BBK10: ಕಠೋರ ಶಪಥ ಮಾಡಿದ ತುಕಾಲಿ..! ಸದ್ಯ ಮನೆಯೊಳಗೆ ಸಂತೋಷ್ ಪರಿಸ್ಥಿತಿ ಏನಾಯ್ತು?

Tuka Santhu Situation in BBK: ‘ಬಿಗ್‌ಬಾಸ್‌ ಮನೆಯೊಳಗಿನ ಹೆಣ್ಣುಮಕ್ಕಳಿಗೆ ಅಣ್ಣ ಆಗುವ ಬದಲಿಗೆ ವಾರಪೂರ್ತಿ ಪಾತ್ರೆ ತೊಳಿತೀನಿ’ ಎಂದು ತಮಾಷೆಯಾಗಿ ಹೇಳಿದ್ದ ತುಕಾಲಿ ಸಂತೋಷ್ ಅವರ ಮಾತನ್ನು ಸುದೀಪ್ ನಿಜವಾಗಿಸಿಬಿಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ನಂತರ ಮನೆಯೊಳಗೆ ಸಂತೋಷ್ ಪರಿಸ್ಥಿತಿ ಏನಾಯ್ತು? ಪಾತ್ರೆಗಳನ್ನು ಅವರೊಬ್ಬರೇ ತೊಳೆದ್ರಾ? ಅಥವಾ ಸೋತುಹೋದ್ರಾ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ...  

Written by - Savita M B | Last Updated : Oct 17, 2023, 09:50 PM IST
  • ಬಿಗ್‌ಬಾಸ್‌ ಮನೆಯೊಳಗಿನ ಹೆಣ್ಣುಮಕ್ಕಳಿಗೆ ಅಣ್ಣ ಆಗುವ ಬದಲಿಗೆ ವಾರಪೂರ್ತಿ ಪಾತ್ರೆ ತೊಳಿತೀನಿ
  • ಮನೆಯೊಳಗೆ ಸಂತೋಷ್ ಪರಿಸ್ಥಿತಿ ಏನಾಯ್ತು?
  • ಪಾತ್ರೆಗಳನ್ನು ಅವರೊಬ್ಬರೇ ತೊಳೆದ್ರಾ?
BBK10: ಕಠೋರ ಶಪಥ ಮಾಡಿದ ತುಕಾಲಿ..! ಸದ್ಯ ಮನೆಯೊಳಗೆ ಸಂತೋಷ್ ಪರಿಸ್ಥಿತಿ ಏನಾಯ್ತು? title=

BiggBossKannada: ಮನೆಯೊಳಗಿದ್ದಾಗ ತುಕಾಲಿ ಸಂತೋಷ್‌ಗೆ ಎದುರಾದ ಈ ಪರಿಸ್ಥಿತಿಯ ಬಗ್ಗೆ ನಮ್ರತಾ, ಸ್ನೇಹಿತ್ ಅವರು ತುಕಾಲಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಆಗ ಹೆಣ್ಣುಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಅಣ್ಣನಾಗುವ ಮಾತು ಬಂದಿದೆ. ಅದಕ್ಕೆ ಸಂತೋಷ್‌ ರೊಚ್ಚಿಗೆದ್ದು ನೇರವಾಗಿ ಬಿಗ್‌ಬಾಸ್‌ಗೇ ಸವಾಲುಹಾಕಿದ್ದಾರೆ!

ಮೊದ ಮೊದಲು ಪಾತ್ರೆಗಳ ರಾಶಿ ನೋಡಿದಾಗ, ’ಅಯ್ಯೋ ಈ ಹುಡುಗಿಯರ ಸಹವಾಸವೂ ಬೇಡ. ಈ ಪಾತ್ರೆ ತೊಳೆಯುವುದೂ ಬೇಡ’ ಅನ್ನಿಸಿಬಿಟ್ಟಿತ್ತಂತೆ. ಆದರೆ ಎರಡು ಮೂರು ಸಲ ತೊಳೆದು ರೂಢಿ ಆದಮೇಲೆ ಅವರಿಗೆ ಮತ್ತೆ ಛಲ ಉಕ್ಕಿದೆ. ನಾನು ಎಂದಿಗೂ ಈ ಮನೆಯೊಳಗಿನ ಹೆಣ್ಮಕ್ಳಿಗೆ ಅಣ್ಣನಾಗಲಾರೆ ಎಂದು ಅವರು ನಿರ್ಧರಿಸಿಬಿಟ್ಟಿದ್ದಾರೆ.

