ಹಿಂಗಾ ಶಾಕ್ ಕೊಡೋದು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ...?

ಹರಿಪ್ರಿಯಾ.. ಸ್ಯಾಂಡಲ್​ವುಡ್​​ನ ನೀರ್​ದೋಸೆ ಬೆಡಗಿ.. ಫಿಲ್ಟರ್​ ಇಲ್ಲದೆ ಡೈಲಾಗ್​ ಹೊಡೆದು, ಪಡ್ಡೆ ಹೈಕ್ಳ ಎದೆ ಲಬ್​ ಡಬ್ ಎನ್ನುವಂತೆ ನಟಿಸೋ ಚೆಲುವೆ. ಈಕೆಯ ಸೌಂದರ್ಯಕ್ಕೆ ತುಸು ನೊಂದು ಬೆಂದ ಹರೆಯದ ಗಂಡ್ ಹೈಕ್ಳು ಬೊಗಸೆ ತುಂಬಾ ಆಸೆ ತುಂಬಿಕೊಂಡು ಓಡಾಡುತ್ತಾರೆ. ಹರಿಪ್ರಿಯಾಗಾಗಿ ಅದೆಷ್ಟೋ ಹುಡುಗರ ಹೃದಯ ಹಪಹಪಿಸಿದೆಯೋ ಗೊತ್ತಿಲ್ಲ. ಆದ್ರೆ ಇಷ್ಟು ದಿನ ಯಾರ ಕೈಗೂ ಸಿಗದೆ ಚಿಟ್ಟೆಯಂತೆ ಹಾರಾಡ್ತಿದ್ದ ಹರಿಪ್ರಿಯಾ ಈಗ ಮದುವೆ ಆಗುತ್ತಿದ್ದಾರಾ..? 

Written by - YASHODHA POOJARI | Edited by - Yashaswini V | Last Updated : Nov 29, 2022, 11:00 AM IST
  • ಹರಿಪ್ರಿಯಾ ಇತ್ತೀಚೆಗಷ್ಟೆ ತನ್ನ ನೀರ್​ದೋಸೆಯಂತ ಮೃದಯವಾದ ಮೂಗಿಗೆ ಮೂಗುತಿ ಚುಚ್ಚಿಸಿಕೊಂಡಿದ್ರು.
  • ಈ ವೀಡಿಯೋದಲ್ಲಿ ಹರಿಪ್ರಿಯಾ ಮದುವೆ ಆಗೋ ಹುಡುಗನ ಸುಳಿವು ಇದೆ ಅಂತ ಗಾಂಧಿನಗರದಲ್ಲಿ ಟಾಕ್ ಶುರುವಾಗಿದೆ.
  • ವೀಡಿಯೋವನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ಆ ಸುಳಿವು ಗೊತ್ತಾಗುತ್ತೆ.
ಹಿಂಗಾ ಶಾಕ್ ಕೊಡೋದು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ...?  title=
Haripriya- Vasishta Simha

 ಕಂಚಿನ ಕಂಠದ ನಾಯಕ ಕಮ್ ಗಾಯಕ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಮದ್ವೆ ಆಗ್ತಾರೆ ಅನ್ನೋ ಗಾಸಿಪ್ ಗುಲ್ಲೆದಿದ್ದೆ.. ಡಿಸೆಂಬರ್ ನಲ್ಲಿ ಈ ಜೋಡಿ ನಿಶ್ಚಿತಾರ್ಥ ಆಗ್ತಾರೆ, ಮುಂದಿನ ವರ್ಷ ಮದ್ವೆ ಕೂಡ ಆಗ್ತಾರೆ ಅನ್ನೋ ಮಾತಿದೆ.. ಅದ್ರೆ ಈ ವಿಚಾರ ನಿಜಾನೋ ಸುಳ್ಳೋ ಅನ್ನೋದರ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ.. ಹಾಗಾದ್ರೆ  ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮದ್ವೆ ಬಗ್ಗೆ ಹರಿ ದಾಡ್ತಿರೋ ವಿಚಾರದ ಹಿಂದಿನ ಅಸಲಿಯತ್ತೇನು..? ನಿಜಕ್ಕೂ ಈ ಜೋಡಿ ಮದುವೆ ಮಾತು ಮುನ್ನೆಲೆಗೆ ಬಂದಿದ್ದು ಯಾಕೇ ಅಂತ ನೋಡೋಣ... 

