ಡಾ.ಪುನೀತ್ ರಾಜಕುಮಾರ್ ಸ್ಮರಣಾರ್ಥ ಲಾಲ್ ಬಾಗ್ ನಲ್ಲಿ ಬೃಹತ್ ಫ್ಲಾವರ್ ಶೋ
ಕನ್ನಡಿಗರ ಕಣ್ಮಣಿ ಡಾ. ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ 9 ತಿಂಗಳಾಯಿತು, ಆದರೂ ಕೂಡ ಕನ್ನಡಿಗರು ಅವರ ಅಗಲಿಕೆಯನ್ನು ಇಂದಿಗೂ ಒಪ್ಪುತ್ತಿಲ್ಲ, ಈಗ ಅವರ ನೆನಪನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಜಗತ್ಪ್ರಸಿದ್ದ ಲಾಲ್ ಬಾಗ್ ನಲ್ಲಿ ಅಗಸ್ಟ್ 5 ರಿಂದ 15 ರವರೆಗೆ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಬೆಂಗಳೂರು: ಕನ್ನಡಿಗರ ಕಣ್ಮಣಿ ಡಾ. ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ 9 ತಿಂಗಳಾಯಿತು, ಆದರೂ ಕೂಡ ಕನ್ನಡಿಗರು ಅವರ ಅಗಲಿಕೆಯನ್ನು ಇಂದಿಗೂ ಒಪ್ಪುತ್ತಿಲ್ಲ, ಈಗ ಅವರ ನೆನಪನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಜಗತ್ಪ್ರಸಿದ್ದ ಲಾಲ್ ಬಾಗ್ ನಲ್ಲಿ ಅಗಸ್ಟ್ 5 ರಿಂದ 15 ರವರೆಗೆ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಇದೆ ಸಂದರ್ಭದಲ್ಲಿ ಡಾ.ರಾಜಕುಮಾರ್ ಅವರಿಗೂ ಕೂಡ ಗೌರವ ಸಮರ್ಪಣೆಯನ್ನು ಮಾಡಲಾಗುವುದು ಎನ್ನಲಾಗಿದೆ.
ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಪುಷ್ಪ ಪ್ರದರ್ಶನವನ್ನು ನಿಷೇಧಿಸಲಾಗಿತ್ತು, ತೋಟಗಾರಿಕೆ ಇಲಾಖೆಯು ಮೈಸೂರು ತೋಟಗಾರಿಕಾ ಸೊಸೈಟಿಯೊಂದಿಗೆ ವರ್ಷದಲ್ಲಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು ಎರಡು ಬಾರಿ ಪುಷ್ಪ ಪ್ರದರ್ಶನವನ್ನು ಆಯೋಜಿಸುತ್ತದೆ.
ಇದನ್ನೂ ಓದಿ : ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ದ ಸಿಎಂಗೆ ದೂರು :ವರ್ಗಾವಣೆಗೆ ಮನವಿ
ಈಗ ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತೋಟಗಾರಿಕಾ ಸಚಿವ ಮುನಿರತ್ನ 'ಈ ಬಾರಿ ಆಗಸ್ಟ್‌ನಲ್ಲಿ ಖಂಡಿತವಾಗಿಯೂ ಫಲಪುಷ್ಪ ಪ್ರದರ್ಶನ ನಡೆಯಲಿದೆ.ಕಳೆದ ಬಾರಿ ಜನವರಿ 26 ರ ರಂದು ಪುನೀತ್ ರಾಜಕುಮಾರ್ ಅವರ ಅವರ ಹೆಸರಿನಲ್ಲಿ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಆಗ ಅದನ್ನು ನಮಗೆ ನಡೆಸಲು ಸಾಧ್ಯವಾಗಲಿಲ್ಲ.ಈಗ ಈ ವಿಚಾರವಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತಿಳಿಸುತ್ತೇವೆ" ಎಂದು ಅವರು ಹೇಳಿದರು.
ಲಾಲ್‌ಬಾಗ್‌ನಲ್ಲಿ ಬೆಳೆಯುವ ಹೂವುಗಳ ಜೊತೆಗೆ ಮೈಸೂರು, ಊಟಿ, ಹೈದರಾಬಾದ್ ಮತ್ತು ದೇಶದ ಇತರ ಭಾಗಗಳಿಂದ ಹೂವುಗಳು ಬಂದಿವೆ ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ : Today Vegetable Price: ಇಂದು ತರಕಾರಿ ಹಾಗೂ ಹಣ್ಣಿನ ಬೆಲೆ ಹೀಗಿದೆ ನೋಡಿ..
ಈ ಬಾರಿ ಪ್ರವೇಶ ಶುಲ್ಕದ ಹೆಚ್ಚಳ ವಿಚಾರವಾಗಿ ಮಾತನಾಡಿದ ಅಧಿಕಾರಿಗಳು 'ಪ್ರವೇಶ ಶುಲ್ಕದ ವಿವರಗಳನ್ನು ನಾವು ಇನ್ನೂ ಅಂತಿಮಗೊಳಿಸಿಲ್ಲ.ಮುಂದಿನ ನಾಲ್ಕೈದು ದಿನಗಳಲ್ಲಿ ಬಹುತೇಕ ನಿರ್ಧಾರವಾಗಲಿದೆ' ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