ಹಣ್ಣು ಖರೀದಿ ವೇಳೆ Farah Khan ಮಾಡಿರುವ ಎಡವಟ್ಟು ; ವೈರಲ್ ಆಗುತ್ತಿದೆ ವಿಡಿಯೋ

ಇತ್ತೀಚೆಗೆ, ಬಾಲಿವುಡ್‌ -ನಿರ್ದೇಶಕಿ  ಮಾವಿನ ಹಣ್ಣು ಖರೀದಿಯಲ್ಲಿ ತೊಡಗಿದ್ದರು. ಈಗ ಆ ವಿಡಿಯೋ ವೈರಲ್ ಆಗುತ್ತಿದೆ.   

Written by - Ranjitha R K | Last Updated : Mar 24, 2021, 10:12 AM IST
  • ಕೆಲವರಿಗೆ ಹಣ್ಣು ಖರೀದಿ ವೇಳೆ ಅದರ ಪರಿಮಳವನ್ನು ಮೂಸಿ ನೋಡುವ ಅಭ್ಯಾಸವಿರುತ್ತದೆ.
  • Farah Khan ಮಾವಿನ ಹಣ್ಣು ಖರೀದಿಯಲ್ಲಿ ತೊಡಗಿದ್ದ ವಿಡಿಯೋ ವೈರಲ್
  • ಖರೀದಿ ವೇಳೆ, ಹಣ್ಣನ್ನು ಮೂಸಿ ನೋಡುತ್ತಿರುವ Farah Khan
ಹಣ್ಣು ಖರೀದಿ ವೇಳೆ Farah Khan ಮಾಡಿರುವ ಎಡವಟ್ಟು ; ವೈರಲ್ ಆಗುತ್ತಿದೆ ವಿಡಿಯೋ title=
Farah Khan ಮಾವಿನ ಹಣ್ಣು ಖರೀದಿಯಲ್ಲಿ ತೊಡಗಿದ್ದ ವಿಡಿಯೋ ವೈರಲ್ (photo instagram)

ನವದೆಹಲಿ: ಬೇಸಿಗೆ ಬಂದರೆ ಸಾಕು ಮಾರುಕಟ್ಟೆ ತುಂಬಾ ಮಾವಿನ ಹಣ್ಣಿನ (Mango) ಘಮ.  ಹಣ್ಣುಗಳ ರಾಜ ಮಾವಿನ ಹಣ್ಣನ್ನು   ಇಷ್ಟಪಡದೆ ಇರುವವರು ಬಹಳ ಕಡಿಮೆ. ಕೆಲವರಿಗೆ ಹಣ್ಣು ಖರೀದಿ ವೇಳೆ ಅದರ ಪರಿಮಳವನ್ನು ಮುಸಿ ನೋಡುವ ಅಭ್ಯಾಸವಿರುತ್ತದೆ.  ನಿಮಗೂ ಆ ಅಭ್ಯಾಸವಿದ್ದರೆ ಹುಷಾರು. ನಿಮ್ಮ ಅಭ್ಯಾಸದ ಮೇಲೆ ನಿಯಂತ್ರಣವಿರಲಿ. ಯಾಕಂದರೆ ಈ ವರ್ಷದ ಬೇಸಿಗೆ ಪ್ರತಿ ವರ್ಷದಂತಲ್ಲ.  ದೇಶದಲ್ಲಿ ಕರೋನಾ (Coronavirus) ಪ್ರಕರಣಗಳು ಹೆಚ್ಚುತ್ತಿವೆ.  ಇತ್ತೀಚೆಗೆ, ಬಾಲಿವುಡ್‌ -ನಿರ್ದೇಶಕಿ Farah Khan ಮಾವಿನ ಹಣ್ಣು ಖರೀದಿಯಲ್ಲಿ ತೊಡಗಿದ್ದರು. ಈಗ ಆ ವಿಡಿಯೋ ವೈರಲ್ (Viral vedio) ಆಗುತ್ತಿದೆ. ಅದು ಯಾಕೆ ಆನ್ನೋದನ್ನು ತಿಳಿಯಬೇಕಾದರೆ ಈ ಸುದ್ದಿ ಓದಿ ..

ಮಾವಿನ ಹಣ್ಣು ಖರೀದಿ ವೇಳೆ ಹಣ್ಣನ್ನು ಮೂಸಿ ನೋಡಿದ  Farah Khan : 
ಸಾಮಾನ್ಯವಾಗಿ ಜನರು ಸೆಲೆಬ್ರಿಟಿಗಳನ್ನು ಎಲ್ಲಾ ವಿಷಯದಲ್ಲೂ ಅನುಸರಿಸುತ್ತಾರೆ. Celebrity Photographer Viral Bhayani ಬಾಲಿವುಡ್‌ನ ನಿರ್ದೇಶಕಿ  Farah Khan ಅವರ ವೀಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ (Social media) ಶೇರ್ ಮಾಡಿದೆ. ಈ ವೀಡಿಯೊದಲ್ಲಿ ಫರಾ ಮಾವಿನಹಣ್ಣನ್ನು (Mango) ಖರೀದಿಸುತ್ತಿರುವುದು ಕಂಡುಬರುತ್ತದೆ. ಇಲ್ಲಿ ಅವರು ಮಾವಿನಹಣ್ಣು ಖರೀದಿ ವೇಳೆ, ಹಣ್ಣನ್ನು ಮೂಸಿ ನೋಡುವ ದೃಶ್ಯ ಕಂಡು ಬರುತ್ತದೆ. ಈ ವಿಡಿಯೋವನ್ನು ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Viral Bhayani (@viralbhayani)

 

ಇದನ್ನೂ ಓದಿ : Kareena Kapoor: ಎರಡನೇ ಮಗುವಿಗೆ ಜನ್ಮ ನೀಡಿ ತಿಂಗಳಲ್ಲೇ ಕೆಲಸಕ್ಕೆ ಹಾಜರಾದ ಬೆಬೋ

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮಾವಿನ ಹಣ್ಣು :
ಬೇಸಿಗೆಯಲ್ಲಿ, ಪ್ರತಿಯೊಬ್ಬರೂ ಮಾವಿನ ಹಣ್ಣನ್ನು ಸೇವಿಸುತ್ತಾರೆ. ಮಾರುಕಟ್ಟೆಯಲ್ಲಿ (Market) ವಿವಿಧ ತಳಿಯ ಮಾವಿನ ಹಣ್ಣು ಬಂದಿದೆ. ಕರೋನಾ ಇದೆ ಅಂತ ಮಾವಿನಹಣ್ಣು ತಿನ್ನುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಹಣ್ಣು ಖರೀದಿ ವೇಳೆ ಎಚ್ಚರವಿರಲಿ.   ವಾರಣಾಸಿಯಲ್ಲಿ (varanasi) ಮಾವಿನಹಣ್ಣು ಮಾರುವವನಿಂದಾಗಿ  ಮೂವರು ಕರೋನಾ (Coronavirus) ಪಾಸಿಟಿವ್ ಆಗಿದ್ದರು. ಹಾಗಾಗಿ ಹಣ್ಣು ತರಕಾರಿ ಖರೀದಿ ವೇಳೆ ಮಾಸ್ಕ್  ತೆಗೆಯೇಬೇಡಿ. 

ಇದನ್ನೂ ಓದಿ : 67th National Film Awards: ನಾಲ್ಕನೇ ಬಾರಿಗೆ 'ರಾಷ್ಟ್ರ ಪ್ರಶಸ್ತಿ' ಮುಡಿಗೇರಿಸಿಕೊಂಡ ಕಂಗನಾ​ ರನೌತ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News