ನವದೆಹಲಿ: ಉತ್ತರ ಪ್ರದೇಶದ ಸೌಮಿತ್ರಾ ಗರ್ಗ್ ಜಂಟಿ ಪ್ರವೇಶ ಮುಖ್ಯ ಪರೀಕ್ಷೆ (ಜೆಇಇ) ಶೇ 100 ರಷ್ಟು ಅಂಕ ಗಳಿಸಿದ ಏಕೈಕ ಅಭ್ಯರ್ಥಿಯಾಗಿದ್ದಾರೆ.ಅಷ್ಟೇ ಅಲ್ಲದೆ ಈಗ ಅವರು ದೇಶಾದ್ಯಂತ 100 ರ ಗಡಿ ತಲುಪಿದ 14 ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಅದಾಗ್ಯೂ ಅವರು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವ ಗುರಿಯನ್ನು ಹೊಂದಿದ್ದಾರೆ.
ಇದನ್ನೂ ಓದಿ : Today Vegetable Price: ಇಂದು ತರಕಾರಿ ಹಾಗೂ ಹಣ್ಣಿನ ಬೆಲೆ ಹೀಗಿದೆ ನೋಡಿ..
ಈಗ ಅವರ ಮುಂದಿನ ಗುರಿ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಪಾಸ್ ಮಾಡುವುದಾಗಿದೆ.ಅಚ್ಚರಿ ಎನ್ನುವಂತೆ ಸೌಮಿತ್ರ ಗರ್ಗ್ ಅವರು ಈಗಾಗಲೇ KVPY - IISc Bengaluru ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.ಈಗ ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸೌಮಿತ್ರ ಗಾರ್ಗ್ ಹೆಚ್ಚಿನ ತಯಾರಿ ಇಲ್ಲದೆ ಇಂಜನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಾಗಿ ಹೇಳಿದ್ದಾರೆ.“ನಾನು ಜೆಇಇ ಮುಖ್ಯ ಪರೀಕ್ಷೆ ಮೇಲೆ ಗಮನಹರಿಸಲಿಲ್ಲ. ನಾನು ಕಳೆದ ಎರಡು ವರ್ಷಗಳಿಂದ ಐಐಟಿ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ.ಜೆಇಇ ಮುಖ್ಯ ಮತ್ತು ಅಡ್ವಾನ್ಸ್‌ಡ್‌ನಲ್ಲಿ ವಿಭಿನ್ನವಾಗಿರುವ ಕೆಲವು ಅಧ್ಯಾಯಗಳು ಮಾತ್ರ ಇವೆ' ಎಂದು ಅವರು ಹೇಳಿದರು.
ಇದನ್ನೂ ಓದಿ : ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ದ ಸಿಎಂಗೆ ದೂರು :ವರ್ಗಾವಣೆಗೆ ಮನವಿ
IIT ತರಬೇತಿಗಾಗಿ, ಅವರು ಈಗ ಎರಡು ವರ್ಷಗಳಿಂದ FIITJEE ಮೀರತ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ.ಈಗ JEE ಅಡ್ವಾನ್ಸ್‌ಡ್‌ಗೆ ಸುಮಾರು 1.5 ತಿಂಗಳುಗಳು ಬಾಕಿ ಉಳಿದಿವೆ, ಗರ್ಗ್ ಅವರು IIT ತಯಾರಿಗಾಗಿ ತಮ್ಮ ಸಮಯವನ್ನು ಮೀಸಲಿಡಲು ಬಯಸುತ್ತಾರೆ ಎಂದು ಹೇಳಿದರು.ಅವರು ಯೋಗ, ಕವನ ಮತ್ತು ಸಣ್ಣ ಕಥೆಗಳನ್ನು ಬರೆಯುವುದು ಹಾಗೂ ಕಥೆ ಕಾದಂಬರಿಗಳನ್ನು ಓದುವುದು ಅವರ ಹವ್ಯಾಸಗಳಾಗಿವೆ, ಜೊತೆಗೆ ಅವರಿಗೆ ಕ್ರಿಕೆಟ್ ನೋಡುವ ಅಭ್ಯಾಸವು ಇದೆ. ಸದ್ಯಕ್ಕೆ ತಮ್ಮ ಎಲ್ಲಾ ಅಭ್ಯಾಸಗಳನ್ನು ಅವರು ನಿಲ್ಲಿಸಿದ್ದು, ಕಾಲೇಜಿಗೆ ಪ್ರವೇಶ ಪಡೆದ ನಂತರ ಇವುಗಳನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