆ ನಿನ್ನೆ ಬರೋಬ್ಬರಿ 2500ರೂಪಾಯಿ ಏರಿಕೆಯಾಗಿ 64,500ಗೆ ತಲುಪಿ ಅಚ್ಚರಿ ಮೂಡಿಸಿತ್ತು. ಇಂದು ಮತ್ತೆ ಶಾಕ್ ಮೇಲೆ ಶಾಕ್ ನೀಡಿದ್ದು, ಶುಕ್ರವಾರ 64,500 ಇದ್ದ ಬೆಳ್ಳಿ ಬೆಲೆ ಇಂದು 65400ಗೆ ಏರಿಕೆಯಾಗಿದೆ. ದೇಶಾದ್ಯಂತ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಆದರೆ, ಕೊಯಂಬತ್ತೂರ್, ಚೆನ್ನೈ ಮತ್ತು ಮಧುರೈನಲ್ಲಿ ಪ್ರತಿ ಕೆಜಿ ಬೆಳ್ಳಿಗೆ 70,000 ರೂಪಾಯಿ ನಿಗದಿಯಾಗಿದೆ. ದೇಶದ ಇತರೆ ಕಡೆಗಳಿಗೆ ಹೋಲಿಸಿದರೆ ಈ ನಗರಗಳಲ್ಲಿ ಬೆಳ್ಳಿ ದರ ಅತೀ ಹೆಚ್ಚು ದಾಖಲಾಗಿದೆ.
ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ದರ ಕೆಲವೆಡೆ ಇಳಿಕೆ ಕಂಡು ಅನೇಕ ಕಡೆಗಳಲ್ಲಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.