ಹರಿಪ್ರಿಯಾ.. ಸ್ಯಾಂಡಲ್​ವುಡ್​​ನ ನೀರ್​ದೋಸೆ ಬೆಡಗಿ.. ಫಿಲ್ಟರ್​ ಇಲ್ಲದೆ ಡೈಲಾಗ್​ ಹೊಡೆದು, ಪಡ್ಡೆ ಹೈಕ್ಳ ಎದೆ ಲಬ್​ ಡಬ್ ಎನ್ನುವಂತೆ ನಟಿಸೋ ಚೆಲುವೆ. ಈಕೆಯ ಸೌಂದರ್ಯಕ್ಕೆ ತುಸು ನೊಂದು ಬೆಂದ ಹರೆಯದ ಗಂಡ್ ಹೈಕ್ಳು ಬೊಗಸೆ ತುಂಬಾ ಆಸೆ ತುಂಬಿಕೊಂಡು ಓಡಾಡುತ್ತಾರೆ. ಹರಿಪ್ರಿಯಾಗಾಗಿ ಅದೆಷ್ಟೋ ಹುಡುಗರ ಹೃದಯ ಹಪಹಪಿಸಿದೆಯೋ ಗೊತ್ತಿಲ್ಲ. ಆದ್ರೆ ಇಷ್ಟು ದಿನ ಯಾರ ಕೈಗೂ ಸಿಗದೆ ಚಿಟ್ಟೆಯಂತೆ ಹಾರಾಡ್ತಿದ್ದ ಹರಿಪ್ರಿಯಾ ಈಗ ಮದುವೆ ಆಗುತ್ತಿದ್ದಾರಾ..? ಗಾಂಧಿನಗರದಲ್ಲಿ  ಹೀಗೊಂದು ಗುಲ್ಲು ಸಖತ್ ಸದ್ದು ಮಾಡ್ತಿದೆ.

ಇಷ್ಟು ದಿನ ನೀರ್​ ದೋಸೆ ಚೆಲುವೆ ನಾನು ಸಿಂಗಲ್​ ಸಿಂಗಲ್ ಎನ್ನುತ್ತಿದ್ರು. ಆದ್ರೆ ಈಗ ಹರಿಪ್ರಿಯಾ ನೀರ್​ದೋಸೆಗೆ ಆಲೂಗೆಡ್ಡ ಪಲ್ಯದಂತ  ಹುಡುಗ ಸಿಕ್ಕಿದ್ದಾನಂತೆ. ಹರಿಪ್ರಿಯಾ ಇನ್ನೆರಡು ತಿಂಗಳಲ್ಲಿ ಮದುವೆನೂ ಅಗುತ್ತಿದ್ದಾರಂತೆ. ಹೀಗೊಂದು ಸುದ್ದಿ ಹರಿದಾಡುತ್ತಿದೆ. ಅದು, ಇತ್ತೀಚೆಗಷ್ಟೆ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡ ವೀಡಿಯೋ ಒಂದು ವೈರಲ್ ಆದ ಮೇಲೆ ಹರಿಪ್ರಿಯಾ ಮದುವೆ ಸುದ್ದಿ ಮುನ್ನೆಲೆಗೆ ಬಂದಿದೆ. 