ಇದನ್ನೂ ಓದಿ-13 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್!

ಸ್ವಿಮ್ಮಿಂಗ್ ಫೂಲ್‌ ಬಳಿ ನಿಂತಿದ್ದಾಗ ನಮ್ರತಾ, ‘ಅಣ್ಣನಾಗಬೇಕಾಗತ್ತೆ ಎಂಬ ಕಾರಣಕ್ಕೆ ಇರೋ ಬರೋ ಪಾತ್ರೆಯೆಲ್ಲ ತೊಳಿತಿದ್ದೀರಲ್ಲಾ ನೀವು’ ಎಂದು ತುಕಾಲಿ ಅವರ ಕಾಲೆಳೆದಿದ್ದಾರೆ. ಸ್ನೇಹಿತ್, ‘ರಾಖಿ ತರಿಸಿಕೊಡ್ತೀನಿ ಬನ್ನಿ’ ಎಂದು ತಮಾಷೆ ಮಾಡಿದ್ದಾರೆ.  

ಇದನ್ನೂ ಓದಿ-BBK10: ಮನೆಮಂದಿ ಕಣ್ಣಲ್ಲಿ ನೀರು ತರಿಸಿದ ‘ಅಕ್ಕ’..! ಅಕ್ಕರೆಗೆ ಕರಗಿದ ಕಾರ್ತಿಕ್‌ ಸಿರಿಗೆ ಹೇಳಿದ್ದೇನು..? 

ನೇರವಾಗಿ ಕ್ಯಾಮೆರಾ ಎದುರಿಗೆ ಬಂದು ನಿಂತ ತುಕಾಲಿ ಅವರು, ‘ನಾನ್ಯಾಕೆ ರಾಖಿ ಕಟ್ಟಿಸ್ಕೋಬೇಕು? ಇನ್ನೂ ಬೇಕಾದ್ರೆ ಬಿಗ್‌ಬಾಸ್‌ ಮನೆಯೊಳಗೆ ಇರೋವರೆಗೂ ಪಾತ್ರೆ ತೊಳಿತೀನಿ ಬೇಕಾದ್ರೆ… ಆದ್ರೆ ರಾಖಿ ಮಾತ್ರ ಕಟ್ಟಿಸ್ಕೊಳ್ಳಲ್ಲ… ನಾನು ಎಲ್ಲಿಯವರೆಗೂ ಬಿಗ್‌ಬಾಸ್‌ ಮನೆಯೊಳಗೆ ಇರ್ತಿನೋ ಅಲ್ಲಿಯವರೆಗೂ ಇರೋವರೆಗೂ ಬ್ಯಾಚುಲರ್‍ರೇ!!’ ಎಂದು ಶಪಥ ಮಾಡಿದ್ದಾರೆ. 

ಅವರ ಶಪಥವನ್ನು ಕೇಳಿದ ಸ್ನೇಹಿತ್‌, ತುಕಾಲಿ ಅವರ ಹೆಂಡತಿಗೆ ಅಲ್ಲಿಂದಲೇ ‘ಚಿನ್ನಿ ಅವರೇ, ಈ ಎಲ್ಲ ಮಾತು ಕೇಳಿಸಿಕೊಂಡಮೇಲೆ ನೀವೇ ಏನಾದ್ರೂ ಮಾಡಬೇಕು. ಮೇನ್‌ಡೋರ್‍‌ನಿಂದ ಬಂದು ಏನಾದ್ರೂ ಮಾಡಿ’ ಎಂದು ವಿನಂತಿಸಿಕೊಂಡಿದ್ದಾರೆ.

https://jiocinema.onelink.me/fRhd/3qeqczco 
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News