Actor Nagarjuna sister death : ಅಕ್ಕಿನೇನಿ ಕುಟುಂಬದಲ್ಲಿ ದೊಡ್ಡ ದುರಂತ ಸಂಭವಿಸಿದೆ. ದಿವಂಗತ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪುತ್ರಿ ಹಾಗೂ ಹಿರಿಯ ನಾಯಕ ನಾಗಾರ್ಜುನ ಅವರ ಸಹೋದರಿ ನಾಗ ಸರೋಜಾ ಅವರು ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜಾ ಅವರು ಮಂಗಳವಾರ ಕೊನೆಯುಸಿರೆಳೆದಿದ್ದಾಳೆ.


COMMERCIAL BREAK
SCROLL TO CONTINUE READING

ಅಕ್ಕಿನೇನಿ ನಾಗೇಶ್ವರ ರಾವ್ - ಅನ್ನಪೂರ್ಣಮ್ಮ ದಂಪತಿಗೆ ನಾಗ ಸತ್ಯವತಿ, ನಾಗ ಸುಶೀಲ, ನಾಗ ಸರೋಜಾ, ವೆಂಕಟ್, ನಾಗಾರ್ಜುನ ಎಂಬ ಐವರು ಮಕ್ಕಳಿದ್ದರು. ಅವರಲ್ಲಿ ಸುಮಂತ್ ಮತ್ತು ಸುಪ್ರಿಯಾ ಅವರ ತಾಯಿ ಸತ್ಯವತಿ ಹಲವು ವರ್ಷಗಳ ಹಿಂದೆ ನಿಧನರಾದರು. ಇದೀಗ ನಾಗ ಸರೋಜಾ ಸಾವಿನ ಸುದ್ದಿ ಹೊರಬಿದ್ದಿದೆ.


ಇದನ್ನೂ ಓದಿ: ಪ್ರಿಯಾಂಕಾ ನಟನೆಯ 'ಕ್ಯಾಪ್ಚರ್' ಚಿತ್ರದ ಟೈಟಲ್ ಪೋಸ್ಟರ್ ವಿಭಿನ್ನವಾಗಿ ಲಾಂಚ್


ತೆಲುಗು ಚಿತ್ರರಂಗದಲ್ಲಿ ಅಕ್ಕಿನೇನಿ ಕುಟುಂಬಕ್ಕೆ ವಿಶಿಷ್ಟ ಸ್ಥಾನವಿದೆ. ಮೂರು ತಲೆಮಾರಿನವರು ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ನಾಗೇಶ್ವರ ರಾವ್ ಅವರ ನಟನಾ ಪರಂಪರೆಯನ್ನು ಅವರ ಕಿರಿಯ ಮಗ ನಾಗಾರ್ಜುನ ಮುಂದುವರಿಸಿದ್ದಾರೆ. ಮೊಮ್ಮಕ್ಕಳಾದ ಸುಮಂತ್, ನಾಗ ಚೈತನ್ಯ, ಅಖಿಲ್ ಮತ್ತು ಸುಶಾಂತ್ ಆ ಪರಂಪರೆಯನ್ನು ಮುಂದಕ್ಕೆ ಸಾಗಿಸಲು ಪ್ರಯತ್ನಿಸುತ್ತಿದ್ದಾರೆ.


ವೆಂಕಟ್ ಮತ್ತು ನಾಗ ಸುಶೀಲ ಸಿನಿಮಾಗಳನ್ನು ನಿರ್ಮಿಸುತ್ತಿದ್ದರೆ, ಸದ್ಯ ಅನ್ನಪೂರ್ಣ ಸ್ಟುಡಿಯೋಸ್ ಜವಾಬ್ದಾರಿಯನ್ನು ಸುಪ್ರಿಯಾ ನೋಡಿಕೊಳ್ಳುತ್ತಿದ್ದಾರೆ. ಕುಟುಂಬದ ಬಹುತೇಕರು ಚಿತ್ರರಂಗದಲ್ಲಿದ್ದರೂ ನಾಗ ಸರೋಜಾ ಮೊದಲಿನಿಂದಲೂ ಇಂಡಸ್ಟ್ರಿಯಿಂದ ದೂರವೇ ಉಳಿದಿದ್ದಾರೆ. ಅಕ್ಕಿನೇನಿ ಹೀರೋಗಳ ಸಿನಿಮಾ ಮತ್ತು ಇತರ ಸಂಭ್ರಮಾಚರಣೆಗಳಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. 


ಇದನ್ನೂ ಓದಿ: ಕಠೋರ ಶಪಥ ಮಾಡಿದ ತುಕಾಲಿ..! ಸದ್ಯ ಮನೆಯೊಳಗೆ ಸಂತೋಷ್ ಪರಿಸ್ಥಿತಿ ಏನಾಯ್ತು?


ಇಷ್ಟು ದೊಡ್ಡ ಸಿನಿಮಾ ಕುಟುಂಬಕ್ಕೆ ಸೇರಿದವರಾದರೂ ನಾಗ ಸರೋಜಾ ಅವರು ತುಂಬಾ ಸರಳ ಜೀವನ ನಡೆಸುತ್ತಿದ್ದರು. ಆದ್ದರಿಂದಲೇ ಯಾರಿಗೂ ಅವರ ಬಗ್ಗೆ ಹೆಚ್ಚು ತಿಳಿದಿಲ್ಲ. ಇವರ ಸಾವಿನ ಸುದ್ದಿಯೂ ತಡವಾಗಿ ಹೊರಬಿದ್ದಿದೆ. ಸಧ್ಯ ನಾಗ ಸರೋಜಾ ಸಾವಿನಿಂದ ಅಕ್ಕಿನೇನಿ ಕುಟುಂಬದಲ್ಲಿ ದುಃಖದ ಛಾಯೆ ಆವರಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.