Taraka Ratna : ಎನ್‌ಟಿಆರ್ ಅಣ್ಣ ತಾರಕರತ್ನ ಅವರ ಸಾವಿಗೆ ಕಾರಣ ಏನ್ ಗೊತ್ತಾ..?
ನಟ-ರಾಜಕಾರಣಿ, ಎನ್‌ಟಿ ರಾಮರಾವ್ ಅವರ ಮೊಮ್ಮಗ ನಂದಮೂರಿ ತಾರಕ ರತ್ನ ಅವರು ತಮ್ಮ 39 ನೇ ವಯಸ್ಸಿನಲ್ಲಿ ಶನಿವಾರ ನಿಧನರಾದರು. ಅವರ ಹಠಾತ್ ನಿಧನ ಅವರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿತ್ತು. ಕೆಸಿಆರ್, ಎನ್ ಚಂದ್ರಬಾಬು ನಾಯ್ಡು, ವೈಎಸ್ ಜಗನ್ ಮೋಹನ್ ರೆಡ್ಡಿ, ಕರ್ನಾಟಕ ಆರೋಗ್ಯ ಸಚಿವ ಡಾ ಸುಧಾಕರ್ ಕೆ ಸೇರಿದಂತೆ ಹಲವಾರು ಟಾಲಿವುಡ್ ಸೆಲೆಬ್ರಿಟಿಗಳು ಮತ್ತು ರಾಜಕೀಯ ವ್ಯಕ್ತಿಗಳು, ಶಿವರಾಜಕುಮಾರ್, ಅಲ್ಲು ಅರ್ಜುನ್ ಮತ್ತು ಚಿರಂಜೀವಿ ಕೊನಿಡೇಲಾ ಸೇರಿದಂತೆ ಇತರೆ ನಟರು ಸಂತಾಪ ಸೂಚಿಸಿದ್ದಾರೆ.
Taraka Ratna : ನಟ-ರಾಜಕಾರಣಿ, ಎನ್‌ಟಿ ರಾಮರಾವ್ ಅವರ ಮೊಮ್ಮಗ ನಂದಮೂರಿ ತಾರಕ ರತ್ನ ಅವರು ತಮ್ಮ 39 ನೇ ವಯಸ್ಸಿನಲ್ಲಿ ಶನಿವಾರ ನಿಧನರಾದರು. ಅವರ ಹಠಾತ್ ನಿಧನ ಅವರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿತ್ತು. ಕೆಸಿಆರ್, ಎನ್ ಚಂದ್ರಬಾಬು ನಾಯ್ಡು, ವೈಎಸ್ ಜಗನ್ ಮೋಹನ್ ರೆಡ್ಡಿ, ಕರ್ನಾಟಕ ಆರೋಗ್ಯ ಸಚಿವ ಡಾ ಸುಧಾಕರ್ ಕೆ ಸೇರಿದಂತೆ ಹಲವಾರು ಟಾಲಿವುಡ್ ಸೆಲೆಬ್ರಿಟಿಗಳು ಮತ್ತು ರಾಜಕೀಯ ವ್ಯಕ್ತಿಗಳು, ಶಿವರಾಜಕುಮಾರ್, ಅಲ್ಲು ಅರ್ಜುನ್ ಮತ್ತು ಚಿರಂಜೀವಿ ಕೊನಿಡೇಲಾ ಸೇರಿದಂತೆ ಇತರೆ ನಟರು ಸಂತಾಪ ಸೂಚಿಸಿದ್ದಾರೆ.
ನಟ ತಾರಕರತ್ನ ಅವರು ಬೆಂಗಳೂರಿನ ನಾರಾಯಣ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್‌ನಲ್ಲಿ ಕೊನೆಯುಸಿರೆಳೆದರು, ಹಾರ್ಟ್ ಅಟ್ಯಾಕ್‌ಗೆ ಒಳಗಾದ ಅವರನ್ನು ಜನವರಿ 27 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ 39 ವರ್ಷವಯಸ್ಸಾಗಿದೆ. ತಾರಕರತ್ನ ಅವರ ನಿಧನ ಮಾಜಿ ಮುಖ್ಯಮಂತ್ರಿ ಎನ್‌ಟಿ ರಾಮರಾವ್ ಅವರ ಕುಟುಂಬವನ್ನೇ ಕತ್ತಲೆಯಲ್ಲಿ ಮುಳುಗಿಸಿದೆ.
ಇದನ್ನೂ ಓದಿ: ಓ.. ʼಕಾಂತಾರʼದಲ್ಲಿ ಮೂಡಿತು ಪ್ರಜಾಕೀಯ ಚುನಾವಣಾ ಪ್ರಚಾರ..! ವಿಡಿಯೋ ನೋಡಿ
ತಾರಕ ರತ್ನ ಕುಟುಂಬದ ಹಿನ್ನೆಲೆ : ಫೆಬ್ರವರಿ 22, 1983 ರಂದು ಜನಿಸಿದ ತಾರಕ ರತ್ನ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿಯ ಸಂಸ್ಥಾಪಕ ಎನ್‌ಟಿ ರಾಮರಾವ್ ಅವರ ಮೊಮ್ಮಗ. ಅವರು ಜನಪ್ರಿಯ ನಟರಾದ ಜೂನಿಯರ್ ಎನ್‌ಟಿಆರ್ ಮತ್ತು ಕಲ್ಯಾಣ್ ರಾಮ್ ಅವರ ಸೋದರಸಂಬಂಧಿ. 2002 ರಲ್ಲಿ, ಎ ಕೋದಂಡರಾಮಿ ರೆಡ್ಡಿ ಅವರ ನಿರ್ದೇಶನದಲ್ಲಿ, ರತ್ನ ಅವರು 'ಒಕಾಟೋ ನಂಬರ್ ಕುರ್ರಾಡು' ಚಿತ್ರದಲ್ಲಿ ತಮ್ಮ ಮೊದಲ ನಟನೆಯನ್ನು ಮಾಡಿದರು.
ಅಂದಿನಿಂದ, ಅವರು ವಿವಿಧ ತೆಲುಗು ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. 2022 ರಲ್ಲಿ, ಅವರು "9 ಅವರ್ಸ್" ವೆಬ್ ಸರಣಿಯೊಂದಿಗೆ ತಮ್ಮ OTT ಗೆ ಪಾದಾರ್ಪಣೆ ಮಾಡಿದರು. ನಂದಮೂರಿ ನಾಯಕ ನಟನಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅಮರಾವತಿಯಲ್ಲಿ (2009) ಪ್ರತಿಸ್ಪರ್ಧಿಯಾಗಿ ಅವರ ಪಾತ್ರ ವ್ಯಾಪಕವಾಗಿ ಮೆಚ್ಚುಗೆ ಪಡೆಯಿತು. ನಂದಮೂರಿ ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.