 
 
 
 

 
 
 
 
 
 
 
 
 
 
 

A post shared by Hariprriya (@iamhariprriya)

ಇದನ್ನೂ ಓದಿ- Katrina Kaif : ತುಂಡ್‌ ಹೈಕ್ಳ ಹೃದಯ ಘಾಸಿಗೊಳಿಸಿದ ಕ್ಯಾಟ್‌ ಖತರ್ನಾಕ್ ಮೈಮಾಟ

 

ಹರಿಪ್ರಿಯಾ ಇತ್ತೀಚೆಗಷ್ಟೆ ತನ್ನ ನೀರ್​ದೋಸೆಯಂತ ಮೃದಯವಾದ ಮೂಗಿಗೆ ಮೂಗುತಿ ಚುಚ್ಚಿಸಿಕೊಂಡಿದ್ರು. ಈ ವೀಡಿಯೋದಲ್ಲಿ ಹರಿಪ್ರಿಯಾ ಮದುವೆ ಆಗೋ ಹುಡುಗನ ಸುಳಿವು ಇದೆ ಅಂತ ಗಾಂಧಿನಗರದಲ್ಲಿ ಟಾಕ್ ಶುರುವಾಗಿದೆ. ವೀಡಿಯೋವನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ಆ ಸುಳಿವು ಗೊತ್ತಾಗುತ್ತೆ. ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುವಾಗ ಮೂಗುತಿ ಎಲ್ಲಿರಬೇಕು ಅಂತ ಪಕ್ಕದಲ್ಲಿರೋ ಹುಡುಗನೊಬ್ಬ ಮಾರ್ಕ್ ಮಾಡಿ ತೋರಿಸ್ತಾರೆ. ಅಷ್ಟೆ ಅಲ್ಲ ಹರಿಪ್ರಿಯಾ ಅವರಿಗೆ ಮೂಗು ಚುಚ್ಚಿದ ಬಳಿಕ ನೋವಿನಿಂದ ಆಳುತ್ತಾರೆ. ಆಗ ಪಕ್ಕದಲ್ಲೇ ಇದ್ದ ಹುಡುಗ ಹರಿಪ್ರಿಯಾರನ್ನ ಅಪ್ಪಿಕೊಂಡು ಹಣೆಗೆ ಮುತ್ತಿಡುತ್ತಾರೆ. ಸಮಾಧಾನ ಮಾಡುತ್ತಾರೆ. ಆ ಹುಡುಗ ಯಾರು ಅಂತ ಸೂಕ್ಷ್ಮವಾಗಿ ಗಮನಿಸಿದ್ರೆ ಅಲ್ಲಿ ಕಾಣಿಸೋದು ಕಂಚಿನ ಕಂಠದ ನಟ ಸ್ಯಾಂಡಲ್​ವುಡ್​​ನ ಚಿಟ್ಟೆ ವಸಿಷ್ಠ ಸಿಂಹ.. 

ಸ್ಯಾಂಡಲ್​ವುಡ್​​ನಲ್ಲಿ ಹರಿಪ್ರಿಯಾ- ವಸಿಷ್ಠ ಸಿಂಹ ಜೋಡಿ ತಾರಾ ದಂಪತಿಗಳಾಗುತ್ತಿದ್ದಾರಾ.? ಹೌದು, ಎನ್ನುತ್ತಿವೆ ಹರಿಪ್ರಿಯಾ, ವಸಿಷ್ಠ ಸಿಂಹ ಆಪ್ತ ಮೂಲಗಳು. ಇವರಿಬ್ಬರು ಯಾರಿಗೂ ಗೊತ್ತಾಗದ ಹಾಗೆ ಲವ್ ಮಾಡುತ್ತಿದ್ದಾರಂತೆ. ಆದ್ರೆ ಹರಿಪಪ್ರಿಯ ಮಾತ್ರ ಇಬ್ಬರ ಲವ್ ಸೀಕ್ರೆಟ್ ​​​ಅನ್ನ ಗೊತ್ತಾಗೋಕೆ ಮತ್ತೊಂದು ಸುಳಿವು ನೀಡಿದ್ದಾರೆ. ಅದು ತನ್ನ ಇನ್ಸ್​​​ಸ್ಟಾ ಗ್ರಾಂ ಖಾತೆಯಲ್ಲಿ ವಸಿಷ್ಠ ಸಿಂಹನ ಜತೆ ಡಾನ್ಸ್ ಮಾಡೋ ವೀಡಿಯೋ ಹಂಚಿಕೊಂಡು ಇವರು ನನ್ನ ಪಾರ್ಟ್ನರ್​, ಜೊತೆಗಾರ ಅಂತ ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Hariprriya (@iamhariprriya)

ಇದನ್ನೂ ಓದಿ- ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದೇ ವಸಿಷ್ಠ ಸಿಂಹನಿಗಾಗಿ.. ಆಗಿದ್ರೆ ಮದುವೆ ಫಿಕ್ಸ್‌ ಆಯ್ತಾ..!

