ನವದೆಹಲಿ : ಬಾಲಿವುಡ್‌ನಲ್ಲಿ ಕರೋನಾ (CoronaVirus)ಪ್ರಕರಣಗಳು ನಿರಂತರವಾಗಿ ಹೆಚ್ಚಿತ್ತಿವೆ. ಇದೀಗ ಸೂಪರ್ ಸ್ಟಾರ್ ಅಮೀರ್ ಖಾನ್ ಗೆ  (Aamir Khan) ಕೋವಿಡ್ ಸೋಂಕು ಇರುವುದು ದೃಢ ಪಟ್ಟಿದೆ. ಅಮೀರ್ ಖಾನ್  ಕರೋನಾ ರಿಪೋರ್ಟ್ ಪೋಸಿಟಿವ್ ಬಂದಿದೆ. ಸದ್ಯಕ್ಕೆ ಅಮೀರ್ ಖಾನ್ ಆರಾಮಾಗಿದ್ದು,  ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಪಿಂಕ್ ವಿಲ್ಲಾದಲ್ಲಿ  ಪ್ರಕಟವಾದ ವರದಿಯ ಪ್ರಕಾರ, ಅಮೀರ್ ಖಾನ್  (Aamir Khan) ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಸದ್ಯಕ್ಕೆ ಅವರು ತಮ್ಮ ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ (Quarantine). ಮೂಲಗಳ ಪ್ರಕಾರ, ಅವರು ತಮ್ಮ ಸ್ಟಾಫ್ ಗಳಿಗೆ ಕೂಡಾ  ಕೊವಿಡ್ (COVID_19) ಪರೀಕ್ಷೆಗೆ ಒಳಪಡುವಂತೆ ಸೂಚಿಸಿದ್ದಾರೆ. ಅಲ್ಲದೆ ಎಲ್ಲರು ಐಸೋಲೆಶನ್ ನಲ್ಲಿರುವವಂತೆ (isolation) ಸಿಬ್ಬಂದಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.  ಮಾತ್ರವಲ್ಲ, ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿಕೊಳ್ಳುವಂತೆ ಮತ್ತು ಮಾರ್ಗ ಸೂಚಿಗಳನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ. 


ಇದನ್ನೂ ಓದಿ : ಹಣ್ಣು ಖರೀದಿ ವೇಳೆ Farah Khan ಮಾಡಿರುವ ಎಡವಟ್ಟು ; ವೈರಲ್ ಆಗುತ್ತಿದೆ ವಿಡಿಯೋ


ಈ ಮಧ್ಯೆ, ಅಮೀರ್ ಖಾನ್ ತಮ್ಮ ಸೋಶಿಯಲ್ ಮೀಡಿಯಾ (Social media) ಅಕೌಂಟ್ ನಲ್ಲಿ ಒಂದು ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ.  ನನ್ನ ಜನ್ಮದಿನದಂದು ತೋರಿಸಿರುವ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ.  ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಇದು ನನ್ನ ಕೊನೆಯ ಪೋಸ್ಟ್ ಎಂದು ಕೂಡಾ ಹೇಳಿದ್ದಾರೆ.  ನಾನು ಬಹಳ ಸಕ್ರಿಯನಾಗಿದ್ದೇನೆ ಎಂದು ಪ್ರದರ್ಶಿಸುವುದನ್ನು ನಿಲ್ಲಿಸಬೇಕು ಎಂದು ನಿರ್ಧರಿಸಿದ್ದೇನೆ. ನಾವು ಮೊದಲಿನಂತೆ ಮಾತನಾಡೋಣ ಎಂದು ಹೇಳಿದ್ದಾರೆ. AKP ತನ್ನ ಅಧಿಕೃತ ಚಾನೆಲ್ ಅನ್ನು ಕ್ರಿಯೇಟ್ ಮಾಡಿದೆ. ಭವಿಷ್ಯದಲ್ಲಿ, ನನ್ನ ಮತ್ತು ನನ್ನ ಚಿತ್ರಗಳಿಗೆ ಸಂಬಂಧಪಟ್ಟ ಅಪ್ಡೇಟ್  ಗಳನ್ನ (Update) ಅಲ್ಲಿಯೇ ಪಡೆದುಕೊಳ್ಳಬಹುದು ಎಂದಿದ್ದಾರೆ.  
ಅವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ


 ಅಮೀರ್ ಖಾನ್ ಇತ್ತೀಚೆಗೆ 'ಕೊಯಿ ಜಾನೆ ನಾ' ಚಿತ್ರದ  ಹಾಡಿನಲ್ಲಿ ಕಾಣಿಸಿಕೊಂಡಿದ್ದರು.  ಇನ್ನು ಅಮೀರ್ ಅಭಿನಯದ  'ಲಾಲ್ ಸಿಂಗ್ ಚಡ್ಡಾ'  (Lal Singh Chaddha) ಕೂಡ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅಮೀರ್ ಖಾನ್ ಜೊತೆ ಕರೀನಾ ಕಪೂರ್ (Kareena Kapoor) ಮುಖ್ಯ ಪಾತ್ರದಲ್ಲಿದ್ದಾರೆ.


ಇದನ್ನೂ ಓದಿ Kareena Kapoor: ಎರಡನೇ ಮಗುವಿಗೆ ಜನ್ಮ ನೀಡಿ ತಿಂಗಳಲ್ಲೇ ಕೆಲಸಕ್ಕೆ ಹಾಜರಾದ ಬೆಬೋ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.