ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಗೆ ಕರೋನಾ ದೃಢ

ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.   

Written by - Ranjitha R K | Last Updated : Mar 22, 2021, 02:10 PM IST
  • ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಗೆ ಕರೋನಾ ವೈರಸ್
  • ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ತಿರಥ್ ​​ಸಿಂಗ್ ರಾವತ್
  • ಐಸೋಲೆಶನ್ ನಲ್ಲಿರುವ ಉತ್ತರಾಖಂಡ ಮುಖ್ಯಮಂತ್ರಿ
ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಗೆ ಕರೋನಾ ದೃಢ  title=
ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಗೆ ಕರೋನಾ (filephoto)

ಡೆಹ್ರಾಡೂನ್: ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ (Tirat Singh Rawat) ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.  ಸಿಎಂ ತಿರಥ್ ಸಿಂಗ್ ರಾವತ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಈ ಮಾಹಿತಿಯನ್ನು ನೀಡಿದ್ದಾರೆ.

ನನ್ನ ಕರೋನಾ (Coronavirus) ಪರೀಕ್ಷಾ ವರದಿ ಪೋಸಿಟಿವ್ ಬಂದಿದೆ  ಎಂದು ಸಿಎಂ ತಿರಥ್  ಸಿಂಗ್ ರಾವತ್ (Tirat Singh Rawat) ಟ್ವೀಟ್ ಮಾಡಿದ್ದಾರೆ. ನಾನು ಆರಾಮಾಗಿದ್ದು, ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ವೈದ್ಯರ ಮೇಲ್ವಿಚಾರಣೆಯಲ್ಲಿ ಐಸೋಲೆಶನ್ (Isolation) ಮಾಡಿಕೊಂಡಿರುವುದಾಗಿ  ಅವರು ಹೇಳಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದವರು ಕಾಳಜಿ ವಹಿಸಿಕೊಳ್ಳುವಂತೆ  ತಿರಥ್  ಸಿಂಗ್ ಮನವಿ ಮಾಡಿದ್ದಾರೆ. ಅಲ್ಲದೆ ಪರೀಕ್ಷೆಗೆ ಒಳಪಡುವಂತೆ ಸಲಹೆ ನೀಡಿದ್ದಾರೆ. 

ಇದನ್ನೂ ಓದಿ :  7th Pay Commission: ಕೇಂದ್ರ ನೌಕರರಿಗೆ ಸಿಹಿ ಸುದ್ದಿ:‌ ಹೋಳಿ ಹಬ್ಬಕ್ಕೂ ಮುನ್ನ ಸಿಗಲಿದೆ ಮುಂಗಡ ಹಣ!

ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಅವರು ಮಾರ್ಚ್ 25 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi)  ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ  ತಿರಥ್  ಸಿಂಗ್ ರಾವತ್ ಅವರ ಸಭೆ ನಿಗದಿಯಾಗಿತ್ತು. ಆದರೆ ಅದಕ್ಕೂ ಮೊದಲೇ,  ತಿರಥ್  ಸಿಂಗ್ ಗೆ COVID-19 ಇರುವುದು ದೃಢ ಪಟ್ಟಿದೆ. 

ತಿರಥ್ ​​ಸಿಂಗ್ ರಾವತ್ ಇತ್ತೀಚೆಗಷ್ಟೇ  ಉತ್ತರಾಖಂಡದ (Uttarakhand) ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿಎಂ ಆದ ನಂತರ ತಮ್ಮ ಹೇಳಿಕೆಗಳಿಂದ ವಿವಾದಕ್ಕೆ ಸಿಲುಕಿದ್ದರು. ಹರಿದ ಜೀನ್ಸ್ (Jeans) ಬಗ್ಗೆ ಅವರು ನೀಡಿರುವ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. 

ಇದನ್ನೂ ಓದಿ :  West Bengal Election 2021: 'ನಾನೋರ್ವ ವ್ಯಾಪಾರಿ, ನನ್ನನ್ನು ನಂಬಿ' ಎಂದು Amit Shah ಹೇಳಿದ್ದೇಕೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News