ಏತನ್ಮಧ್ಯೆ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿರುವ ಈ ಸ್ಯಾಂಡಲ್ ವುಡ್  ಪ್ರಣಯ ಪಕ್ಷಿಗಳು ದುಬೈ ಪ್ರವಾಸಕ್ಕೆ ಹಾರಿದ್ದಾರೆ. 

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಎಂಗೇಜ್​ಮೆಂಟ್​ ಶೀಘ್ರದಲ್ಲೇ ನಡೆಯಲಿದೆ ಹಾಗೂ ಅದರ ಸಲುವಾಗಿ ಈಗಾಗಲೇ ಇಬ್ಬರೂ ಶಾಪಿಂಗ್​ ಕೂಡ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಸಿನಿಮಾ ಕಾರ್ಯಕ್ರಮ, ಶೂಟಿಂಗ್​​ನಲ್ಲಿ ಸಿಕ್ಕಿದ್ದ ಈ ಜೋಡಿ ಮಧ್ಯೆ ಪ್ರೀತಿ ಚಿಗುರಿದೆಯಂತೆ. ಆದ್ರೆ ಈ ಗಾಸಿಪ್​ ಬಗ್ಗೆ ಹರಿಪ್ರಿಯಾ ಅಗ್ಲಿ ವಸಿಷ್ಠ ಸಿಂಹ ಅವರಾಗಲಿ ಅಧಿಕೃತವಾಗಿ ಎಲ್ಲಿಯೂ ಮಾತಾಡಿಲ್ಲ. ಅಲ್ಲದೆ ಈ ಬಗ್ಗೆ ವಶಿಷ್ಠ ಆಪ್ತರನ್ನು ಕೆದಕಿದಾಗ ವಸಿಷ್ಠ ಹಾಗೂ ಹರಿಪ್ರಿಯಾ ಲವ್ ಮಾಡ್ತಿದ್ದಾರೆ.. ಮದುವೆ ಆಗ್ತಾರೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ.. ಇದೆಲ್ಲ ಸುಳ್ಳು.. ಮನೆಯಲ್ಲಿ ವಶಿಷ್ಠ ಸಿಂಹಗೆಮದುವೆ ಮಾಡಲು ಸಿದ್ದರಿದ್ದಾರೆ .. ಅಲ್ಲದೆ ಹೆಣ್ಣನ್ನು ಕೂಡ ನೋಡ್ತಿದ್ದಾರೆ.. ಇದೆಲ್ಲ ಗಾಳಿ ಸುದ್ದಿ ಅಂತ ಹೇಳಿದ್ದಾರೆ.. ಅದ್ರೆ ಈ ಸುದ್ದಿ ಸಖತ್ ವೈರಲ್ ಆಗಿದ್ದು, ಈ ವದಂತಿಗಳಿಗೆಲ್ಲಾ ತೆರೆ ಎಳೆದು ಇದೊಂದು ಸುಳ್ಳು ಸುದ್ದಿ ಅಂತಾರಾ... ಅಥವಾ  ವಸಿಷ್ಠ ಹಾಗೂ ಹರಿಪ್ರಿಯಾ ಒಬ್ಬರನ್ನೊಬ್ಬರು ಕೈ ಹಿಡಿದು ಹೊಸ ಬಾಳಿಗೆ ಎಂಟ್ರಿ ಕೊಡ್ತಾರಾ ಅಂತ ಕಾದು ನೋಡಬೇಕು..

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

  

Trending News