ಕಿರಿಕ್ ಪಾರ್ಟಿ ಸಿನಿಮಾ 2016ರಲ್ಲಿ ತೆರೆಕಂಡು ಸೃಷ್ಟಿಸಿದ ಸಕ್ಸಸ್ ಅಲೆ ಮಾತ್ರ ಭರ್ಜರಿ ಬಿಡಿ. ಕಿರಿಕ್ ಪಾರ್ಟಿ ಚಿತ್ರ ಎಂದಿಗೂ ಹಸಿರೇ. ಸಿನಿಮಾದಲ್ಲಿನ ಸ್ಟೋರಿಯ ಗಮ್ಮತ್ತು ಆಗಾಗ ನಮ್ಮನ್ನ ಕಾಡುತ್ತಲೇ ಇರುತ್ತೆ. ಒಮ್ಮೊಮ್ಮೆ ಈ ಚಿತ್ರದ ಬಗ್ಗೆ ಮಾತನಾಡುವಾಗ ಛೇ ಆ ರೀತಿ ಆಗ್ಬಾರ್ದಿತ್ತು, ಹೀರೋಯಿನ್ ಸಾಯಬಾರ್ದಿತ್ತು ಅಂತ ಮಾತಾಡೋದು ಇದೆ. ಯಾಕಂದ್ರೆ ಈ ಸಿನಿಮಾದ ಹ್ಯಾಂಗ್ ಓವರ್ ಯಾವತ್ತಿಗೂ ಕಮ್ಮಿಯಾಗಲ್ಲ. ಈ ಸಿನಿಮಾ ಮೂಲಕ ಹಲವಾರು ಅದ್ಭುತ ಕಲಾವಿದರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಒಳ್ಳೆ ನೇಮ್ ಫೇಮ್ ಸಿಕ್ಕಿದೆ. ಅದರಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರು ಎಂದರೆ  ಈಗಿನ ಕೊಡಗಿನ ಬೆಡಗಿ, ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ.


COMMERCIAL BREAK
SCROLL TO CONTINUE READING

ಅದ್ಯಾಕೋ ಗೊತ್ತಿಲ್ಲ, ಕಿರಿಕ್ ಬೆಡಗಿ ಆಗಿ ಪರಿಚಯಗೊಂಡು ನ್ಯಾಷನಲ್ ಕ್ರಶ್ ಆಗಿ ಬೆಳೆದಿರುವ ರಶ್ಮಿಕಾ ಮಂದಣ್ಣ, ಟ್ರೋಲಿಗರಿಗೆ ಒಳ್ಳೆ ಫುಡ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಕುಂತರೂ ನಿಂತರೂ ಟ್ರೋಲ್ ಆಗುತ್ತಲೇ ಇರುತ್ತಾರೆ. ಈ ನೋವನ್ನ ಅಲ್ಲಲ್ಲಿ ರಶ್ಮಿಕಾ ಹೇಳಿಕೊಂಡಿದ್ದೂ ಇದೆ.


ಇದನ್ನೂ ಓದಿ- ನಾನು ಅವರ ಸಿನಿಮಾ ಮಾಡಲ್ಲ ಅಂತ ಹೇಳಿದ್ದೆ.. ಅವರೇ ಬಲವಂತ ಮಾಡಿದ್ರು..!


ಈಗ ಏನಪ್ಪಾ ಕಹಾನಿ ಅಂದ್ರೆ ಅದ್ಯಾಕೋ ಏನೋ ರಶ್ಮಿಕಾಗೆ ನಾನು ಕನ್ನಡತಿ, ನನ್ನನ್ನ ಚಿತ್ರರಂಗಕ್ಕೆ ಪರಿಚಯ ಮಾಡಿದ್ದು ಚಂದನವನ ಅನ್ನೋದನ್ನ ಹೇಳಿಕೊಳ್ಳಲು ಮುಜುಗರವೆನಿಸುತ್ತಿದೆ ಅನಿಸುತ್ತೆ. ನಾವು ಬೆಳೆದು ಬಂದ ಹಾದಿಯನ್ನ ಯಾವತ್ತೂ ಮರಿಯಬಾರದು ಅಂತಾರೆ. ಆದ್ರೆ ರಶ್ಮಿಕಾ ಇದನ್ನ ಮರೆತರಲ್ಲ ಸರ್ ಅಂತ  ಜೀ ಕನ್ನಡ ನ್ಯೂಸ್ ಕಾಂತಾರ ನಟ ಪ್ರಮೋದ್ ಶೆಟ್ಟಿ ಅವರನ್ನ ಕೇಳಿದ್ರೆ ಅವರು ಕೊಟ್ಟ ಉತ್ತರ ಕೇಳಿದ್ರೆ ನೀವು ಶಾಕ್ ಆಗ್ತೀರಾ..?  


ಹಿಂಗಾ ಶಾಕ್ ಕೊಡೋದು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ...?


ಯಾರೇ ಆಗಲಿ ಅವರು ಎಷ್ಟೇ ದೊಡ್ಡ ನಟರಾದರೂ ನಮ್ಮ ಕನ್ನಡನಾಡಿನ ಬಗ್ಗೆ ಅವರಿಗೆ ಹೆಮ್ಮೆ ಇದ್ದರೆ ಮಾತ್ರ ನಮ್ಮ ಕನ್ನಡಿಗರು ಗೌರವ ಕೊಟ್ಟು ಮೆರೆಸುತ್ತಾರೆ. ಇಲ್ಲವಾದರೆ ಉಗಿದು ಉಪ್ಪಿನಕಾಯಿ ಹಾಕುತ್ತಾರೆ. ಅದ್ಯಾಕೋ ರಶ್ಮಿಕಾ ಮಂದಣ್ಣ ಕೂಡ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನಾದ್ರೂ ಆಟಿಟ್ಯೂಡ್ ಬಿಟ್ಟಾಕು ಕಿರಿಕ್ ರಶ್ಮಿಕಾ ಮಂದಣ್ಣ ಅಂತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.